Karnataka logo

Karnataka Tourism
GO UP

ಒತ್ತಿನೆಣೆ ಕಡಲತೀರ

separator
ಕೆಳಗೆ ಸ್ಕ್ರಾಲ್ ಮಾಡಿ

ಒತ್ತಿನೆಣೆ ಕಡಲತೀರ ಕರಾವಳಿ ಕರ್ನಾಟಕದ ಒಂದು ಸುಂದರವಾದ ಕಡಲತೀರವಾಗಿದೆ. ಒತ್ತಿನೆಣೆ ಕಡಲತೀರದ ಹತ್ತಿರದಲ್ಲಿ ಎತ್ತರದ ಗುಡ್ಡವಿದ್ದು (ಕ್ಷಿತಿಜ ನೇಸರ ಧಾಮ) ಮೇಲಿನಿಂದ ನೋಡಿದಾಗ ಒತ್ತಿನೆಣೆ ಕಡಲತೀರ ಮತ್ತು ಹಿನ್ನೀರು ನಯನ ಮನೋಹರವಾಗಿ ಕಾಣಿಸುತ್ತದೆ. ಒತ್ತಿನೆಣೆ ಉಡುಪಿ ಜಿಲ್ಲೆಯ ಬೈಂದೂರು ನಗರಕ್ಕೆ ಹತ್ತಿರವಾಗಿದೆ. 

ಒತ್ತಿನೆಣೆ ಕಡಲತೀರ: ಒತ್ತಿನೆಣೆ ಕಡಲತೀರ ಮತ್ತು ಹಿನ್ನೀರು ಬೈಂದೂರು ನದಿ ಅರಬ್ಬೀ ಸಮುದ್ರಕ್ಕೆ ಪ್ರವೇಶಿಸುವ ಸ್ಥಳದಲ್ಲಿ ರೂಪುಗೊಂಡ ಸುಂದರವಾದ ಕಡಲತೀರವಾಗಿದೆ. ಆಳವಿಲ್ಲದ ಕಡಲತೀರದ ಪ್ರದೇಶವು ಒಂದು ಮೂಲೆಯಲ್ಲಿ ಬೆಟ್ಟಗಳನ್ನು ಹೊಂದಿದ್ದು ಸುರಕ್ಷಿತ, ರಮಣೀಯ ಮತ್ತು ಶಾಂತವಾಗಿದೆ. ಸೂರ್ಯಾಸ್ತದ ವೀಕ್ಷಣೆ ತುಂಬಾ ಸುಂದರವಾಗಿ ಕಾಣುತ್ತದೆ.

ಕ್ಷಿತಿಜ ನೇಸರ ಧಾಮ: ಕ್ಷಿತಿಜ ನೇಸರ ಧಾಮ ಒತ್ತಿನೆಣೆ ಕಡಲತೀರ ಹತ್ತಿರದಲ್ಲಿರುವ ಗುಡ್ಡದ  ಮೇಲಿರುವ ಒಂದು ಸಣ್ಣ ಉದ್ಯಾನ. ಇದು ತಂಗಲು ಕೆಲವು ಕುಟೀರಗಳು, ವ್ಯೂ ಪಾಯಿಂಟ್, ದೊಡ್ಡ ಹುಲ್ಲುಗಾವಲು ಮತ್ತು ಮೇಲಿಂದ ಕಡಲತೀರ ತಲುಪಲು ಮೆಟ್ಟಿಲುಗಳನ್ನು ಹೊಂದಿದೆ. ಕುಟೀರಗಳನ್ನು ಕುಂದಾಪುರದ ಅರಣ್ಯ ಇಲಾಖೆ ಕಚೇರಿ ನಡೆಸುತ್ತಿದೆ.

ಸೋಮೇಶ್ವರ ದೇವಸ್ಥಾನ: ಒತ್ತಿನೆಣೆ ಕಡಲತೀರದ ಪಕ್ಕದಲ್ಲಿಯೇ ಇರುವ ಒಂದು ಸಣ್ಣ ಆದರೆ ಜನಪ್ರಿಯ ಶಿವ ದೇವಾಲಯವಾಗಿದೆ. 

ಹತ್ತಿರದ ಇತರ ಆಕರ್ಷಣೆಗಳು: ಮರವಂತೆ ಕಡಲತೀರ (25 ಕಿ.ಮೀ), ಕೊಲ್ಲೂರು ಮೂಕಾಂಬಿಕಾ  ದೇವಸ್ಥಾನ (35 ಕಿ.ಮೀ) ಮತ್ತು ಮುರುಡೇಶ್ವರ (34 ಕಿ.ಮೀ) ಒತ್ತಿನೆಣೆ ಕಡಲತೀರದ ಜೊತೆಗೆ ಭೇಟಿ ನೀಡಲುಬಹುದಾದ ಇತರ ತಾಣಗಳಾಗಿವೆ. 

ತಲುಪುವುದು ಹೇಗೆ: ಒತ್ತಿನೆಣೆ ಕಡಲತೀರ ಬೆಂಗಳೂರಿನಿಂದ 440 ಕಿ.ಮೀ ಮತ್ತು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 125 ಕಿ.ಮೀ ದೂರದಲ್ಲಿದೆ . ಮೂಕಾಂಬಿಕಾ ರಸ್ತೆ ಬೈಂದೂರು ರೈಲ್ವೆ ನಿಲ್ದಾಣವು ಒತ್ತಿನೆಣೆ ಕಡಲತೀರದಿಂದ ‌ಕೇವಲ 4 ಕಿ.ಮೀ ದೂರದಲ್ಲಿದೆ. ಬೈಂದೂರು ಪಟ್ಟಣದವರೆಗೆ ಬಸ್ಸುಗಳು ಲಭ್ಯವಿವೆ ಮತ್ತು ಅಲ್ಲಿಂದ ಒತ್ತಿನೆಣೆ ಕಡಲತೀರ ತಲುಪಲು ಆಟೋರಿಕ್ಷಾವನ್ನು ಬಾಡಿಗೆಗೆ ಪಡೆಯಬಹುದಾಗಿದೆ. 

ಉಳಿಯಿರಿ: ಕ್ಷಿತಿಜ ನೇಸರ ಧಾಮದಲ್ಲಿ ಕೆಲವು ವಸತಿ ಯೋಗ್ಯ ಕುಟೀರಗಳಿದ್ದು ಕುಂದಾಪುರದ ಅರಣ್ಯ ಇಲಾಖೆ ಕಚೇರಿಯನ್ನು ಸಂಪರ್ಕಿಸುವ ಮೂಲಕ ಕಾದಿರಿಸಬಹುದಾಗಿದೆ. ಸಾಯಿ ವಿಶ್ರಮ್ ಬೀಚ್ ರೆಸಾರ್ಟ್ ಒತ್ತಿನೆಣೆ ಕಡಲತೀರಕ್ಕೆ ಬಹಳ ಹತ್ತಿರದಲ್ಲಿದೆ. ಬೈಂದೂರು ಮತ್ತು ಕುಂದಾಪುರ (ಒತ್ತಿನೆಣೆಯಿಂದ 35 ಕಿ.ಮೀ) ಪಟ್ಟಣಗಳಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money