Karnataka logo

Karnataka Tourism
GO UP

ಗದಗ

separator
ಕೆಳಗೆ ಸ್ಕ್ರಾಲ್ ಮಾಡಿ

1997 ರಲ್ಲಿ ಧಾರವಾಡ ಜಿಲ್ಲೆಯಿಂದ ಬೇರ್ಪಡಿಸಿ ಗದಗ ಜಿಲ್ಲೆಯನ್ನು ರಚಿಸಲಾಯಿತು. ಗದಗವು ದಕ್ಷಿಣದಲ್ಲಿ ಹಾವೇರಿ, ಪಶ್ಚಿಮದಲ್ಲಿ ಧಾರವಾಡ, ವಾಯುವ್ಯದಲ್ಲಿ ಬೆಳಗಾವಿ, ಉತ್ತರದಲ್ಲಿ ಬಾಗಲಕೋಟೆ, ಪೂರ್ವದಲ್ಲಿ ಕೊಪ್ಪಳ ಮತ್ತು ಆಗ್ನೇಯದಲ್ಲಿ ಬಳ್ಳಾರಿಯಿಂದ ಸುತ್ತುವರೆದಿದೆ. ದಂತಕಥೆಗಳ ಪ್ರಕಾರ, ಗದಗವು ಜನಮೇಜಯ ಸ್ಥಾಪಿಸಿದ ಮಹಾ ಅಗ್ರಹಾರಗಳಲ್ಲಿ ಒಂದಾಗಿದೆ ಮತ್ತು 72 ಮಹಾಜನಗಳೊಂದಿಗೆ ಉನ್ನತ ಶಿಕ್ಷಣದ ಪ್ರಸಿದ್ಧ ಸ್ಥಾನವಾಗಿತ್ತು. ಗದಗವು ಮುದ್ರಣಾಲಯಗಳು ಮತ್ತು ಕೈಮಗ್ಗಗಳಿಗೆ ಹೆಸರುವಾಸಿಯಾಗಿದೆ. ಗದಗದ ಬಗ್ಗೆ ಒಂದು ದಂತಕಥೆಯಿದೆ, ನೀವು ಪಟ್ಟಣದಲ್ಲಿ ಕಲ್ಲು ಎಸೆದರೆ ಅದು ಮುದ್ರಣಾಲಯದಲ್ಲಿ ಅಥವಾ ಕೈಮಗ್ಗದಲ್ಲಿ ಬೀಳುತ್ತದೆ. ಗದಗವು ಬಹಳಷ್ಟು ಮುದ್ರಣಾಲಯಗಳನ್ನು ಹೊಂದಿದ್ದು, ಪಕ್ಕದ ಪಟ್ಟಣವಾದ ಬೆಟಗೇರಿ ಕೈಮಗ್ಗಗಳಿಗೆ ಹೆಸರುವಾಸಿಯಾಗಿದೆ. ಗದಗದ ಮೂಲಕ ಉತ್ತರದ ಗಡಿಯಲ್ಲಿ ಮಲಪ್ರಭಾ ಮತ್ತು ದಕ್ಷಿಣ ಗಡಿಯಲ್ಲಿ ತುಂಗಭದ್ರಾ ಹೀಗೆ ಎರಡು ಪ್ರಮುಖ ನದಿಗಳು ಹರಿಯುತ್ತವೆ. ಪ್ರಮುಖ ಬೆಳೆಗಳಲ್ಲಿ ಗೋಧಿ, ಜೋಳ, ಮೆಕ್ಕೆ ಜೋಳ ಕಡಲೆ, ಹೆಸರು, ನೆಲಗಡಲೆ, ಸೂರ್ಯಕಾಂತಿ, ಕಬ್ಬು ಮತ್ತು ಹತ್ತಿ ಸೇರಿವೆ.

ಅನೇಕ ಶತಮಾನಗಳಿಂದಲೂ, ಗದಗವು ಕಲೆ ಮತ್ತು ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಗುರುತು ಹೊಂದಿದೆ. ಗದಗವು ತಕ್ಷಣವೇ ಕರ್ನಾಟಕ ಭರತ ಕಥಾ ಮಂಜರಿಯ(ಇದು ಕನ್ನಡದ ಶ್ರೇಷ್ಠ ಮಹಾಭಾರತ) ಲೇಖಕ ಕುಮಾರವ್ಯಾಸ ಎಂದು ಕರೆಯಲ್ಪಡುವ ನಾರಾಯಣಪ್ಪನ ಹೆಸರನ್ನು ನೆನಪಿಗೆ ತರುತ್ತದೆ . ಗದಗವು ಪ್ರಸಿದ್ಧ ಅಂಧ ಗಾಯಕ ಪಂಡಿತ್ ಗಾನಯೋಗಿ ಪಂಚಾಕ್ಷರಿ ಗವಾಯಿ ಮತ್ತು ಅವರ ಸಂಗೀತ ಶಾಲೆ ವೀರೇಶ್ವರ ಪುಣ್ಯಾಶ್ರಮಕ್ಕೂ ನೆಲೆಯಾಗಿದೆ. ಗದಗವು ಉತ್ತರ ಕರ್ನಾಟಕದ ಹಿಂದೂಸ್ತಾನಿ ಸಂಗೀತದ ಪ್ರಮುಖ ಸ್ಥಾನವಾಗಿದೆ. ಇದು ಅಪ್ರತಿಮ ಹಿಂದೂಸ್ತಾನಿ ಗಾಯಕ ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಶಿ ಮತ್ತು ಪಂಡಿತ್ ಪುಟ್ಟರಾಜ್ ಗವಾಯಿ ಅವರ ನೆಲೆಯಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪ್ರಿಯ ನಾಟಕಕಾರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀ.ಹುಯಿಲ್ಗೋಳ್ ನಾರಾಯಣ್ ರಾವ್ ಕೂಡ ಗದಗ ಮೂಲದವರು. ಹಿಂದೂ ಧರ್ಮದ ವೀರಶೈವ ಪ೦ಗಡದ ತೋಂಟದಾರ್ಯ ಮಠವು ಗದಗ ಮತ್ತು ಸುತ್ತಮುತ್ತಲು ಅನೇಕ ಶೈಕ್ಷಣಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 

ತ್ರಿಕುಟೇಶ್ವರ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ದಂಬಲ್, ಲಕ್ಕುಂಡಿ ಮತ್ತು ಮಾಗಡಿ ಪಕ್ಷಿಧಾಮಗಳು ಈ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಗದಗಿನ ದೇವಾಲಯಗಳು ಕಲ್ಯಾಣ ಚಾಲುಕ್ಯನ್ ಕಲೆಯ ಕೆಲವು ಅತ್ಯುತ್ತಮ ಉದಾಹರಣೆಗಳನ್ನು ಪ್ರತಿನಿಧಿಸುತ್ತವೆ.

ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಭೀಮಸೇನ್ ಜೋಶಿ ಗದಗ ಜಿಲ್ಲೆಯವರು. ಲಕ್ಕುಂಡಿ ಉತ್ಸವ ಇಲ್ಲಿನ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮ.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ   ಕ್ಲಿಕ್ ಮಾಡಿ

ಐತಿಹಾಸಿಕ ತಾಣಗಳು
  • ನರಗುಂದ: ಗದಗದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನರಗುಂದವು ಕೋಟೆಯೊಂದಿಗೆ ಬೆಟ್ಟವನ್ನು ಹೊಂದಿದೆ. ಈ ಸ್ಥಳಕ್ಕೆ ನರಿ ಮತ್ತು ಕುಂಡಾ (ಬೆಟ್ಟ) ದಿಂದ ಈ ಹೆಸರು ಬಂದಿದೆ ಎಂದು ನಂಬಲಾಗಿದೆ. ಇದು ರಾಷ್ಟ್ರಕೂಟ ಕಾಲದಿಂದ ಪ್ರಾರಂಭವಾಗಿ 1000 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಸ್ಥಳವಾಗಿದೆ. ಇದರ ಆಧುನಿಕ ಇತಿಹಾಸವು 1674 ರಿಂದ ಶಿವಾಜಿ ಮಹಾರಾಜ್ ಇಲ್ಲಿ ಕೋಟೆಯನ್ನು ನಿರ್ಮಿಸಿದಾಗ ಪ್ರಾರಂಭವಾಗುತ್ತದೆ. 1857-58ರಲ್ಲಿ ಬ್ರಿಟಿಷರ ವಿರುದ್ಧದ ದಂಗೆಯಲ್ಲಿ, ನರಗುಂದದ ಮುಖ್ಯಸ್ಥ ಭಾಸ್ಕರ್ ರಾವ್ ಅವರು ದಂಗೆ ಎದ್ದ "ಬಾಂಬೆ-ಕರ್ನಾಟಕ ಮುಖ್ಯಸ್ಥರಲ್ಲಿ ಅತ್ಯಂತ ಬುದ್ಧಿವಂತರು" ಎಂದು ಬಣ್ಣಿಸಲಾಗಿದೆ.
  • ಗಜೇಂದ್ರಗಡ ಕೋಟೆ:
  • ಗದಗದಿಂದ 55 ಕಿ.ಮೀ. ದೂರದಲ್ಲಿರುವ ಶಿವಾಜಿ ಕೋಟೆ ಮತ್ತು ಕಾಲಕಾಲೇಶ್ವರ ದೇವಸ್ಥಾನಕ್ಕೆ ಜನಪ್ರಿಯವಾಗಿರುವ ಗದಗದ ಎರಡನೇ ಅತಿದೊಡ್ಡ ನಗರ.
  • ಸೂಡಿ:ಹಲವಾರು ಚಾಲುಕ್ಯ ಯುಗದ ಸ್ಮಾರಕಗಳು ಮತ್ತು ಅವಳಿ ಗೋಪುರ ಹೊಂದಿರುವ ಮಲ್ಲಿಕಾರ್ಜುನ ದೇವಸ್ಥಾನಗಳಿರುವ ಈ ಊರು ಗದಗದಿಂದ 50 ಕಿ.ಮೀ ದೂರದಲ್ಲಿದೆ.
ಧಾರ್ಮಿಕ ಸ್ಥಳಗಳು
  • ತ್ರಿಕುಟೇಶ್ವರ ದೇವಸ್ಥಾನ: ಗದಗದ ಪ್ರಮುಖ ಆಕರ್ಷಣೆ ತ್ರಿಕುಟೇಶ್ವರ ದೇವಸ್ಥಾನವಾಗಿದ್ದು ಅದು ದೊಡ್ಡ ಸಂಕೀರ್ಣದಲ್ಲಿದೆ. ತ್ರಿಕುಟೇಶ್ವರ ಮತ್ತು ಸರಸ್ವತಿ ದೇವಾಲಯಗಳು ಈ ಸಂಕೀರ್ಣದಲ್ಲಿ ಒಂದಕ್ಕೊಂದು ಹೊಂದಿಕೊಂಡಿವೆ. ಒಂದು ಸಾಲಿನಲ್ಲಿ ಮೂರು ಈಶ್ವರ ಲಿಂಗಗಳನ್ನು ಹೊಂದಿರುವ ತ್ರಿಕುಟೇಶ್ವರ ವಾಸ್ತುಶಿಲ್ಪದ ಮಹತ್ವಪೂರ್ಣವಾದ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ರಾಷ್ಟ್ರಕೂಟ ದೇವಾಲಯವಾಗಿದೆ. ಹತ್ತಿರದಲ್ಲಿ ಸರಸ್ವತಿ ದೇವಿಯ  ಹಾನಿಗೊಳಗಾದ ವಿಗ್ರಹವಿರುವ ಸಣ್ಣ ದೇವಾಲಯವಿದೆ ಮತ್ತು ಇದು ಕಲ್ಯಾಣ ಚಾಲುಕ್ಯನ್ ಶೈಲಿಯಲ್ಲಿದೆ. ಇದು ಅದರ ಕೆತ್ತನೆಗಳು ಮತ್ತು ಸ್ತಂಭಗಳಿಗೆ ಹೆಸರುವಾಸಿಯಾಗಿದೆ; ಕಲ್ಯಾಣ ಚಾಲುಕ್ಯನ್ ಸ್ತಂಭಗಳಲ್ಲಿ ಕಂಬಗಳನ್ನು ಹೆಚ್ಚು ಅಲಂಕೃತಗೊಳಿಸಲಾಗುತ್ತದೆ. ಸೋಮೇಶ್ವರ ದೇವಸ್ಥಾನವು ಈಶ್ವರನಿಗೆ ಸಮರ್ಪಿಸಲಾದ ಚಾಲುಕ್ಯರ ನಂತರದ ದೇವಾಲಯವಾಗಿದೆ. ಈ ದೇವಾಲಯದ ಸಮೀಪ ಶಿಥಿಲವಾಗಿರುವ ರಾಮೇಶ್ವರ ದೇವಾಲಯವಿದೆ. ಸುಮಾರು 11 ನೇ ಶತಮಾನದಲ್ಲಿ ನಿರ್ಮಿಸಲಾದ ಕಲ್ಮೇಶ್ವರ ಎಂಬ ಮತ್ತೊಂದು ಪ್ರಾಚೀನ ದೇವಾಲಯವು ವಾಸ್ತುಶಿಲ್ಪದಲ್ಲಿ ಮಹತ್ವದ್ದಾಗಿದೆ ಮತ್ತು ಇದು ಬೆಟಗೇರಿಯಲ್ಲಿದೆ.
  • ವೀರನಾರಾಯಣ ದೇವಸ್ಥಾನ: ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾದ ವೀರನಾರಾಯಣ ದೇವಾಲಯವು ಸಾಕಷ್ಟು ದೊಡ್ಡದಾಗಿದೆ ಮತ್ತು ವಿಷ್ಣುವಿಗೆ ಅರ್ಪಿತವಾಗಿದೆ. ಒಂದು ಹೇಳಿಕೆಯ ಪ್ರಕಾರ, ಈ ದೇವಾಲಯವು ಇದು ಕ್ರಿ.ಶ 1117 ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ವೈಷ್ಣವ ಧರ್ಮವನ್ನು ಸ್ವೀಕರಿಸಿದ ನಂತರ ನಿರ್ಮಿಸಿದ ಬೇಲೂರು ಮತ್ತು ತಲಾಕಾಡಿನಂತೆ ಐದು ನಾರಾಯಣ ದೇವಾಲಯಗಳಲ್ಲಿ ಒಂದಾಗಿದೆ. ಪ್ರಸಿದ್ಧ ಕನ್ನಡ ಕವಿ ಮಹಾಕವಿ ಕುಮಾರವ್ಯಾಸ ಅವರು ಈ ದೇವಾಲಯದಲ್ಲಿ ತಮ್ಮ ಮಹಾಕಾವ್ಯ ಕರ್ನಾಟಕ ಭರತ ಕಥಾ ಮಂಜರಿಯನ್ನು(ಇದು ಕನ್ನಡದ ಶ್ರೇಷ್ಠ ಮಹಾಭಾರತ) ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಕುಮಾರವ್ಯಾಸ ಕಲ್ಯಾಣಮಂಟಪ, ಸರ್ಪೇಶ್ವರನಿಗೆ ಅರ್ಪಿತವಾದ ಸಣ್ಣ ದೇಗುಲ ಮತ್ತು ರಾಘವೇಂದ್ರಸ್ವಾಮಿಯ ಬೃಂದಾವನ ಈ ದೇವಾಲಯಕ್ಕೆ ಇತ್ತೀಚಿನ ಸೇರ್ಪಡೆಗಳಾಗಿವೆ.
  • ಲಕ್ಕುಂಡಿ: ಲಕ್ಕುಂಡಿ ಗದಗದ ಆಗ್ನೇಯಕ್ಕೆ 12 ಕಿ.ಮೀ ದೂರದಲ್ಲಿರುವ ಒಂದು ಸಾಧಾರಣ ಗ್ರಾಮವಾಗಿದ್ದು, ಇದು ಐತಿಹಾಸಿಕ ಮತ್ತು ಪುರಾತತ್ವ ಮಹತ್ವದ್ದಾಗಿದೆ. ಈ ಶಾಂತ ಗ್ರಾಮವು ಕಲ್ಯಾಣಿ ಚಾಲುಕ್ಯರ ಕಾಲದ 50 ಕ್ಕೂ ಹೆಚ್ಚು ದೇವಾಲಯಗಳು ಮತ್ತು 29 ಶಾಸನಗಳನ್ನು ಹೊಂದಿದೆ. ಈ ದೇವಾಲಯಗಳಲ್ಲಿ ಬಹುಪಾಲು ಹಾನಿಗೊಳಗಾದ ಸ್ಥಿತಿಯಲ್ಲಿದೆ ಮತ್ತು ಇವುಗಳಲ್ಲಿ ಕಾಶಿ ವಿಶ್ವೇಶ್ವರ ದೇವಾಲಯವು ಅತ್ಯಂತ ಸಂಕೀರ್ಣವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ ಮತ್ತು ಅದ್ಭುತ ರಚನೆಯನ್ನು ಹೊಂದಿದೆ. ಕಲ್ಯಾಣಿ ಚಾಲುಕ್ಯ ವಾಸ್ತುಶಿಲ್ಪಿಗಳು ಈ ದೇವಾಲಯದಲ್ಲಿ ವಾಸ್ತುಶಿಲ್ಪದಲ್ಲಿ ಉತ್ತುಂಗಕ್ಕೇರಿದ್ದಾರೆ ಮತ್ತು ಇದನ್ನು ಅಸ್ತಿತ್ವದಲ್ಲಿರುವ ಹಿಂದೂ ದೇವಾಲಯದ ಅಲಂಕಾರಿಕ ಕಾರ್ಯದ ಅತ್ಯುತ್ತಮ ಮಾದರಿ ಎಂದು ಪರಿಗಣಿಸಲಾಗಿದೆ. ದೇವಾಲಯದ ಕಲೆಯ ಹೊರತಾಗಿ, ಲಕ್ಕುಂಡಿ ಕೂಡ ಮೆಟ್ಟಿಲು ಬಾವಿಗಳಿಗೆ ಹೆಸರುವಾಸಿಯಾಗಿದೆ. ಇವುಗಳಲ್ಲಿ ಮಣಿಕೇಶ್ವರ ದೇವಸ್ಥಾನದ ಬಳಿಯಿರುವ “ಮುಸುಕಿನಾ ಭಾವಿ” ವಾಸ್ತುಶಿಲ್ಪದ ಆಸಕ್ತಿಯನ್ನು ಹೊಂದಿದೆ.
  • ದೊಡ್ಡಬಸಪ್ಪ ದೇವಸ್ಥಾನ, ದಂಬಲ್: ಗದಗಿನಿಂದ 21 ಕಿ.ಮೀ ದೂರದಲ್ಲಿರುವ ಹಳ್ಳಿ ದಂಬಲ್. ಈಶ್ವರನಿಗೆ ಮೀಸಲಾಗಿರುವ ದೊಡ್ಡಬಸಪ್ಪ ದೇವಾಲಯವು ವಾಸ್ತುಶಿಲ್ಪದಲ್ಲಿ ಮಹತ್ವದ್ದಾಗಿದೆ ಏಕೆಂದರೆ ಇದು ಗದಗ್ ಅಥವಾ ಲಕ್ಕುಂಡಿಯಲ್ಲಿ ಕಂಡುಬರುವ ಯಾವುದೇ ದೇವಾಲಯಕ್ಕಿಂತ ಭಿನ್ನವಾದ ಶೈಲಿಯಲ್ಲಿದೆ ಮತ್ತು ಅನೇಕ ಮೂಲೆಗಳನ್ನು ಹೊಂದಿರುವ ನಾಕ್ಷತ್ರಿಕ ಗರ್ಭಗೃಹವನ್ನು ಹೊಂದಿದೆ. ಸೋಮೇಶ್ವರಕ್ಕೆ ಸಮೀಪವಿರುವ ಮತ್ತೊಂದು ದೇವಾಲಯವು ಸ್ಥಳೀಯ ವ್ಯಾಪಾರಿಗಳು ಸ್ಥಾಪಿಸಿದರು ಎಂದು ಹೇಳಲಾಗುವ 11 ನೇ ಶತಮಾನದ ಜಿನಾಲಯ.
  • ರೋಣ: ಗದಗಿನಿಂದ 40 ಕಿ.ಮೀ ದೂರದಲ್ಲಿರುವ ರೋಣ ಹಲವಾರು ಐತಿಹಾಸಿಕ ದೇವಾಲಯಗಳಿಗೆ ನೆಲೆಯಾಗಿದೆ.
  • ಹೊಂಬಲ್: ಕಲ್ಯಾಣಿ ಚಾಲುಕ್ಯ ಯುಗದ ಶಂಕರ ದೇವಸ್ಥಾನಕ್ಕೆ ಜನಪ್ರಿಯವಾಗಿದೆ
  • ಕೊಣ್ಣೂರು: ಪರಮೇಶ್ವರ ಮತ್ತು ರಾಮೇಶ್ವರ ದೇವಾಲಯಗಳಿಗೆ ಜನಪ್ರಿಯವಾಗಿದೆ
  • ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಜಮ್ಮಾ ಮಸೀದಿಗಳಿವೆ 
ಇತರ ಆಕರ್ಷಣೆಗಳು
  • ಲಕ್ಕುಂಡಿ ಉತ್ಸವ: ಲಕ್ಕುಂಡಿ ಉತ್ಸವ (ಹಬ್ಬ) ಉತ್ತರ ಕರ್ನಾಟಕದ ಗದಗದ ಬಳಿಯ ಲಕ್ಕುಂಡಿ ಪಟ್ಟಣದಲ್ಲಿ ನಡೆಯುವ ವಾರ್ಷಿಕ ಹಬ್ಬ. ಲಕ್ಕುಂಡಿ ಉತ್ಸವವು ಪ್ರತಿವರ್ಷ ಫೆಬ್ರವರಿ/ಮಾರ್ಚ್‌ನಲ್ಲಿ ಬರುತ್ತದೆ. ಲಕ್ಕುಂಡಿ ಉತ್ಸವಕ್ಕೆ ಹಾಜರಾಗುವುದರಿಂದ ಪ್ರವಾಸಿಗರಿಗೆ ಕರ್ನಾಟಕದ ಸಾಂಸ್ಕೃತಿಕ ಪ್ರದರ್ಶನಗಳು, ನೃತ್ಯ ಮತ್ತು ಕಲಾ ಪ್ರಕಾರಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ. ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬಯಸುವ ವ್ಯಕ್ತಿಗಳು ಮತ್ತು ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ಮತ್ತು ಆಯ್ಕೆಯಾದ ಕಲಾವಿದರು ಮತ್ತು ಪ್ರದರ್ಶಕರು ಸಂದರ್ಶಕರನ್ನು ರಂಜಿಸುತ್ತಾರೆ ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುತ್ತಾರೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವು ಲಕ್ಕುಂಡಿ ಹಬ್ಬದ ಸಂಘಟನೆಯನ್ನು ನೋಡಿಕೊಳ್ಳುತ್ತದೆ.
  • ಭೀಷ್ಮ ಕೆರೆ: ಭೀಷ್ಮ ಕೆರೆ ಗದಗ ಪಟ್ಟಣದೊಳಗೆ ಮನರಂಜನಾ ಚಟುವಟಿಕೆಗಳನ್ನು ಹೊಂದಿರುವ ಸರೋವರವಾಗಿದೆ. ಗಂಗಾದೇವಿ ಮತ್ತು ಬಸವೇಶ್ವರ ಪ್ರತಿಮೆಗಳು ಭೀಷ್ಮ ಕೆರೆಯಲ್ಲಿವೆ. ಭೀಷ್ಮ ಕೆರೆಯಲ್ಲಿ ಬೋಟಿಂಗ್ ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಚಟುವಟಿಕೆಯಾಗಿದೆ.
  • ಕಪ್ಪಟ ಗುಡ್ಡ: ಮಧ್ಯಮ ಗಾತ್ರದ ಬೆಟ್ಟ (750 ಮೀಟರ್ ಎತ್ತರ) ಗದಗದಿಂದ 30 ಕಿ.ಮೀ.
  • ಸಿಂಗಟಾಲೂರು: ಸಿಂಗಟಾಲೂರು ತುಂಗಭದ್ರಾ ನದಿಯ ದಡದಲ್ಲಿರುವ ಒಂದು ಹಳ್ಳಿಯಾಗಿದ್ದು, ಗದಗ್ ನಗರದಿಂದ 57 ಕಿ.ಮೀ ದೂರದಲ್ಲಿದೆ, ಇದು ವೀರಭದ್ರೇಶ್ವರ ದೇವಸ್ಥಾನಕ್ಕೆ ಮತ್ತು ನದಿಯ ಉತ್ತಮ ನೋಟವನ್ನು ನೀಡುವ ವಾಚ್ ಟವರ್ ಗೆ ಹೆಸರುವಾಸಿಯಾಗಿದೆ.
  • ಶಿರಹಟ್ಟಿ:  ಇಲ್ಲಿ ಫಕೀರ್ ಸ್ವಾಮಿ ಮಠ ಮತ್ತು ಅವ್ವಲಿಂಗವ್ವ ಮಠವಿದೆ

Tour Location

ಗದಗ ಬೆಂಗಳೂರಿನಿಂದ 390 ಕಿ.ಮೀ ಮತ್ತು ಹುಬ್ಬಳ್ಳಿಯಿಂದ 63 ಕಿ.ಮೀ ದೂರದಲ್ಲಿದೆ.

ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣವಾಗಿದೆ ( 63 ಕಿ.ಮೀ)
ಗದಗದಲ್ಲಿ  ರೈಲ್ವೆ ನಿಲ್ದಾಣ ಇದೆ ಮತ್ತು ನಾಡಿನ ಪ್ರಮುಖ ಪಟ್ಟಣಗಳಿಂದ ಉತ್ತಮ ರೈಲು  ಸಂಪರ್ಕ ಹೊಂದಿದೆ
ಗದಗ ತಲುಪಲು ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರಮುಖ ನಗರಗಳಿಂದ ಕೆಎಸ್‌ಆರ್‌ಟಿಸಿ  (ಕ.ರಾ.ರ.ಸಾ.ಸಂ) ಮತ್ತು ಖಾಸಗಿ ಬಸ್ ಸಂಪರ್ಕವಿದೆ.
ಸ್ಥಳೀಯ ಪ್ರಯಾಣಕ್ಕೆ ಆಟೊಗಳು ಹೆಚ್ಚು ಸೂಕ್ತವಾಗಿವೆ. ಜಿಲ್ಲೆಯ ವಿವಿಧ ಆಕರ್ಷಣೆಯನ್ನು ತಲುಪಲು ಪ್ರಮುಖ ಪಟ್ಟಣಗಳಾದ ಗದಗ, ಲಕ್ಕುಂಡಿ, ನರಗುಂಡ ಮತ್ತು ಗಜೇಂದ್ರಗಡಗಳಿಂದ ಕಾರು ಬಾಡಿಗೆಗೆ ಪಡೆಯಬಹುದಾಗಿದೆ.
ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು ಕೇಶವ ಕ್ಲಾರ್ಕ್ಸ್ ಇನ್ ಕಡಿಮೆ ಖರ್ಚಿನ ವಸತಿ (ಬಜೆಟ್) ಆಯ್ಕೆಗಳು ನಕ್ಷತ್ರ ಕಂಫರ್ಟ್ಸ್ ಹೋಟೆಲ್ ಮೌರ್ಯ ಶಿವರತ್ನ ಪ್ಯಾಲೇಸ್ ಗೀತಾಂಜಲಿ ರೆಸಿಡೆನ್ಸಿ