ಉತ್ತರ ಕನ್ನಡ ಜಿಲ್ಲೆಯ ಕದಂಬ ರಾಜವಂಶದ ಪುರಾತನ ರಾಜಧಾನಿಯಾದ ಬನವಾಸಿಯಲ್ಲಿ ನಡೆಯುವ **’ಕದಂಬೋತ್ಸವ’**ವು ವರ್ಣರಂಜಿತ ಸಾಂಸ್ಕೃತಿಕ ಹಬ್ಬವಾಗಿದೆ. ಇಲ್ಲಿನ ಪವಿತ್ರ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಶಾಸ್ತ್ರೀಯ ಕಲೆಗಳು, ಜಾನಪದ ಪ್ರದರ್ಶನಗಳು ಮತ್ತು ಇತಿಹಾಸವನ್ನು ಅನುಭವಿಸಲು ಈ ಉತ್ಸವ ಪ್ರವಾಸಿಗರನ್ನು ಆಹ್ವಾನಿಸುತ್ತದೆ.
ನಿಮಗೆ ತಿಳಿದಿದೆಯೇ?
- ಬನವಾಸಿಯನ್ನು ಕರ್ನಾಟಕದ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದೆಂದು ಮತ್ತು ಕದಂಬ ಅರಸರ ಮೊದಲ ರಾಜಧಾನಿಯೆಂದು ಪರಿಗಣಿಸಲಾಗಿದೆ.
- ಶಿವನಿಗೆ ಸಮರ್ಪಿತವಾದ ಮಧುಕೇಶ್ವರ ದೇವಾಲಯದಲ್ಲಿ ಜೇನುತುಪ್ಪದ ಬಣ್ಣದ (Honey coloured) ವಿಶಿಷ್ಟ ಲಿಂಗ ಮತ್ತು ಆಕರ್ಷಕ ಏಕಶಿಲಾ ನಂದಿ ವಿಗ್ರಹವಿದೆ.
- ಕದಂಬರ ಪರಂಪರೆಗೆ ಗೌರವ ಸಲ್ಲಿಸಲು ‘ಕದಂಬೋತ್ಸವ’ವನ್ನು ವಾರ್ಷಿಕ ರಾಜ್ಯ ಮಟ್ಟದ ಸಾಂಸ್ಕೃತಿಕ ಹಬ್ಬವನ್ನಾಗಿ ಆಚರಿಸಲಾಗುತ್ತದೆ.
- ಕರ್ನಾಟಕ ಮತ್ತು ನೆರೆಹೊರೆಯ ಪ್ರದೇಶಗಳ ಕಲಾವಿದರು ಇಲ್ಲಿನ ತೆರೆದ ಪಾರಂಪರಿಕ ವೇದಿಕೆಯಲ್ಲಿ ಪ್ರದರ್ಶನ ನೀಡಲು ಸೇರುತ್ತಾರೆ.
ಉತ್ಸವದ ಪ್ರಮುಖ ಆಕರ್ಷಣೆಗಳು
- ಉದ್ಘಾಟನೆ ಮತ್ತು ಮೆರವಣಿಗೆ: ಮಧುಕೇಶ್ವರ ದೇವಾಲಯದ ಬಳಿ ಉದ್ಘಾಟನಾ ಸಮಾರಂಭ ಮತ್ತು ಬನವಾಸಿಯ ಐತಿಹಾಸಿಕ ಬೀದಿಗಳಲ್ಲಿ ಅದ್ದೂರಿ ಸಾಂಸ್ಕೃತಿಕ ಮೆರವಣಿಗೆ.
- ಶಾಸ್ತ್ರೀಯ ಸಂಗೀತ ಮತ್ತು ನೃತ್ಯ: ಸಂಜೆಯ ನಂತರ ದೇವಾಲಯದ ಆವರಣದಲ್ಲಿ ನಡೆಯುವ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು ಪ್ರಶಾಂತ ಹಾಗೂ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತವೆ.
- ಜಾನಪದ ಪ್ರದರ್ಶನ: ಸ್ಥಳೀಯ ಕಥೆಗಳು ಮತ್ತು ಪುರಾಣಗಳನ್ನು ಸಾರುವ ಪ್ರಾದೇಶಿಕ ನೃತ್ಯ, ನಾಟಕ ಮತ್ತು ಸಾಂಪ್ರದಾಯಿಕ ಕಲಾಪ್ರಕಾರಗಳ ಪ್ರದರ್ಶನ.
- ಮಳಿಗೆಗಳು: ಕರಾವಳಿ ಮತ್ತು ಮಲೆನಾಡು ಶೈಲಿಯ ವಿಶೇಷ ತಿನಿಸುಗಳನ್ನು ಬಡಿಸುವ ಆಹಾರ ಮಳಿಗೆಗಳು, ಪುಸ್ತಕ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಮಳಿಗೆಗಳು.
- ಪಾರಂಪರಿಕ ನಡಿಗೆ (Heritage Walks): ಕದಂಬರ ಇತಿಹಾಸ ಮತ್ತು ಬನವಾಸಿಯ ವಾಸ್ತುಶಿಲ್ಪ ಪರಂಪರೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ನಡಿಗೆ ಮತ್ತು ಸಂವಾದಗಳು.
ದಿನಾಂಕ ಮತ್ತು ಸಮಯ
ಕದಂಬೋತ್ಸವವನ್ನು ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್‌ನಂತಹ ಚಳಿಗಾಲದ ತಿಂಗಳುಗಳಲ್ಲಿ ಸತತ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಬೆಳಿಗ್ಗೆ ಸಾಂಸ್ಕೃತಿಕ ನಡಿಗೆ ಮತ್ತು ಸ್ಪರ್ಧೆಗಳಿಂದ ಹಿಡಿದು ಸಂಜೆ ವೇದಿಕೆ ಕಾರ್ಯಕ್ರಮಗಳವರೆಗೆ ವಿವಿಧ ಚಟುವಟಿಕೆಗಳು ನಡೆಯುತ್ತವೆ. ಪ್ರತಿ ವರ್ಷದ ನಿಖರವಾದ ದಿನಾಂಕ ಮತ್ತು ವೇಳಾಪಟ್ಟಿಯನ್ನು ಸ್ಥಳೀಯವಾಗಿ ಪ್ರಕಟಿಸಲಾಗುತ್ತದೆ.
ತಲುಪುವುದು ಹೇಗೆ?
ಬನವಾಸಿಯು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಿಂದ ಸುಮಾರು 20 ರಿಂದ 25 ಕಿ.ಮೀ ದೂರದಲ್ಲಿದೆ.
- ರಸ್ತೆ ಮೂಲಕ: ಶಿರಸಿಯು ಹುಬ್ಬಳ್ಳಿ, ಶಿವಮೊಗ್ಗ ಮತ್ತು ಕರಾವಳಿ ಪಟ್ಟಣಗಳಾದ ಗೋಕರ್ಣ ಹಾಗೂ ಕಾರವಾರದೊಂದಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಇಲ್ಲಿಗೆ ಸಾಕಷ್ಟು ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವಿವೆ.
- ರೈಲು ಮೂಲಕ: ಹತ್ತಿರದ ಪ್ರಮುಖ ರೈಲು ನಿಲ್ದಾಣಗಳು ತಾಳಗುಪ್ಪ, ಕುಮಟಾ ಮತ್ತು ಹುಬ್ಬಳ್ಳಿ. ಅಲ್ಲಿಂದ ರಸ್ತೆ ಮಾರ್ಗವಾಗಿ ಶಿರಸಿ ಮೂಲಕ ಬನವಾಸಿಗೆ ತಲುಪಬಹುದು.
ಗಮನದಲ್ಲಿಡಬೇಕಾದ ಅಂಶಗಳು
- ಭೇಟಿ ನೀಡುವ ಮೊದಲು ಖಚಿತ ದಿನಾಂಕಗಳು, ಉದ್ಘಾಟನಾ ಸಮಯ ಮತ್ತು ಸಂಜೆಯ ಕಾರ್ಯಕ್ರಮಗಳ ಪಟ್ಟಿಯನ್ನು ಪರಿಶೀಲಿಸಿ.
- ಕಾರ್ಯಕ್ರಮಗಳು ದೇವಾಲಯಕ್ಕೆ ಸಂಬಂಧಿಸಿರುವುದರಿಂದ ಸಾಂಪ್ರದಾಯಿಕ ಅಥವಾ ಸಭ್ಯ ಉಡುಪು ಧರಿಸಿ; ಅಗತ್ಯವಿರುವಲ್ಲಿ ಪಾದರಕ್ಷೆಗಳನ್ನು ಕಳಚಿ ಮತ್ತು ಪ್ರಾರ್ಥನಾ ಸ್ಥಳಗಳನ್ನು ಗೌರವಿಸಿ.
- ಸಂಜೆಯ ವೇಳೆ ಹವಾಮಾನ ಆಹ್ಲಾದಕರವಾಗಿರುತ್ತದೆ (ತಂಪಾಗಿರುತ್ತದೆ); ಹಗುರವಾದ ಬೆಚ್ಚಗಿನ ಬಟ್ಟೆ (Light layer) ಜೊತೆಯಲ್ಲಿರಲಿ. ಕಲ್ಲಿನ ಹಾದಿ ಮತ್ತು ಹಳ್ಳಿಯ ದಾರಿಗಳಲ್ಲಿ ನಡೆಯಲು ಆರಾಮದಾಯಕ ಪಾದರಕ್ಷೆ ಧರಿಸಿ.
- ಸ್ಥಳೀಯ ತಿಂಡಿಗಳು ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಲು ನಗದು (Cash) ಇಟ್ಟುಕೊಳ್ಳಿ, ಏಕೆಂದರೆ ಗ್ರಾಮೀಣ ಮಳಿಗೆಗಳಲ್ಲಿ ಡಿಜಿಟಲ್ ಪಾವತಿ ಆಯ್ಕೆಗಳು ಸೀಮಿತವಾಗಿರಬಹುದು.
ಕದಂಬೋತ್ಸವವನ್ನು ಅನುಭವಿಸಿ ಕದಂಬೋತ್ಸವದ ಸಮಯದಲ್ಲಿ ಬನವಾಸಿಗೆ ಸಾಂಸ್ಕೃತಿಕ ಪ್ರವಾಸವನ್ನು ಯೋಜಿಸಿ. ಕರ್ನಾಟಕದ ಐತಿಹಾಸಿಕ ಮೊದಲ ರಾಜಧಾನಿಯಲ್ಲಿ, ದೇವಾಲಯದ ದೀಪಾಲಂಕಾರ,