Karnataka Tourism
GO UP

ಅತ್ತಿವೇರಿ

separator
ಕೆಳಗೆ ಸ್ಕ್ರಾಲ್ ಮಾಡಿ

ಅತ್ತಿವೇರಿ

ಅಟ್ಟಿವೇರಿ ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಪಕ್ಷಿಧಾಮಗಳಲ್ಲಿ ಒಂದಾಗಿದೆ, ಇದು 22 ಚದರ ಕಿ.ಮೀ ವಿಸ್ತಾರವಾಗಿದೆ ಮತ್ತು ಅಟ್ಟಿವೇರಿ ಸರೋವರದ ಸುತ್ತ ಕೇಂದ್ರೀಕೃತವಾಗಿದೆ. ಅತ್ತಿವೇರಿ ಪಕ್ಷಿಧಾಮವು ಸುಮಾರು 79 ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ, ನಿವಾಸಿ ಮತ್ತು ವಲಸಿ ಪಕ್ಷಿಗಳನ್ನು ಇಲ್ಲಿ  ಕಾಣಬಹುದಾಗಿದೆ.

ಅಟ್ಟಿವೇರಿ ಪಕ್ಷಿಧಾಮದ ಪ್ರಮುಖ ಆಕರ್ಷಣೆಗಳು:

  • ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳು: ಕಪ್ಪು ಐಬಿಸ್, ನೀರು ಕಾಗೆ, ಹಾರ್ನ್‌ಬಿಲ್ಸ್ (ಮಂಗಟ್ಟೆ), ಕಿಂಗ್‌ಫಿಶರ್ಸ್, ಸ್ಪೂನ್‌ಬಿಲ್, ಬಾರ್ನ್ ಸ್ವಾಲೋ, ಎಗ್ರೆಟ್ಸ್, ಬೀ-ಈಟರ್ಸ್ ಮತ್ತು ಗಿಳಿಗಳು. 
  • ಕಾಡು ಪ್ರಾಣಿಗಳು: ಕಾಡು ಹಂದಿ, ನರಿ, ಕಾಡು ಬೆಕ್ಕು, ಮುಂಗುಸಿ ಇತ್ಯಾದಿ. 

ಭೇಟಿ ನೀಡಲು ಉತ್ತಮ ಸಮಯ:

ಅಟ್ಟಿವೇರಿ ಪಕ್ಷಿಧಾಮವನ್ನು ನವೆಂಬರ್ ಮತ್ತು ಮಾರ್ಚ್ ನಡುವೆ ಭೇಟಿ ನೀಡಿದರೆ ಸಾಮಾನ್ಯವಾಗಿ ಅತಿ ಹೆಚ್ಚು ಪಕ್ಷಿಗಳು ನೋಡಲು ಸಿಗುತ್ತವೆ. 

ಸಮಯ: ಅಟ್ಟಿವೇರಿ ಪಕ್ಷಿಧಾಮವು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

ಹತ್ತಿರದಲ್ಲಿ ಇನ್ನೇನಿವೆ:

ದಾಂಡೇಲಿ (75 ಕಿ.ಮೀ),  ಉಂಚಳ್ಳಿ ಜಲಪಾತ (107 ಕಿ.ಮೀ) ಮತ್ತು ಬನವಾಸಿ (70 ಕಿ.ಮೀ) ಅಟ್ಟಿವೇರಿ ಪಕ್ಷಿಧಾಮದ ಜೊತೆಗೆ ಭೇಟಿ ನೀಡಬಹುದಾದ ಇತರ ಆಸಕ್ತಿದಾಯಕ ತಾಣಗಳಾಗಿವೆ.

ತಲುಪುವುದು ಹೇಗೆ:

ಅಟ್ಟಿವೇರಿ ಪಕ್ಷಿಧಾಮವು ಬೆಂಗಳೂರಿನಿಂದ 400 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಕಾರವಾರದಿಂದ 150 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ  (53 ಕಿ.ಮೀ) ಮತ್ತು ರೈಲ್ವೆ ನಿಲ್ದಾಣವಾಗಿದೆ. (44 ಕಿ.ಮೀ) . ಅಟ್ಟಿವೇರಿ ಪಕ್ಷಿಧಾಮವನ್ನು ತಲುಪಲು ಹತ್ತಿರದ ಮುಂಡಗೋಡ್ ಪಟ್ಟಣದವರೆಗೆ ಸಾರ್ವಜನಿಕ ಸಾರಿಗೆ ಲಭ್ಯವಿದೆ. 

ವಸತಿ:

ಹುಬ್ಬಳ್ಳಿ ನಗರ (44 ಕಿ.ಮೀ)  ಹಲವು  ವಸತಿ ಸೌಕರ್ಯಗಳನ್ನು ಹೊಂದಿರುವ ಹತ್ತಿರದ ದೊಡ್ಡ ನಗರವಾಗಿದೆ.

Tour Location

Leave a Reply

Accommodation
Meals
Overall
Transport
Value for Money