Karnataka logo

Karnataka Tourism
GO UP

ಗೋಕಾಕ್ ಜಲಪಾತ

separator
ಕೆಳಗೆ ಸ್ಕ್ರಾಲ್ ಮಾಡಿ

ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಜಲಪಾತ ಉತ್ತರ ಕರ್ನಾಟಕದ ಜನಪ್ರಿಯ ಜಲಪಾತಗಳಲ್ಲಿ ಒಂದಾಗಿದೆ. ಗೋಕಾಕ್ ಜಲಪಾತವು ಹೆದ್ದಾರಿಗೆ ಹತ್ತಿರದಲ್ಲಿದೆ ಮತ್ತು ಪ್ರವೇಶಿಸಲು ಸುಲಭವಾಗಿದೆ.

ಘಟಪ್ರಭಾ ನದಿ ಕುದುರೆಯ ಲಾಳದ  ಆಕಾರದ ಬಂಡೆಯ ಮೇಲ್ಭಾಗದಿಂದ ಸುಮಾರು 52 ಮೀಟರ್ ಎತ್ತರದಿಂದ ಧುಮುಕಿದಾಗ ಗೋಕಾಕ್ ಜಲಪಾತವು ರೂಪುಗೊಳ್ಳುತ್ತದೆ. ಇತರ ಜಲಪಾತಗಳಿಗೆ ಹೋಲಿಸಿದರೆ ಗೋಕಾಕ ಜಲಪಾತ ಸಾಕಷ್ಟು ಅಗಲವಿದ್ದು (ಒಟ್ಟು 177 ಮೀಟರ್) ದೂರದಿಂದ ನೋಡಿದರೂ ತುಂಬಾ ರಮಣೀಯವಾಗಿ ಕಾಣಿಸುತ್ತದೆ ಮತ್ತು ಜಲಪಾತದ ಭೋರ್ಗೆರೆತ ದೂರದಿಂದಲೇ ಕೇಳಿಸುತ್ತದೆ.  

ಗೋಕಾಕ್ ಜಲಪಾತವನ್ನು ಭೇಟಿ ನೀಡಲು ಕಾರಣಗಳು:

  • ತೂಗು ಸೇತುವೆ: 200 ಮೀಟರ್ ಉದ್ದದ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆ ಗೋಕಾಕ್ ಜಲಪಾತದ ಎತ್ತರದ ನೋಟವನ್ನು ನೀಡುತ್ತದೆ.
  • ಚಾಲುಕ್ಯ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಭಗವಾನ್ ಮಹಾಲಿಂಗೇಶ್ವರ ದೇವಸ್ಥಾನ.
  • ಕೆಂಪಲ್ ಸಸ್ಯ ಉದ್ಯಾನ
  • ಯೋಗಿ ಕೊಳ್ಳ ಚಾರಣ: ಗೊಕಾಕ್ ಜಲಪಾತದಿಂದ 3 ಕಿ.ಮೀ ದೂರದಲ್ಲಿರುವ ಜನಪ್ರಿಯ ಚಾರಣ ತಾಣ.
  • ಮಲ್ಲಪ್ರಭಾ ಬೋಟಿಂಗ್: ಮಾರ್ಕಂಡೇಯ ನದಿಯಲ್ಲಿ ಬೋಟಿಂಗ್ ವಿಹಾರ ಮಾಡಬಹುದಾಗಿದೆ, ಗೋಕಾಕ್ ಜಲಪಾತದಿಂದ 8 ಕಿ.ಮೀ. ದೂರದಲ್ಲಿದೆ. 
  • ದೇವಾಲಯಗಳು: ಯೋಗಿಕೊಳ್ಳ ಮಲ್ಲಿಕರ್ಜುನ ದೇವಸ್ಥಾನ, ಕರಿಯಮ್ಮ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ, ಹನುಮಾನ್ ದೇವಾಲಯ ಇತ್ಯಾದಿ. 

ಹತ್ತಿರದಲ್ಲಿ ಇನ್ನೇನಿದೆ? ಗೋಕಾಕ್ ಜಲಪಾತದ ಜೊತೆಗೆ ಗೋಡಚಿನಮಲ್ಕಿ ಜಲಪಾತಗಳು (ಗೋಕಾಕ್ ಜಲಪಾತದಿಂದ 13 ಕಿ.ಮೀ) ಮತ್ತು ಸೌಂಡಟ್ಟಿ ಯೆಲ್ಲಮ್ಮ (73 ಕಿ.ಮೀ) ಕ್ಷೇತ್ರಕ್ಕೆ ಭೇಟಿ ಕೊಡಬಹುದಾಗಿದೆ. 

ಗೋಕಾಕ್ ಜಲಪಾತವನ್ನು ತಲುಪುವುದು ಹೇಗೆ?

 ಗೋಕಾಕ್ ಜಲಪಾತ ಬೆಂಗಳೂರಿನಿಂದ 622 ಕಿ.ಮೀ ಮತ್ತು ಬೆಳಗಾವಿಯಿಂದ 62 ಕಿ.ಮೀ ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪ್ರಮುಖ ರೈಲು ನಿಲ್ದಾಣವಾಗಿದೆ. ಬೆಳಗಾವಿ ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಬೆಳಗಾವಿಯಿಂದ ಟ್ಯಾಕ್ಸಿ ಪಡೆದು ಗೋಕಾಕ್ ಜಲಪಾತವನ್ನು ತಲುಪಬಹುದಾಗಿದೆ. 

ವಸತಿ: ಜಲಪಾತದಿಂದ 6 ಕಿ.ಮೀ ದೂರದಲ್ಲಿರುವ ಗೋಕಾಕ್ ನಗರದಲ್ಲಿ ಬಜೆಟ್ ಹೋಟೆಲ್‌ಗಳಿವೆ. ಬೆಳಗಾವಿ ನಗರವು ಹೆಚ್ಚಿನ ವಸತಿ ಗೃಹಗಳ ಆಯ್ಕೆಗಳನ್ನು ಹೊಂದಿದೆ.

Tour Location

Leave a Reply

Accommodation
Meals
Overall
Transport
Value for Money