Karnataka logo

Karnataka Tourism
GO UP

ಕರ್ನಾಟಕದಲ್ಲಿ ಶಾಪಿಂಗ್

separator
ಕೆಳಗೆ ಸ್ಕ್ರಾಲ್ ಮಾಡಿ

ಮೈಸೂರಿನಲ್ಲಿ ಶಾಪಿಂಗ್

ಸುಂದರವಾದ, ಮಾಲಿನ್ಯ ಮುಕ್ತ, ಶಾಂತ ನಗರಿ ಮೈಸೂರು ನೀವು ಶಾಪಿಂಗ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದಾದ ಸ್ಥಳಗಳಲ್ಲಿ ಒಂದಾಗಿದೆ. ವಯಸ್ಕರು ಮತ್ತು ಮಕ್ಕಳಿಗಾಗಿ ಶಾಪಿಂಗ್ ಆಯ್ಕೆಗಳೊಂದಿಗೆ, ಮೈಸೂರಿನಿಂದ ಹಿಂತಿರುಗುವಾಗ ತೆಗೆದುಕೊಂಡು ಹೋಗಬಹುದಾದ ಹಲವು ಅಮೂಲ್ಯ ವಸ್ತುಗಳು ಮೈಸೂರಿನಲ್ಲಿ ಸಿಗುತ್ತವೆ.  

 

  • ಮೈಸೂರು ರೇಷ್ಮೆ: ಹೆಂಗಸರು ಮತ್ತು ಹೆಂಡತಿಯರನ್ನು ಪ್ರೀತಿಸುವ ಗಂಡಂದಿರು ತಪ್ಪದೇ ಖರೀದಿಸಬಯಸುವ ವಸ್ತು ಮೈಸೂರು ರೇಷ್ಮೆ ಸೀರೆ. ಮಲ್ಬೆರಿ ರೇಷ್ಮೆಯಿಂದ ನೇಯ್ಗೆ ಮಾಡಲ್ಪಟ್ಟ ಮೈಸೂರು ಸಿಲ್ಕ್ ಸಂಕೀರ್ಣವಾದ ವಿನ್ಯಾಸಗಳು ಮತ್ತು ಕಲಾಕೃತಿಗಳಿಗೆ ಹೆಸರುವಾಸಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಮೃದುವಾದ, ತಿಳಿ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ ಮತ್ತು ಯಾವುದೇ ಸಂದರ್ಭಕ್ಕೂ ಸೂಕ್ತವಾದ ವಿವಿಧ ರೋಮಾಂಚಕ ಬಣ್ಣಗಳಿಂದ ಗಮನ ಸೆಳೆಯುತ್ತವೆ. ಮೈಸೂರು ಸಿಲ್ಕ್ ಮತ್ತು ಅದರ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಸೈಟ್‌ಗೆ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ 

 

  • ಮೈಸೂರು ಪಾಕ್: ಸಕ್ಕರೆ ಪಾಕ, ಕಡಲೆ ಹಿಟ್ಟು ಮತ್ತು ರುಚಿಯಾದ ಸುಗಂಧ ನೀಡಲು ಸೇರಿಸಲಾದ ಘಮಘಮಿಸುವ ತುಪ್ಪದಿಂದ ತಯಾರಾದ  ಮೈಸೂರು ಪಾಕ್ ಎಲ್ಲರಿಗೂ ಅಚ್ಚುಮೆಚ್ಚು. ಬಾಯಲ್ಲಿ ನೀರೂರಿಸುವ, ಬಾಯಲ್ಲಿಟ್ಟರೆ ಹಾಗೇ ನಯವಾಗಿ ಕರಗುವ ಮೈಸೂರು ಪಾಕ್ ಬಹುತೇಕ ಎಲ್ಲಾ ಸಿಹಿ ಅಂಗಡಿಗಳಲ್ಲಿ ಲಭ್ಯವಿದೆ

 

ಈ ಸಿಹಿತಿಂಡಿಯನ್ನು ಮೊದಲು ಅರಮನೆಯ ಅಡಿಗೆಮನೆಗಳಲ್ಲಿ ತಯಾರಿಸಲಾಯಿತೆಂದು ಇತಿಹಾಸವು ಹೇಳುತ್ತದೆ ಮತ್ತು ಅಂದಿನ ರಾಜನಿಗೆ ನೀಡಲಾದಾಗ ಅದರ ರುಚಿಕೆ ಮನಸೋತು ಮೆಚ್ಚುಗೆ ಸೂಚಿಸಿದರು. ಇಂದು ಮೈಸೂರು ಪಾಕ್ ಜಗತ್ಪ್ರಸಿದ್ಧಿಯಾಗುತ್ತದೆ ಎಂಬ ಕಲ್ಪನೆ ಇದನ್ನು ಕಂಡುಹಿಡಿದ ಬಾಣಸಿಗರಿಗೆ ಇರಲಿಲ್ಲ. 

 

  • ಮೈಸೂರು ಸ್ಯಾಂಡಲ್ ಸೋಪ್ ಮತ್ತು ಶ್ರೀಗಂಧದ ಎಣ್ಣೆ: ಸುಗಂಧ ಭರಿತ ಶ್ರೀಗಂಧದ ಸಾಬೂನು ಮತ್ತು ಎಣ್ಣೆ ಕರ್ನಾಟಕದ ಹೆಮ್ಮೆಯ ಉತ್ಪಾದನೆಯಾಗಿದೆ.  ಕರ್ನಾಟಕ ಶ್ರೀಗಂಧದ ಮರಗಳ ಬೀಡಾಗಿತ್ತು, ಗಂಧದ ಗುಡಿ ಎಂದು ಕರೆಸಿಕೊಳ್ಳುತ್ತಿತ್ತು.ಕರ್ನಾಟಕ ಸಾಬೂನು ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಎಂದು ಹೆಸರಿಸಲಾದ ಕಾರ್ಖಾನೆಯಲ್ಲಿ ಶ್ರೀಗಂಧದ ಎಣ್ಣೆಯನ್ನು ಮರದಿಂದ ಬಟ್ಟಿ ಇಳಿಸಿ ಸಾಬೂನು ತಯಾರಿಸಲು ಪ್ರಾರಂಭಿಸಿದರು, ಇದನ್ನು ಈಗ ದೇಶಾದ್ಯಂತ ‘ಮೈಸೂರು ಸ್ಯಾಂಡಲ್ ಸೋಪ್’ ಎಂದು ಕರೆಯಲಾಗುತ್ತದೆ.

 

  • ಮೈಸೂರು ವೀಳ್ಯದ ಎಲೆ: ಮೈಸೂರಿನ  ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ವೀಳ್ಯದ ಎಲೆಗಳು ಜನಜನಿತವಾಗಿವೆ.  ಮೈಸೂರು ಮಹಾರಾಜರ ಕಾಲದಲ್ಲಿ ಮೈಸೂರಿನಿಂದ ನಂಜನಗೂಡಿನ ವರೆಗಿನ ನೂರು ಎಕರೆ ಪ್ರದೇಶದಲ್ಲಿ ವೀಳ್ಯದ ಎಲೆಗಳನ್ನು ಬೆಳೆಯಲಾಗುತ್ತಿತ್ತು. ಈ ಹಸಿರು ಎಲೆಯ ವಿಶಿಷ್ಟ ರುಚಿ ಅದಕ್ಕೆ ‘ಮೈಸುರು ಚಿಗುರೆಲೆ’ ಎಂದು ಹೆಸರು ತಂದುಕೊಟ್ಟಿದೆ. ಮೈಸೂರು ವೀಳ್ಯದ ಎಲೆ ಹೇಗೆ ಪ್ರಸಿದ್ಧವಾಯಿತು ಎಂಬುದರ ಹಿಂದಿನ ಇತಿಹಾಸದ ಬಗ್ಗೆ ಇನ್ನಷ್ಟು ಓದಿ. ಇಲ್ಲಿ ಕ್ಲಿಕ್ ಮಾಡಿ   

 

ಮೈಸೂರು ಗಂಜಿಫಾ ಕಾರ್ಡ್‌ಗಳು:        

ಅತ್ಯಂತ ಪ್ರಸಿದ್ಧವಾದ ಕಾವೇರಿ ಕರಕುಶಲ ಎಂಪೋರಿಯಂನಲ್ಲಿ ಮಾರಾಟಕ್ಕಿರುವ ಈ ಕಾರ್ಡ್‌ಗಳನ್ನು ಮೊಘಲ್ ಅವಧಿಯಲ್ಲಿ ಆಟದ ಎಲೆಗಳಾಗಿ  ಬಳಸಲಾಗುತ್ತಿತ್ತು. ಈ ಕಾರ್ಡ್‌ಗಳು ಸಂಕೀರ್ಣವಾದ ಕೈಯಿಂದ ಚಿತ್ರಿಸಿದ ವಿನ್ಯಾಸಗಳನ್ನು ಹೊಂದಿವೆ. ಇನ್ನಷ್ಟು ತಿಳಿಯಿರಿ: ಇಲ್ಲಿ ಕ್ಲಿಕ್ ಮಾಡಿ 

 

 

ಮೈಸೂರು ಜಾಸ್ಮಿನ್:

ಮಲ್ಲಿಗೆ ಹೂವುಗಳು ಸೊಗಸಾದ, ಪರಿಮಳಮಯ ಹೂವುಗಳಾಗಿವೆ. 

ಕರ್ನಾಟಕದಲ್ಲಿ ಮೂರು ವಿಧದ ಮಲ್ಲಿಗೆ ಹೂವನ್ನು ಬೆಳೆಯುಲಾಗುತ್ತದೆ. ಮುಖ್ಯವಾಗಿ ಮೈಸೂರು ಮತ್ತು ಶ್ರೀರಂಗಪಟ್ಟಣದ ಕೆಲವು ಭಾಗಗಳಲ್ಲಿ ಇದನ್ನು ಮೈಸೂರು ಮಲ್ಲಿಗೆ ಎಂದು ಕರೆಯಲಾಗುತ್ತದೆ ಮತ್ತು ಇತರ ಎರಡು ಪ್ರಭೇದಗಳು ಹಡಗಲಿ ಮಲ್ಲಿಗೆ ಮತ್ತು ಉಡುಪಿ ಮಲ್ಲಿಗೆ. ಪೇಟೆಂಟ್ ಮಾಡಲಾದ ಮೈಸೂರು ಮಲ್ಲಿಗೆಯನ್ನು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಬಹುದಾಗಿದೆ. 

 

ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳು ಮತ್ತು ಬೀಟೆ ಮಂಟಪಗಳು:

ಹಿಂದೂ ದೇವತೆಗಳ ವರ್ಣಚಿತ್ರಗಳು ಮತ್ತು ರಾಜ ಸಂಪ್ರದಾಯದ ಮೇಲೆ ಕೇಂದ್ರೀಕರಿಸಿದ ಕೆಲವು ಸೊಗಸಾದ ಸಾಂಪ್ರದಾಯಿಕ ವರ್ಣಚಿತ್ರಗಳನ್ನು ಶಾಪಿಂಗ್ ಮಾಡಬಹುದಾಗಿದೆ. 

 

 ಮತ್ತೊಂದೆಡೆ ಬೀಟೆ ಮರದ ಮಂಟಪಗಳು, ಕೆತ್ತನೆಗಳು ವಿವಿಧ ಆಕಾರ, ಗಾತ್ರಗಳು ಮತ್ತು ಶೈಲಿಗಳಲ್ಲಿ  ಲಭ್ಯವಿದೆ. ಹೆಚ್ಚಿನ ವಿವರಗಳನ್ನು ಪಡೆಯಲು ಈ ಪುಟಕ್ಕೆ ಭೇಟಿ ನೀಡಿ. ಇಲ್ಲಿ ಕ್ಲಿಕ್ ಮಾಡಿ

 

 

ರಾಮನಗರದಲ್ಲಿ ಶಾಪಿಂಗ್:

ಮೈಸೂರು ಬಳಿ ಇರುವ ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ. ಮೈಸೂರು ಸೀರೆಗೆ ಬೇಕಾದ ರೇಷ್ಮೆ ರಾಮನಗರದಿಂದ ಸರಬರಾಜಾಗುತ್ತದೆ. ಇದಲ್ಲದೆ ಚನ್ನಪಟ್ಟಣದ ಮರದ ಆಟಿಕೆಗಳು ಮತ್ತು ಗೊಂಬೆಗಳನ್ನು ಸಹ ಇಲ್ಲಿ ತಯಾರಿಸಲಾಗುತ್ತದೆ. ಚನ್ನಪಟ್ಟಣ ಆಟಿಕೆಗಳು ಮತ್ತು ಗೊಂಬೆಗಳು ರಾಮನಗರದಲ್ಲಿ ಖರೀದಿಸಬಹುದಾದ ಪ್ರಮುಖ ತಯಾರಿಕೆಯಾಗಿದೆ. 

 

ಕೊಡಗಿನಲ್ಲಿ ಶಾಪಿಂಗ್:

ಸಮೃದ್ಧ ಕಾಫಿ ತೋಟಗಳು, ಪ್ರಶಾಂತ ವಾತಾವರಣ ಮತ್ತು ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ  ಕೊಡಗು  ಭಾರತದ ಭಾರತದ ಸ್ಕಾಟ್ಲೆಂಡ್ ಎಂದೂ ಕರೆಯಲ್ಪಡುತ್ತದೆ. ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಮೈಸೂರಿನಿಂದ ಸುಮಾರು 120 ಕಿ.ಮೀ ದೂರದಲ್ಲಿದೆ ಮತ್ತು ಒತ್ತಡ ರಹಿತ, ಮಾಲಿನ್ಯ ಮುಕ್ತ ಸಣ್ಣ ಅಥವಾ ದೀರ್ಘ ರಜೆ / ರಜಾದಿನವನ್ನು ಆನಂದಿಸಲು ಬಯಸಿದರೆ, ಭೇಟಿ ನೀಡಲು ಅತ್ಯುತ್ತಮ ಪ್ರವಾಸೀ ತಾಣವಾಗಿದೆ. ಕೊಡಗಿನಲ್ಲಿ ಖರೀದಿಸಬಹುದಾದ ಕೆಲವು ಪ್ರಮುಖ ವಸ್ತುಗಳು ಇಲ್ಲಿವೆ. 

  • ಮನೆಯಲ್ಲಿ ತಯಾರಿಸಿದ ವೈನ್
  • ಕಾಫಿ
  • ಮನೆಯಲ್ಲಿ  ತಯಾರಿಸಿದ ಚಾಕೊಲೇಟ್‌ಗಳು
  • ಮೆಣಸು
  • ಲವಂಗ 
  • ಟಿಬೆಟಿಯನ್ ಉಣ್ಣೆ ವಸ್ತುಗಳು / ಉತ್ಪನ್ನಗಳು
  • ನೈಸರ್ಗಿಕ ಜೇನುತುಪ್ಪ
  • ಅಡಿಕೆ 
  • ಕಿತ್ತಳೆ
  • ಗಿಡಮೂಲಿಕೆ ಉತ್ಪನ್ನಗಳು

 

ಚಿಕ್ಕಮಗಳೂರಿನಲ್ಲಿ ಶಾಪಿಂಗ್:

ಬೆಟ್ಟಗಳು, ಹೊಲಗಳು, ಎಸ್ಟೇಟುಗಳು  ಮತ್ತು ನೀವು ಪ್ರಕೃತಿಯನ್ನು ಆನಂದಿಸಬಹುದಾದ ಎಲ್ಲವನ್ನೂ ಒಳಗೊಂಡಿರುವ ಹಸಿರು ಬಣ್ಣದ ವಿಭಿನ್ನ ಛಾಯೆಗಳಿಂದ ಸುತ್ತುವರೆದಿರುವ ಚಿಕ್ಕಮಾಗಳೂರಿನಿಂದ ಮನೆಗೆ ಹಿಂತಿರುಗುವಾಗ ತೆಗೆದುಕೊಂಡು ಹೋಗಬಹುದಾದ ಪ್ರಮುಖ ವಸ್ತುಗಳು ಇಂತಿವೆ:

  • ಮನೆಯಲ್ಲಿ ತಯಾರಿಸಿದ ವೈನ್
  • ಕಾಫಿ
  • ಚಾಕೊಲೇಟ್
  • ಮಸಾಲೆ, ಕಾಳುಮೆಣಸು
  • ತೆಂಗಿನ ಎಣ್ಣೆ

 

ಶಿವಮೊಗ್ಗದಲ್ಲಿ ಶಾಪಿಂಗ್:

ಪಶ್ಚಿಮ ಘಟ್ಟದ ​​ಹೆಬ್ಬಾಗಿಲಾದ ಶಿವಮೊಗ್ಗ ಏಷ್ಯಾದ 2 ನೇ ಅತಿದೊಡ್ಡ ಜಲಪಾತವಾದ ಜೋಗ ಜಲಪಾತ ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯ, ಕೋಟೆ, ಅರಮನೆಗಳು, ಪಾರಂಪರಿಕ ತಾಣಗಳು, ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಶಿವಮೊಗ್ಗದಲ್ಲಿ ಖರೀದಿಸಬಹುದಾದ ಕೆಲವು ಪ್ರಸಿದ್ಧ ವಸ್ತುಗಳು ಇಲ್ಲಿವೆ: 

  • ಬೀಟೆ ಮರದ ಕೆತ್ತನೆಗಳು 
  • ಮರದ ಆಟಿಕೆಗಳು
  • ಕರಕುಶಲ ವಸ್ತುಗಳು
  • ಅಡಿಕೆ 
  • ಹಲಸು 
  • ಮಸಾಲೆಗಳು

 

ಮಂಡ್ಯ ಕರ್ನಾಟಕದಲ್ಲಿ ಶಾಪಿಂಗ್:

ಐತಿಹಾಸಿಕ ಮೌಲ್ಯದ ಶ್ರೀರಂಗಪಟ್ಟಣ, ಬೃಂದಾವನ್ ಉದ್ಯಾನಗಳು, ಕನ್ನಂಬಾಡಿ ಕಟ್ಟೆ,  ಹಿನ್ನೀರು, ವರುಣ ಸರೋವರದಲ್ಲಿ ಕೆಲವು ಮೋಜಿನ ಚಟುವಟಿಕೆಗಳು ಮತ್ತು ಸುಂದರವಾದ ಶಿವನಸಮುದ್ರ ಜಲಪಾತಕ್ಕೆ ಮಂಡ್ಯ ಹೆಸರುವಾಸಿಯಾಗಿದೆ. ಮಂಡ್ಯದಲ್ಲಿ ಖರೀದಿಸಬಹುದಾದ ಪ್ರಮುಖ ವಸ್ತುಗಳು ಇಂತಿವೆ: 

  • ಬೆಲ್ಲ
  • ಸಾವಯವ ಆಹಾರ ಬೆಳೆಗಳು 
  • ಕಬ್ಬು

 

ತುಮಕೂರು:

ತುಮಕೂರು ಏಷ್ಯಾದ ಅತಿದೊಡ್ಡ ಕೊಕ್ಕರೆ ಅಭಯಾರಣ್ಯ ಮತ್ತು ಏಷ್ಯಾದ ಅತಿದೊಡ್ಡ ಸೌರ ಉದ್ಯಾನವನಕ್ಕೆ ನೆಲೆಯಾಗಿದೆ. ಜಿಲ್ಲೆಯ ಪ್ರಸಿದ್ಧ ಉತ್ಪನ್ನಗಳು ಹೀಗಿವೆ: 

  • ಎಳನೀರು ಮತ್ತು ತೆಂಗಿನ ಉತ್ಪನ್ನಗಳು 
  • ಹೂಗಳು (ಎಲ್ಲಾ ಪ್ರಭೇದಗಳು)
  • ತಟ್ಟೆ ಇಡ್ಲಿ
  • ಹಬೆ ವಡೆ 

 

ಚಿಕ್ಕಬಳ್ಳಾಪುರ:

ಜಿಲ್ಲೆಯ ಮೂಲಕ ಪ್ರಯಾಣಿಸುವಾಗ ಪ್ರಕಾಶಮಾನವಾದ ಹಳದಿ ಮಾರಿಗೋಲ್ಡ್ ಹೂವುಗಳು, ತರಕಾರಿ ತೋಟಗಳು ಮತ್ತು ದ್ರಾಕ್ಷಿತೋಟಗಳ ಹಿತವಾದ ನೋಟವನ್ನು ಆನಂದಿಸಬಹುದಾಗಿದೆ. ಸುಂದರವಾದ ವೈನ್ ಪ್ರವಾಸವನ್ನು ಭೇಟಿ ಮಾಡಲು ಮತ್ತು ಆನಂದಿಸಲು ಕೆಲವು ದ್ರಾಕ್ಷಿತೋಟಗಳು ಇಲ್ಲಿವೆ.

  • ಎಸ್ಕೇಪ್ ದ್ರಾಕ್ಷಿತೋಟಗಳು
  • ನಂದಿ ವ್ಯಾಲಿ ವೈನರಿ ಪ್ರೈವೇಟ್ ಲಿಮಿಟೆಡ್ (ಕಿನ್ವಾ ವೈನ್ಯಾರ್ಡ್ಸ್)
  • ಎಸ್‌ಡಿಯು ವೈನರಿ

 

ಹಾಸನ: ಸೌತೆಕಾಯಿ

 

ಮಂಗಳೂರು, ಉಡುಪಿ ಮತ್ತು ಕಾರವಾರದಲ್ಲಿ ಶಾಪಿಂಗ್:

ಅಪ್ರತಿಮ ಯಾತ್ರಾ ಸ್ಥಳಗಳು, ಸುಂದರ ಕಡಲತೀರಗಳು ಮತ್ತು ಹಲವು ಬಾಯಲ್ಲಿ ನೀರೂರಿಸುವ  ಭಕ್ಷ್ಯಗಳಿಂದ ಪ್ರಸಿದ್ದವಾದ ಕರಾವಳಿ ಕರ್ನಾಟಕದಲ್ಲಿ ಖರೀದಿಸಬಹುದಾದ ತಿನಿಸುಗಳು, ವಸ್ತುಗಳು ಹೀಗಿವೆ:

  • ಉಡುಪಿ ರೇಷ್ಮೆ ಮತ್ತು ರೇಷ್ಮೆ  ಉತ್ಪನ್ನಗಳು, ರವಾ ದೋಸೆ, ಗಡ್ಬಡ್ ಐಸ್ ಕ್ರೀಮ್  ಮತ್ತು ಲೋಹದ ವಸ್ತುಗಳು
  • ಮಂಗಳೂರು-ಮಲ್ಲಿಗೆ
  • ಕುಂದಾಪುರ-ಬಂಗ್ಡಿ ಮೀನು
  • ಕಾರವಾರ-ಮೀನುಗಳು ಮತ್ತಿತರ ಮತ್ಸ್ಯಾಹಾರ 

 

ಉತ್ತರ ಕರ್ನಾಟಕದಲ್ಲಿ ಶಾಪಿಂಗ್

ಉತ್ತರ ಕರ್ನಾಟಕದಲ್ಲಿ ಹಲವು  ಪ್ರಮುಖ ಐತಿಹಾಸಿಕ ಸ್ಥಳಗಳಿವೆ. ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ಪರಂಪರೆಯ ತಾಣಗಳಿಗೆ ಹೆಸರುವಾಸಿಯಾಗಿದೆ.  ಕಲೆ ಮತ್ತು ಕರಕುಶಲತೆ, ರುಚಿಕರ  ಸಿಹಿತಿಂಡಿಗಳಿಗೆ ಪ್ರಸಿದ್ಧವಾಗಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಖರೀದಿಸ ಬಹುದಾದ ವಸ್ತುಗಳ ಪಟ್ಟಿ ಇಲ್ಲಿದೆ.

 

  • ಬಾಗಲಕೋಟೆ -ಇಳಕಲ್ಲು ಸೀರೆಗಳು / ಕೈಮಗ್ಗ, ವೈನ್
  • ಗೋಕಾಕ-ಕರದಂಟು, ಮರದ ಆಟಿಕೆಗಳು
  • ಬೆಳಗಾವಿ-ಕುಂದ
  • ಧಾರವಾಡ-ಪೇಡಾ 
  • ಬೀದರ್- ಬಿದಿರಿನ ಸಾಮಾನುಗಳು 
  • ಹಂಪಿ-ಲಂಬಾಣಿ ಆಭರಣಗಳು ಮತ್ತು ದಿರಿಸುಗಳು
  • ದಾಂಡೇಲಿ-ಮಸಾಲೆಗಳು
  • ಐಹೊಳೆ -ಅಮೀನಗಡ  ಕರದಂಟು
  • ಮಲೆನಾಡು-ಕಡುಬು
  • ಕೋಲಾರ-ಬಂಗಾರಪೇಟೆ ಚಾಟ್‌ಗಳು
 

Tour Location

 

Leave a Reply

Accommodation
Meals
Overall
Transport
Value for Money