Karnataka Tourism
GO UP

ಹೆಬ್ಬೆ ಜಲಪಾತ

separator
ಕೆಳಗೆ ಸ್ಕ್ರಾಲ್ ಮಾಡಿ

ಹೆಬ್ಬೆ ಜಲಪಾತ:

ಹೆಬ್ಬೆ ಜಲಪಾತವು ಚಿಕ್ಕಮಗಳೂರು ಜಿಲ್ಲೆಯ ಅತ್ಯಂತ ಜನಪ್ರಿಯ ಜಲಪಾತವಾಗಿದೆ. ಹೆಬ್ಬೆ ಜಲಪಾತ 168 ಮೀಟರ್ ಎತ್ತರದಿಂದ ನೀರು ಧುಮುಕುತ್ತದೆ. ಜಲಪಾತವನ್ನು ತಲುಪಲು  ಬಯಸುವ ಪ್ರತಿಯೊಬ್ಬರಿಗೂ ಆಹ್ಲಾದಕರ ಅನುಭವವನ್ನು ನೀಡುತ್ತದೆ.

ಹೆಬ್ಬೆ ಜಲಪಾತದ ವಿಶೇಷತೆಗಳು:

  • ಅವಳಿ ಹಂತದ ಜಲಪಾತ: ಹೆಬ್ಬೆ ಜಲಪಾತದಲ್ಲಿ ಭದ್ರಾ ನದಿ ಎರಡು ಹಂತಗಳಲ್ಲಿ ಧುಮುಕುತ್ತದೆ. ಜಲಪಾತದ ಎರಡು ಭಾಗಗಳನ್ನು ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಕರೆಯಲಾಗುತ್ತದೆ. ಹೆಬ್ಬೆ ಜಲಪಾತದ ಮೇಲಿನ ಭಾಗವನ್ನು ತಲುಪಲು ಹೆಚ್ಚುವರಿ  ನಡೆಯುವ ಅಗತ್ಯವಿದೆ.
  • ಕೊಳ: ಜಲಪಾತದ ಕೆಳೆಗಿರುವ ಸಣ್ಣ ಕೊಳವು  ಇಳಿಯಲು  ಮತ್ತು ಈಜಲು ಸೂಕ್ತವಾಗಿದೆ.
  • ಛಾಯಾಗ್ರಾಹಕರ ನೆಚ್ಚಿನ ತಾಣ: ಹಸಿರು ಕಾಡುಗಳು ಮತ್ತು ಸುತ್ತಮುತ್ತಲಿನ ಕಲ್ಲು ಬಂಡೆಗಳಿಂದ ಕೂಡಿದ ಪ್ರದೇಶಗಳು, ಹೆಬ್ಬೆಯಲ್ಲಿನ ಮಂಜಿನ ಜಲಪಾತವು ಪ್ರತಿಯೊಬ್ಬ ಛಾಯಾಗ್ರಾಹಕ ಕರಿಗೆ ಆನಂದವನ್ನು ನೀಡುತ್ತದೆ.

ಭೇಟಿ ನೀಡಲು ಉತ್ತಮವಾದ ಸಮಯ: ಆಗಸ್ಟ್‌ನಿಂದ ಜನವರಿವರೆಗೆ  ಮಳೆಗಾಲದ ನಂತರ ಹೆಬ್ಬೆ ಜಲಪಾತವನ್ನು ಭೇಟಿ ಮಾಡಲು ಉತ್ತಮ ಸಮಯ. ಜಾರು ಬಂಡೆಗಳು, ಅತಿಯಾದ ಮಳೆ ಮತ್ತು ಜಿಗಣೆಗಳಿಂದಾಗಿ ಮಳೆಗಾಲಹೋಗದೆ ಇರುವುದೇ ಉತ್ತಮ.

ತಲುಪುವುದು ಹೇಗೆ: ಹೆಬ್ಬೆ ಜಲಪಾತ ಬೆಂಗಳೂರಿನಿಂದ 278 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ 65 ಕಿ.ಮೀ ದೂರದಲ್ಲಿದೆ. ತರಿಕೇರೆ ಹತ್ತಿರದ ರೈಲು ನಿಲ್ದಾಣ (35 ಕಿ.ಮೀ) ಮತ್ತು ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (222 ಕಿ.ಮೀ). ಹೆಬ್ಬೆ ಜಲಪಾತವನ್ನು ತಲುಪಲು ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಬರಬೇಕು. ಕೆಮ್ಮಣ್ಣುಗುಂಡಿಗೆ ತಲುಪಲು ಟ್ಯಾಕ್ಸಿಗಳನ್ನು ಬೀರೂರಿನಿಂದ  ಅಥವಾ ಚಿಕ್ಕಮಗಳೂರಿನಿಂದ ಬಾಡಿಗೆಗೆ ಪಡೆಯಬಹುದು. ಕೆಮ್ಮಣ್ಣುಗುಂಡಿಯಿಂದ ಕೊನೆಯ 7 ಕಿ.ಮೀ.ಗಳನ್ನು ಕಾಲ್ನಡಿಗೆಯಲ್ಲಿ ಅಥವಾ ಸ್ಥಳೀಯ 4×4 ಸೀಟಿನ ಜೀಪ್‌ಗಳನ್ನು ಬಾಡಿಗೆಗೆ ಪಡೆದು ಹೆಬ್ಬೆ ಜಲಪಾತವನ್ನು ತಲುಪಬೇಕು.

ಉಳಿಯಿರಿ: ಕೆಮ್ಮಣ್ಣುಗುಂಡಿಯಲ್ಲಿ ತೋಟಗಾರಿಕೆ ಇಲಾಖೆಯು ನಡೆಸುವ ಅತಿಥಿಗೃಹವಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಬ್ಬೆ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ಹಲವಾರು ಹೋಂ-ಸ್ಟೇಗಳು ಮತ್ತು ರೆಸಾರ್ಟ್‌ಗಳಿವೆ.

Tour Location

Leave a Reply

Accommodation
Meals
Overall
Transport
Value for Money