ನಿಮ್ಮ ಸಲಹೆಗಳನ್ನು ಇಂದೇ ತಿಳಿಸಿ, ವೆಬ್ಸೈಟ್ ಅನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಅನುಕೂಲವಾಗುತ್ತದೆ. ಇಲ್ಲಿ ಹಂಚಿಕೊಳ್ಳಿ

Hero Image

ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರವು ದಕ್ಷಿಣದಲ್ಲಿ ಬೆಂಗಳೂರು ನಗರ, ಉತ್ತರದಲ್ಲಿ ತುಮಕೂರು ಮತ್ತು ಚಿಕ್ಕಬಳ್ಳಾಪುರ, ಪೂರ್ವದಲ್ಲಿ ಕೋಲಾರ ಹಾಗೂ ಪಶ್ಚಿಮದಲ...

ಬೆಂಗಳೂರು ಗ್ರಾಮಾಂತರವು ದಕ್ಷಿಣದಲ್ಲಿ ಬೆಂಗಳೂರು ನಗರ, ಉತ್ತರದಲ್ಲಿ ತುಮಕೂರು ಮತ್ತು ಚಿಕ್ಕಬಳ್ಳಾಪುರ, ಪೂರ್ವದಲ್ಲಿ ಕೋಲಾರ ಹಾಗೂ ಪಶ್ಚಿಮದಲ್ಲಿ ರಾಮನಗರದಿಂದ ಸುತ್ತುವರಿದಿದೆ. ಬೆಂಗಳೂರು ಜಿಲ್ಲೆಯನ್ನು ಬೆಂಗಳೂರು (ಗ್ರಾಮಾಂತರ) ಮತ್ತು ಬೆಂಗಳೂರು (ನಗರ) ಎಂದು ವಿಭಜಿಸಿದಾಗ 1986 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಯಿತು. 2007 ರಲ್ಲಿ ಕನಕಪುರ, ರಾಮನಗರ, ಮಾಗಡಿ ಮತ್ತು ಚನ್ನಪಟ್ಟಣ ತಾಲೂಕುಗಳು ಹೊಸದಾಗಿ ರಚಿಸಲಾದ ರಾಮನಗರ ಜಿಲ್ಲೆಗೆ ವಿಲೀನಗೊಂಡಾಗ ಇದನ್ನು ಮತ್ತೊಮ್ಮೆ ವಿಭಜಿಸಲಾಯಿತು. ಪ್ರಸ್ತುತ, ಇದು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ಎಂಬ ನಾಲ್ಕು ತಾಲೂಕುಗಳನ್ನು ಒಳಗೊಂಡಿದೆ.

ಬೆಂಗಳೂರು ಗ್ರಾಮಾಂತರದ ಪ್ರಮುಖ ಅಂಶಗಳು

ಬೆಂಗಳೂರು ಗ್ರಾಮಾಂತರವು ತೋಟಗಾರಿಕೆ ಮತ್ತು ರೇಷ್ಮೆ ಕೃಷಿಗೆ ಸೂಕ್ತವಾದ ಹವಾಮಾನವನ್ನು ಹೊಂದಿದೆ. ಈ ಜಿಲ್ಲೆಯಲ್ಲಿ ಅನೇಕ ವೈನ್ ತೋಟಗಳೂ ಇವೆ. ಮುಖ್ಯವಾಗಿ ಕೃಷಿ ಪ್ರಧಾನ ಜಿಲ್ಲೆಯಾಗಿದ್ದರೂ, ಬೆಂಗಳೂರು ನಗರಕ್ಕೆ ಅದರ ಸಾಮೀಪ್ಯವು ಇಲ್ಲಿನ ಜನಜೀವನದ ಮೇಲೆ ಪ್ರಭಾವ ಬೀರಿದೆ. ಇಲ್ಲಿನ ಬಹುಪಾಲು ಜನರು ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಎಸ್‌ಇಝಡ್‌ಗಳ (ವಿಶೇಷ ಆರ್ಥಿಕ ವಲಯಗಳು) ಆಗಮನದೊಂದಿಗೆ ಅನೇಕ ಸೇವೆಗಳು ಮತ್ತು ಐಟಿ (ಮಾಹಿತಿ ತಂತ್ರಜ್ಞಾನ) ಕೈಗಾರಿಕೆಗಳು ಇಲ್ಲಿ ನೆಲೆಯೂರಿವೆ.

ಅಲ್ಲದೆ, ಇದು ದಕ್ಷಿಣ ಭಾರತದ ಹೆಬ್ಬಾಗಿಲು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ – ಏಕೆಂದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಯೇ ಇದೆ. ಘಾಟಿ ಸುಬ್ರಮಣ್ಯ ದೇವಾಲಯ, ದೇವನಹಳ್ಳಿ ಕೋಟೆ ಮತ್ತು ಶಿವಗಂಗಾ ದೇವಾಲಯ ಇಲ್ಲಿನ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ನಗರಕ್ಕೆ ಹತ್ತಿರದಲ್ಲಿರುವುದರಿಂದ, ಬೆಂಗಳೂರು ಗ್ರಾಮಾಂತರದಲ್ಲಿನ ಆಕರ್ಷಣೆಗಳು ಒಂದು ದಿನದ ಪ್ರವಾಸಗಳಿಗೆ ಅಥವಾ ವಾರಾಂತ್ಯದ ವಿಹಾರಗಳಿಗೆ ಸೂಕ್ತವಾಗಿವೆ.

ಇದರಿಗಾಗಿ ಪ್ರಸಿದ್ಧ
ಗ್ರಾಮೀಣ ವಿಹಾರ, ಸಾಹಸಮಯ ಚಟುವಟಿಕೆಗಳು