“Script Your adventure” ಅನ್ನು ಸ್ಪ್ಯಾನಿಷ್‌ನಲ್ಲಿ ಡೌನ್‌ಲೋಡ್ ಮಾಡಿ
ಬೆಂಗಳೂರು ಬ್ರೋಷರ್ ಡೌನ್‌ಲೋಡ್ ಮಾಡಿ
“Script Your Adventure” ಮೂಲಕ ಕರ್ನಾಟಕವನ್ನು ಸುತ್ತಿನೋಡಿ. ಮಂಜಿನ ಗಿರಿಧಾಮಗಳು, ಸುಂದರ ಕಡಲತೀರಗಳು, ಪುರಾತನ ದೇವಾಲಯಗಳು ಮತ್ತು ನಗರಗಳು – ಇಲ್ಲಿನ ಪ್ರತಿ ಪಯಣವೂ ನಿಮ್ಮದೇ ಕಥೆಯಾಗಲಿದೆ. ಇಲ್ಲಿನ ಸಂಸ್ಕೃತಿ, ನಿಸರ್ಗ, ಊಟ ಮತ್ತು ಪರಂಪರೆಯನ್ನು ಸವಿಯಿರಿ. ಕರ್ನಾಟಕದಲ್ಲಿ ನಿಮ್ಮ ಪ್ರವಾಸದ ಕಥೆಯನ್ನು ನೀವೇ ರೂಪಿಸಿಕೊಳ್ಳಿ.
ಮೈಸೂರು ಬ್ರೋಷರ್ ಡೌನ್‌ಲೋಡ್ ಮಾಡಿ
ರಾಜವೈಭವದ ಮೈಸೂರಿನ ಅಂದವನ್ನು ಕಣ್ತುಂಬಿಕೊಳ್ಳಿ. ಇಲ್ಲಿನ ಪ್ರತಿ ಮೂಲೆಯಲ್ಲೂ ಪರಂಪರೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಸೊಬಗಿದೆ. ಈ ಇ-ಬ್ರೋಷರ್ ಮೂಲಕ ಮೈಸೂರಿನ ಪ್ರಮುಖ ಸ್ಮಾರಕಗಳು, ಧಾರ್ಮಿಕ ಕೇಂದ್ರಗಳು ಮತ್ತು ವರ್ಣರಂಜಿತ ಹಬ್ಬಗಳ ಬಗ್ಗೆ ತಿಳಿಯಿರಿ. ನಿಮ್ಮ ಮೈಸೂರು ಪ್ರವಾಸವನ್ನು ಅಚ್ಚುಕಟ್ಟಾಗಿ ಯೋಜಿಸಲು ಇದು ನೆರವಾಗಲಿದೆ.
ಕರ್ನಾಟಕ ಬ್ರೋಷರ್ ಡೌನ್‌ಲೋಡ್ ಮಾಡಿ
ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯವಾದ ಕರ್ನಾಟಕದ ಸುಂದರ ಪರಿಚಯವನ್ನು ಈ ಕೈಪಿಡಿ ನಿಮಗೆ ನೀಡುತ್ತದೆ. ಪುರಾತನ ದೇವಾಲಯಗಳು, ಹಸಿರು ಕಾಫಿ ತೋಟಗಳು, ಗತವೈಭವದ ಕೋಟೆಗಳು ಮತ್ತು ಸುಂದರ ಕಡಲತೀರಗಳಂತಹ ಪ್ರಸಿದ್ಧ ತಾಣಗಳ ಬಗ್ಗೆ ಇಲ್ಲಿ ತಿಳಿಯಿರಿ.
ಪಾರಂಪರಿಕ ಬ್ರೋಷರ್ ಡೌನ್‌ಲೋಡ್ ಮಾಡಿ
ಕರ್ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಕೈಪಿಡಿಯು ನಿಮ್ಮನ್ನು ಗತಕಾಲದ ವೈಭವಕ್ಕೆ ಕರೆದೊಯ್ಯಲಿದೆ. ರಾಜ್ಯದ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣಗಳು, ಭವ್ಯ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ವಾಸ್ತುಶಿಲ್ಪದ ಸೊಬಗಿನಿಂದ ಕೂಡಿದ ಪುರಾತನ ನಗರಗಳ ಬಗ್ಗೆ ಇಲ್ಲಿ ತಿಳಿಯಿರಿ.
ಕರಾವಳಿ ಬ್ರೋಷರ್ ಡೌನ್‌ಲೋಡ್ ಮಾಡಿ
ಈ ಸುಂದರವಾದ ಕೈಪಿಡಿಯ ಮೂಲಕ ಕರ್ನಾಟಕದ ಅದ್ಭುತ ಕರಾವಳಿಯನ್ನು ಕಣ್ತುಂಬಿಕೊಳ್ಳಿ. ಅರಬ್ಬೀ ಸಮುದ್ರದ ತೀರದಲ್ಲಿರುವ ಪ್ರಶಾಂತ ಕಡಲತೀರಗಳು, ಐತಿಹಾಸಿಕ ಬಂದರುಗಳು, ದ್ವೀಪಗಳು ಮತ್ತು ಜಲಕ್ರೀಡಾ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ಪಡೆಯಿರಿ.
ವನ್ಯಜೀವಿ ಬ್ರೋಷರ್ ಡೌನ್‌ಲೋಡ್ ಮಾಡಿ
ಕರ್ನಾಟಕದ ಸಮೃದ್ಧ ಕಾಡುಗಳ ಪಯಣಕ್ಕೆ ಸಿದ್ಧರಾಗಿ. ಹುಲಿ ಸಂರಕ್ಷಿತ ಪ್ರದೇಶಗಳು, ಪಕ್ಷಿಧಾಮಗಳು, ಆನೆ ಶಿಬಿರಗಳು ಮತ್ತು ಹಚ್ಚ ಹಸಿರಿನ ಕಾಡುಗಳ ಬಗ್ಗೆ ಈ ಕೈಪಿಡಿ ನಿಮಗೆ ಮಾಹಿತಿ ನೀಡುತ್ತದೆ. ನಿಸರ್ಗದೊಂದಿಗೆ ಬೆರೆಯಲು ಇದೊಂದು ಉತ್ತಮ ಅವಕಾಶ.
