ಗೋಲ್ಡನ್ ಚಾರಿಯಟ್: ಐಷಾರಾಮಿ ಪ್ರಯಾಣದ ಅನುಭವ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮತ್ತು IRCTC ಒಟ್ಟಾಗಿ ನಡೆಸುವ ಗೋಲ್ಡನ್ ಚಾರಿಯಟ್ ಒಂದು ಐಷಾರಾಮಿ ರೈಲು ಪ್ರಯಾಣದ ವಿಶಿಷ್ಟ ಅನುಭವ. ಭಾರತದ ಪ್ರಮುಖ ಅರಣ್ಯ ಪ್ರದೇಶಗಳು, ಸುಂದರ ಕಡಲತೀರಗಳು ಹಾಗೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ಈ ರೈಲು ನಿಮ್ಮನ್ನು ಅದ್ಭುತವಾಗಿ ಕರೆದೊಯ್ಯುತ್ತದೆ. 5 ರಿಂದ 7 ದಿನಗಳ ಈ ಸುಂದರ ಪ್ರವಾಸವು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳನ್ನು ಅಚ್ಚುಕಟ್ಟಾಗಿ ಒಳಗೊಂಡಿದೆ. ಬೆಂಗಳೂರಿನಿಂದ ಗೋವಾಕ್ಕೆ ಹೋಗಿ ಬರಲು ಬಯಸುವ ಪ್ರಯಾಣಿಕರಿಗೆ, ಈ ರೈಲು ಚಕ್ರಗಳ ಮೇಲಿನ ಐಷಾರಾಮಿ ಅನುಭವವನ್ನು ನೀಡುತ್ತದೆ.
ರೈಲಿನೊಳಗೆ, ಅತಿಥಿಗಳು ರಾಜಮರ್ಯಾದೆ ಮತ್ತು ಐಷಾರಾಮಿ ಜೀವನದ ಸಾರವನ್ನು ಅನುಭವಿಸುತ್ತಾರೆ. ನಿಮ್ಮ ಹೋಟೆಲ್‌ನಿಂದ ರೈಲಿಗೆ ಸಾಮಾನು ಸಾಗಿಸುವ ಕ್ಷಣದಿಂದ ಹಿಡಿದು, ಐಷಾರಾಮಿ ಮತ್ತು ಸುಂದರ ಕ್ಯಾಬಿನ್‌ಗಳಲ್ಲಿನ ವಾಸ್ತವ್ಯದ ಮೂಲಕ, ಅತಿಥಿಗಳ ಅಂತಿಮ ನಿರ್ಗಮನದವರೆಗೆ ಗೋಲ್ಡನ್ ಚಾರಿಯಟ್ ಸಂಪೂರ್ಣ ಐಷಾರಾಮವನ್ನು ಒದಗಿಸುತ್ತದೆ. ಈ ರೈಲು ಪ್ರವಾಸದಲ್ಲಿ ಬಾಯಲ್ಲಿ ನೀರೂರಿಸುವ ಊಟ, ರೈಲಿನಲ್ಲೇ ಆರಾಮದಾಯಕ ವಸತಿ ಮತ್ತು ನಿಗದಿಪಡಿಸಿದ ತಾಣಗಳಲ್ಲಿ ಹೊರಾಂಗಣ ಚಟುವಟಿಕೆಗಳು ಹಾಗೂ ಸ್ಥಳಗಳ ವೀಕ್ಷಣೆ ಸೇರಿವೆ. ರೈಲಿನೊಳಗಿನ ‘ರುಚಿ’ (Ruchi) ಮತ್ತು ‘ನಳಪಾಕ’ (Nalapaka) ಎಂಬ ರೆಸ್ಟೋರೆಂಟ್‌ಗಳ ವಿನ್ಯಾಸವು ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದೆ.
ರೈಲಿನ ವಿಶೇಷತೆಗಳು
ಭಾರತದ ದಕ್ಷಿಣ ಭಾಗವು ಕಲೆ ಮತ್ತು ಕರಕುಶಲತೆಯನ್ನು ಪೋಷಿಸಿದ ಹಲವು ರಾಜಮನೆತನಗಳನ್ನು ಕಂಡಿದೆ. ಅವರ ಅಮೋಘ ಕೊಡುಗೆಗಳು ಇಂದಿಗೂ ಸುಂದರ ಕೆತ್ತನೆಯ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಅದ್ಭುತ ವಾಸ್ತುಶಿಲ್ಪದ ಮೂಲಕ ನಮ್ಮ ನಡುವೆ ಜೀವಂತವಾಗಿವೆ. ಈ ವೈಭವದ ಭೂತಕಾಲದ ಕಥೆಗಳನ್ನು ಹೇಳುವಂತಹ ರೈಲಿನ ಬೋಗಿಗಳಿಗೆ, ಶತಮಾನಗಳ ಕಾಲ ದಕ್ಷಿಣ ಭಾರತ, ವಿಶೇಷವಾಗಿ ಕರ್ನಾಟಕವನ್ನು ಆಳಿದ ವಿವಿಧ ರಾಜಮನೆತನಗಳ ಹೆಸರನ್ನು ಇಡಲಾಗಿದೆ.
ಪ್ರತಿ ಬೋಗಿಯಲ್ಲಿ ತಲಾ ನಾಲ್ಕು ಕ್ಯಾಬಿನ್‌ಗಳಿದ್ದು, ಅವುಗಳಲ್ಲಿ ಡಬಲ್ ಮತ್ತು ಟ್ವಿನ್ ಆಕ್ಯುಪೆನ್ಸಿ (ಒಂದರಲ್ಲಿ ಇಬ್ಬರು, ಇನ್ನೊಂದರಲ್ಲಿ ಒಬ್ಬರು) ವ್ಯವಸ್ಥೆ ಇದೆ. ಅತಿಥಿಗಳಿಗಾಗಿ ಒಟ್ಟು 13 ಡಬಲ್ ಆಕ್ಯುಪೆನ್ಸಿ ಕ್ಯಾಬಿನ್‌ಗಳು, 30 ಟ್ವಿನ್ ಆಕ್ಯುಪೆನ್ಸಿ ಕ್ಯಾಬಿನ್‌ಗಳು ಮತ್ತು ವಿಶೇಷ ಚೇತನರಿಗಾಗಿ ಒಂದು ಕ್ಯಾಬಿನ್ ಲಭ್ಯವಿದೆ. ಎಲ್ಲಾ ಕ್ಯಾಬಿನ್‌ಗಳೂ ಸ್ವಯಂ-ನಿರ್ವಾಹಿತ ಸೌಲಭ್ಯಗಳನ್ನು ಹೊಂದಿವೆ.
ರುಚಿ ಮತ್ತು ನಳಪಾಕ (Ruchi and Nalapaka) ರೈಲಿನಲ್ಲಿರುವ ಎರಡು ರೆಸ್ಟೋರೆಂಟ್‌ಗಳು. ಇವು ಜಗತ್ತಿನಾದ್ಯಂತದ ರುಚಿಕರ ಊಟಗಳನ್ನು, ಭಾರತದ ವಿಶೇಷ ಭಕ್ಷ್ಯಗಳೊಂದಿಗೆ ಬಡಿಸುತ್ತವೆ. ಮದಿರಾ (Madira) ಎಂಬ ವಿಶೇಷ ಬಾರ್‌ನಲ್ಲಿ ಉತ್ತಮ ಗುಣಮಟ್ಟದ ಸ್ಪಿರಿಟ್‌ಗಳು, ವೈನ್‌ಗಳು ಮತ್ತು ಬಿಯರ್‌ಗಳು ಲಭ್ಯವಿವೆ. ಆರೋಗ್ಯ (Arogya) ಎಂಬ ಸ್ಪಾ ಮತ್ತು ಫಿಟ್‌ನೆಸ್ ಸೆಂಟರ್‌ನಲ್ಲಿ ಸಾಂಪ್ರದಾಯಿಕ ಸ್ಪಾ ಚಿಕಿತ್ಸೆಗಳ ಮೂಲಕ ವಿಶ್ರಾಂತಿ ಪಡೆಯಬಹುದು. ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು, ಫಿಟ್‌ನೆಸ್ ಸೆಂಟರ್‌ನಲ್ಲಿ ಎಲ್ಲಾ ಆಧುನಿಕ ವ್ಯಾಯಾಮ ಯಂತ್ರಗಳಿದ್ದು, ರೈಲಿನಲ್ಲಿ ಸೇವಿಸಿದ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ಪ್ರವಾಸದ ವೇಳಾಪಟ್ಟಿಗಳು
ಪ್ರಸ್ತುತ, ಗೋಲ್ಡನ್ ಚಾರಿಯಟ್ ಮೂರು ಪ್ರವಾಸಗಳನ್ನು ನೀಡುತ್ತದೆ:
ಪ್ರೈಡ್ ಆಫ್ ಕರ್ನಾಟಕ (6 ರಾತ್ರಿಗಳು / 7 ದಿನಗಳು): ಬೆಂಗಳೂರಿನಿಂದ ಪ್ರಾರಂಭವಾಗುತ್ತದೆ. ಬೆಂಗಳೂರು – ಬಂಡೀಪುರ – ಮೈಸೂರು – ಬೇಲೂರು/ಹಳೇಬೀಡು – ಚಿಕ್ಕಮಗಳೂರು – ಹಂಪಿ – ಪಟ್ಟದಕಲ್ಲು & ಐಹೊಳೆ – ಗೋವಾ – ಬೆಂಗಳೂರು.
ಜೆವೆಲ್ಸ್ ಆಫ್ ಸೌತ್ (6 ರಾತ್ರಿಗಳು / 7 ದಿನಗಳು): ಬೆಂಗಳೂರು – ಮೈಸೂರು – ಹಂಪಿ – ಮಾಮಲ್ಲಪುರಂ – ತಂಜಾವೂರು ಮತ್ತು ಚೆಟ್ಟಿನಾಡ್ – ಕೊಚ್ಚಿ – ಕುಮಾರಕೋಮ್ – ಬೆಂಗಳೂರು.
ಗ್ಲಿಂಪ್ಸಸ್ ಆಫ್ ಕರ್ನಾಟಕ (3 ರಾತ್ರಿಗಳು / 4 ದಿನಗಳು): ಬೆಂಗಳೂರು – ಬಂಡೀಪುರ – ಮೈಸೂರು – ಹಂಪಿ – ಬೆಂಗಳೂರು.
ಈ ಮಾಹಿತಿ ಬದಲಾಗಬಹುದು. ದಯವಿಟ್ಟು ಗೋಲ್ಡನ್ ಚಾರಿಯಟ್‌ನ ಅಧಿಕೃತ ವೆಬ್‌ಸೈಟ್ www.goldenchariot.org ಗೆ ಭೇಟಿ ನೀಡಿ, ಮಾರ್ಗಗಳು ಮತ್ತು ವೇಳಾಪಟ್ಟಿಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯಬಹುದು.
ಶುಲ್ಕ
ಗೋಲ್ಡನ್ ಚಾರಿಯಟ್‌ನ ಡಿಲಕ್ಸ್ ಕ್ಯಾಬಿನ್‌ಗಳಿಗೆ, ‘ಗ್ಲಿಂಪ್ಸಸ್ ಆಫ್ ಕರ್ನಾಟಕ’ (3 ರಾತ್ರಿಗಳು/4 ದಿನಗಳು) ಪ್ರವಾಸಕ್ಕೆ ಸಂಪೂರ್ಣ ಶುಲ್ಕವು ₹ 1,82,930 ರಿಂದ ಪ್ರಾರಂಭವಾಗುತ್ತದೆ. ‘ಪ್ರೈಡ್ ಆಫ್ ಕರ್ನಾಟಕ ವಿಥ್ ಗೋವಾ’ (6 ರಾತ್ರಿಗಳು/7 ದಿನಗಳು) ಮತ್ತು ‘ಜೆವೆಲ್ಸ್ ಆಫ್ ಸೌತ್’ (6 ರಾತ್ರಿಗಳು/7 ದಿನಗಳು) ಪ್ರವಾಸಗಳಿಗೆ ಶುಲ್ಕವು ₹ 3,20,130 ವರೆಗೆ ಇರುತ್ತದೆ. ಆದಾಗ್ಯೂ, ರಿಯಾಯಿತಿಗಳು ಮತ್ತು ವಿಶೇಷ ಕೊಡುಗೆಗಳಿಗಾಗಿ ಅತಿಥಿಗಳು ಗೋಲ್ಡನ್ ಚಾರಿಯಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಹೆಚ್ಚಿನ ಸಂಪರ್ಕಕ್ಕಾಗಿ
ವೆಬ್‌ಸೈಟ್: www.goldenchariot.org
ಇಮೇಲ್: [email protected]
ಸಂಪರ್ಕ: 91 – 8585931021
