ಗುಡಿಬಂಡೆ ಚಾರಣ
ಗುಡಿಬಂಡೆ ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಸುಂದರ ತಾಣವಾಗಿದೆ, ಇದು ಕಲ್ಲಿನ ಕೋಟೆ, ಅದ್ಭುತ ನೋಟಗಳು ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಗುಡಿಬಂಡೆ 17 ನೇ ಶತಮಾನದ ಕೋಟೆಯಾಗಿದ್ದು ಸ್ಥಳೀಯ ಆಡಳಿತಗಾರ ಬೈರೆ ಗೌಡ ನಿರ್ಮಿಸಿದ.
ಗುಡಿಬಂಡೆಯ ಪ್ರಮುಖ ಆಕರ್ಷಣೆಗಳು:
- ಸುಲಭ ಚಾರಣ: ಗುಡಿಬಂಡೆಯ ತುದಿ ತಲುಪುವುದು ಅಷ್ಟೇನೂ ಕಷ್ಟವಲ್ಲದ್ದರಿಂದ ಕುಟುಂಬದ ಪ್ರತಿಯೊಬ್ಬರೂ ಪಾಲ್ಗೊಳ್ಳಬಹುದಾಗಿದೆ/
- ಶಿವ ದೇವಸ್ಥಾನ: ಚೋಳ ರಾಜರ ಅವಧಿಯಲ್ಲಿ ಲಕ್ಷ್ಮಿ ವೆಂಕಟ ರಾಮಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದೆ.
- ಬೈರೆ ಗೌಡ ಸ್ಥಾಪಿಸಿದ ಬೈರಸಾಗರ ಸರೋವರ ಮೇಲಿನಿಂದ ಸುಂದರವಾಗಿ ಕಾಣಿಸುತ್ತದೆ.
- ಗುಪ್ತ ಮಾರ್ಗ: ತಪ್ಪಿಸಿಕೊಳ್ಳುವ ಉದ್ದೇಶಕ್ಕಾಗಿ ಮಾಡಿದ ಗುಪ್ತ ಮಾರ್ಗಗಳ ಸಂಕೀರ್ಣ ಜಾಲವನ್ನು ನೋಡಬಹುದಾಗಿದೆ.
- 17 ನೇ ಶತಮಾನದಲ್ಲಿ ಮಳೆ ನೀರನ್ನು ಕೊಯ್ಲು ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಕೋಟೆಯಲ್ಲಿ 19 ಕಲ್ಲು ಕೊಳಗಳು ಒಂದಕ್ಕೊಂದು ಸಂಪರ್ಕ ಹೊಂದಿ ಒಟ್ಟಿಗೆ ಮೂರು ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ.
- ತಂಪಾದ ಗಾಳಿಯೊಂದಿಗೆ ನಗರದ ಮತ್ತು ಕೆಳಗಿನ ಬೈರಸಾಗರ ಸರೋವರದ ಸುಂದರ ನೋಟಗಳು
ಗುಡಿಬಂಡೆಯ ಮೇಲೆ ಏರಲು ಆದ ದಣಿವನ್ನು ಕ್ಷಣಾರ್ಧದಲ್ಲಿ ಹೋಗಲಾಡಿಸುತ್ತವೆ.
ಗುಡಿಬಂಡೆ ಬಳಿ ಯಾವುದೇ ಅಂಗಡಿಗಳು ಅಥವಾ ಸೌಲಭ್ಯಗಳು ಲಭ್ಯವಿಲ್ಲ. ನೀರಿನಂತಹ ಅಗತ್ಯ ವಸ್ತುಗಳನ್ನು ಜೊತೆಗೆ ಒಯ್ಯುವುದು ಉತ್ತಮ. ಗುಡಿಬಂಡೆ ಮತ್ತು ಹತ್ತಿರದ ಆಕರ್ಷಣೆಗಳು ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿವೆ.
ಹತ್ತಿರ: ಭೋಗನಂದೀಶ್ವರ ದೇವಸ್ಥಾನ (45 ಕಿ.ಮೀ), ಅವಲಬೆಟ್ಟ (20 ಕಿ.ಮೀ), ದಂಡಿಗನಹಳ್ಳಿ ಅಣೆಕಟ್ಟು (40 ಕಿ.ಮೀ), ಘಾಟಿ ಸುಬ್ರಮಣ್ಯ ದೇವಸ್ಥಾನ (55 ಕಿ.ಮೀ), ಮುದ್ದೇನಹಳ್ಳಿ (40 ಕಿ.ಮೀ) ಮತ್ತು ನಂದಿ ಬೆಟ್ಟಗಳು (62 ಕಿ.ಮೀ) ಗುಡಿಬಂಡೆ ಜೊತೆಗೆ ಭೇಟಿ ನೀಡಬಹುದಾದ ಹತ್ತಿರದ ಪ್ರವಾಸಿ ತಾಣಗಳಾಗಿವೆ.
ಗುಡಿಬಂಡೆಯನ್ನು ತಲುಪುವುದು ಹೇಗೆ? ಗುಡಿಬಂಡೆ ಬೆಂಗಳೂರಿನಿಂದ 92 ಕಿ.ಮೀ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ 70 ಕಿ.ಮೀ ದೂರದಲ್ಲಿದೆ. ಗೌರಿಬಿದನೂರು ಹತ್ತಿರದ ನಗರ ಮತ್ತು ರೈಲ್ವೆ ನಿಲ್ದಾಣವಾಗಿದೆ (ಗುಡಿಬಂಡೆಯಿಂದ 30 ಕಿ.ಮೀ) ಅಲ್ಲಿಂದ ಗುಡಿಬಂಡೆ ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.