ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ
ಈ ಅಭಯಾರಣ್ಯದ ಹೃದಯಭಾಗದಲ್ಲಿರುವ ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿರುವ ಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ದೇವತೆ ಮೂಕಾಂಬಿಕಾ ದೇವತೆಯ ಹೆಸರನ್ನು ಇಡಲಾಗಿದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯವು 370.37 ಚದರ ಕಿ.ಮೀ.ವರೆಗೆ ವ್ಯಾಪಿಸಿದೆ ಮತ್ತು ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಎಲೆ ಉದುರುವ ಕಾಡುಗಳು ಮತ್ತು ತೇಗದ ತೋಟಗಳ ಸಣ್ಣ ಪಟ್ಟಿಗಳೊಂದಿಗೆ ದಟ್ಟವಾಗಿದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯವು ದಕ್ಷಿಣ ಭಾಗದಲ್ಲಿರುವ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಉತ್ತರದ ಭಾಗದಲ್ಲಿರುವ ಶರಾವತಿ ವನ್ಯಜೀವಿ ಅಭಯಾರಣ್ಯದ ನಡುವೆ ಒಂದು ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದೊಳಗಿನ ಪ್ರಮುಖ ಆಕರ್ಷಣೆಗಳು
- ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
- ಕೊಡಚಾದ್ರಿ ಬೆಟ್ಟ
- ಚಕ್ರಾ ಮತ್ತು ಸೌಪರ್ಣಿಕಾ ನದಿಗಳು
- ನಿತ್ಯಹರಿದ್ವರ್ಣ ಕಾಡುಗಳು
- ಕೂಸಳ್ಳಿ ಮತ್ತು ಬೆಳಕಲ್ ತೀರ್ಥ ಮುಂತಾದ ಜಲಪಾತಗಳು
- ವನ್ಯ ಪ್ರಾಣಿಗಳಾದ ಹುಲಿ, ಕಾಡು ನಾಯಿ, ಸ್ಲೊತ್ ಕರಡಿಗಳು, ಜಾಕಲ್ ಗಳು ಮತ್ತು ಜಿಂಕೆಗಳು
- ಮೈನಾ, ಡ್ರೊಂಗೊ, ಬ್ರಾಹ್ಮಣಿ ಕೈಟ್, ಲ್ಯಾಪ್ವಿಂಗ್ಸ್, ಹಾರ್ನ್ಬಿಲ್, ಬಲ್ಬುಲ್, ಎಗ್ರೆಟ್ಸ್, ಕಿಂಗ್ಫಿಶರ್ಸ್, ಗೋಲ್ಡನ್ ಓರಿಯೊಲ್, ಮ್ಯಾಗ್ಪಿ ರಾಬಿನ್, ಪರ್ಪಲ್ ಸನ್ ಬರ್ಡ್ಸ್, ಫ್ಲೈ ಕ್ಯಾಚರ್ ಮುಂತಾದ ಪಕ್ಷಿಗಳು.
- ಹೆಬ್ಬಾವು, ಕಾಳಿಂಗ ಸರ್ಪ, ನಾಗರ ಹಾವು ಮುಂತಾದ ಸರಿಸೃಪಗಳು
ಅವಲೋಕನ ಮಾರ್ಗದರ್ಶಿ
ಬೇಟಿ ನೀಡುವ ಉತ್ತಮ ಕಾಲ:
ಸೆಪ್ಟೆಂಬರ್- ಏಪ್ರಿಲ್
ಪ್ರಸಿದ್ಧವಾಗಿದೆ
ಈ ಅಭಯಾರಣ್ಯವು ಹುಲಿಗಳು, ಕಾಡು ನಾಯಿಗಳು, ಸ್ಲೊತ್ ಕರಡಿಗಳು, ಕಾಡು ಕೋಣಗಳು, ಜಾಕಲ್ ಗಳು ಮತ್ತು ಜಿಂಕೆಗಳು ಮುಂತಾದ ಪ್ರಾಣಿಗಳಿಗೆ ಮತ್ತು ಮೈನಾ, ಡ್ರೊಂಗೊ, ಹಾರ್ನ್ಬಿಲ್, ಬಲ್ಬುಲ್, ಕಿಂಗ್ಫಿಶರ್ಸ್, ಪರ್ಪಲ್ ಸನ್ ಬರ್ಡ್ಸ್ ಮುಂತಾದ ಪಕ್ಷಿಗಳಿಗೆ ನೆಲೆಯಾಗಿದೆ.
ಉಳಿಯಲು ಸ್ಥಳಗಳು
ಕೊಲ್ಲೂರಿನಲ್ಲಿ ಉಳಿಯಲು ಹಲವಾರು ಆಯ್ಕೆಗಳಿವೆ
ಹೇಗೆ ತಲುಪುವುದು
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (138 ಕಿ.ಮೀ)
ಮೂಕಾಂಬಿಕಾ ರೈಲು ನಿಲ್ದಾಣ ಹತ್ತಿರದಲ್ಲಿದೆ (42 ಕಿ.ಮೀ)
ರಸ್ತೆ ಮುಖಾಂತರ ಬೆಂಗಳೂರಿನಿಂದ ಮೂಕಾಂಬಿಕಾ ಅಭಯಾರಣ್ಯ ತಲುಪಬಹುದು. (430 ಕಿ.ಮೀ)
ಹತ್ತಿರದ ಪ್ರವಾಸಿ ತಾಣಗಳು
ಕೊಡಚಾದ್ರಿ (60 ಕಿ.ಮೀ), ಕುಂಚಿಕಲ್ ಫಾಲ್ಸ್ (51 ಕಿ.ಮೀ), ಹಿಡ್ಲುಮನೆ ಫಾಲ್ಸ್ (58 ಕಿ.ಮೀ) ತಾಣಗಳು ಮೂಕಾಂಬಿಕಾ ಅಭಯಾರಣ್ಯದ ಜೊತೆಗೆ ಭೇಟಿನೀಡಬೇಕಾದ ಕೆಲವು ಸ್ಥಳಗಳಾಗಿವೆ..