Karnataka logo

Karnataka Tourism
GO UP

ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನ

separator
ಕೆಳಗೆ ಸ್ಕ್ರಾಲ್ ಮಾಡಿ

ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನ(ಝುವೋಲೊಜಿಕಲ್ ಪಾರ್ಕ್)

ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನ(ಝೂಲೊಜಿಕಲ್ ಪಾರ್ಕ್) ಬಳ್ಳಾರಿ ಜಿಲ್ಲೆಯಲ್ಲಿದೆ. ಇದು ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಆಗಿದೆ. ಈ ಉದ್ಯಾನವನ್ನು ನವೆಂಬರ್ 2017 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು UNESCO ಐತಿಹಾಸಿಕ ಸ್ಥಳವಾದ ಹಂಪಿಯಿಂದ 10 ಕಿ.ಮೀ ದೂರದಲ್ಲಿದೆ. ಸುಮಾರು 141 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನದಲ್ಲಿ ಹುಲಿ, ಸಿಂಹ, ಸ್ಪಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಮತ್ತು ಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಮತ್ತು ಲಂಗೂರ್ ಮುಂತಾದ ಹಲವಾರು ಪ್ರಾಣಿಗಳನ್ನು ಬಳ್ಳಾರಿ ಕಿರು ಮೃಗಾಲಯದಿಂದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನಕ್ಕೆ(ಝೂಲೊಜಿಕಲ್ ಪಾರ್ಕ್) ಸ್ಥಳಾಂತರಿಸಲಾಗಿದೆ.

ಮೃಗಾಲಯದ ಸಫಾರಿಯಲ್ಲಿ80 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, ನಾಲ್ಕು ಸಿಂಹಗಳು ಮತ್ತು ಅನೇಕ ಹುಲಿಗಳನ್ನು ಹೊಂದಿದೆ.

Quick Links

ಅವಲೋಕನ ಮಾರ್ಗದರ್ಶಿ

ಭೇಟಿ ನೀಡಲು ಅತ್ಯುತ್ತಮ ಸಮಯ

ಮಾರ್ಚ್ - ಜೂನ್

ಇದಕ್ಕೆ ಪ್ರಸಿದ್ಧವಾಗಿದೆ

ಈ ಉದ್ಯಾನವನವು ಹುಲಿಗಳು, ಸಿಂಹಗಳು, ವಿವಿಧ ಜಾತಿಯ ಪಕ್ಷಿಗಳು ಇತ್ಯಾದಿಗಳನ್ನು ಹೊಂದಿರುವ ಹೆಮ್ಮೆಯ ತಾಣವಾಗಿದೆ.

ವಸತಿ ಸ್ಥಳಗಳು

ಹಂಪಿಯಲ್ಲಿರುವ ಅತಿಥಿ ಗೃಹಗಳು ರೆಸಾರ್ಟ್‌ಗಳು ವಸತಿ ಸೌಕರ್ಯಗಳಿಗೆಉತ್ತಮವಾದವುಗಳಾಗಿವೆ

ತಲುಪುವುದು ಹೇಗೆ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್) ಹತ್ತಿರದ ವಿಮಾನ ನಿಲ್ದಾಣವಾಗಿದೆ (360 ಕಿ.ಮೀ)

ಹೊಸಪೇಟೆ ಜಂಕ್ಷನ್ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (16 ಕಿ.ಮೀ)

ಬೆಂಗಳೂರಿನಿಂದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನಕ್ಕೆ(ಝುವೋಲೊಜಿಕಲ್ ಪಾರ್ಕ್) 343 ಕಿ.ಮೀ ರಸ್ತೆಮಾರ್ಗವಾಗಿಯೂ ಬರಬಹುದು.

ಹತ್ತಿರದ ಸ್ಥಳಗಳು

ಪ್ರಾಣಿಶಾಸ್ತ್ರೀಯ ಉದ್ಯಾನದ(ಝುವೋಲೊಜಿಕಲ್ ಪಾರ್ಕ್) ಜೊತೆಗೆ ಕಲ್ಲಿನ ರಥ (10 ಕಿ.ಮೀ), ವಿರೂಪಾಕ್ಷ ದೇವಸ್ಥಾನ (9 ಕಿ.ಮೀ), ಯಂತ್ರೋದ್ಧಾರಕ ಹನುಮಾನ್ ದೇವಸ್ಥಾನ ಇವು ಭೇಟಿ ನೀಡಬಹುದಾದ ಇತರ ಆಕರ್ಷಣೆಗಳಾಗಿವೆ.

 

Tour Location

Leave a Reply

Accommodation
Meals
Overall
Transport
Value for Money