Karnataka Tourism
GO UP
Classical Bharatanatyam

ಭರತನಾಟ್ಯ

separator
  /  ಭರತನಾಟ್ಯ

ಭರತನಾಟ್ಯವು ದಕ್ಷಿಣ ಭಾರತದ ಜನಪ್ರಿಯ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ. ಭರತನಾಟ್ಯ ಪ್ರದರ್ಶನವು ಕಣ್ಣಿನ ಚಲನೆಗಳು, ಅಭಿವ್ಯಕ್ತಿಗಳು, ಕೈ ಸನ್ನೆಗಳು, ಹೆಜ್ಜೆಗಳು, ಸಂಗೀತ  ಮತ್ತು ನೃತ್ಯಗಳ ಸಮಾಗಮದಿಂದ ನೋಡುಗರಿಗೆ ವಿಭಿನ್ನ ಅನುಭವ ನೀಡುತ್ತದೆ.

ಭರತನಾಟ್ಯದಲ್ಲಿ  ಏನೇನಿರುತ್ತದೆ?

  • ಭಾವ: ಭರತನಾಟ್ಯ ಪ್ರದರ್ಶಕರು ಹಾಡು / ಕಥೆಯ ಬೇಡಿಕೆಯಂತೆ ವಿವಿಧ ಭಾವನೆಗಳನ್ನು ತಮ್ಮ ಮುಖದ ಮೇಲೆ ಬರಿಸಿ ತೋರಿಸುತ್ತಾರೆ. ಸಂತೋಷ, ಆಶ್ಚರ್ಯ, ಕೋಪ, ದುಃಖ, ಪ್ರೀತಿ ಇತ್ಯಾದಿಗಳ ಭಾವನೆಗಳು ಪ್ರದರ್ಶನದ  ಸಮಯದಲ್ಲಿ ಸಂದೇಶದ ಸಂವಹನಕ್ಕೆ ಸಹಾಯ ಮಾಡುತ್ತದೆ.
  • ಹಸ್ತಮುದ್ರೆ (ಕೈ ಸನ್ನೆಗಳು): ಕೈ ಸನ್ನೆಗಳು ಮತ್ತು ಬೆರಳುಗಳ ಚಲನೆಯಿಂದ ವಿಭಿನ್ನ ಆಕಾರಗಳನ್ನು ರೂಪಿಸುವುದು ಭರತನಾಟ್ಯ ಪ್ರದರ್ಶನದ ಪ್ರಮುಖ ಭಾಗವಾಗಿದೆ.
  • ತಾಳ: ತಾಳ ಎಂಟು ಲಯಬದ್ಧ ಮಧ್ಯಂತರಗಳನ್ನು ಪ್ರತಿನಿಧಿಸುತ್ತದೆ. ಭರತನಾಟ್ಯ ಕರ್ನಾಟಕ ಸಂಗೀತದೊಂದಿಗೆ ಲಯ ತಪ್ಪದಂತೆ ಹೆಜ್ಜೆ ಹಾಕಲು ತಾಳ ಸಹಾಯಮಾಡುತ್ತದೆ. 
  • ನೃತ್ಯ: ಭರತನಾಟ್ಯ ನೃತ್ಯ ಪ್ರದರ್ಶನವು ಸಾಕಷ್ಟು ಅಭ್ಯಾಸ ಬೇಡುತ್ತದೆ. ನುರಿತ ಕಲಾಕಾರರು ತಮ್ಮ ನಾಟ್ಯ ಗುರುಗಳ ಮಾರ್ಗದರ್ಶನದಡಿ ವರ್ಷಗಟ್ಟಲೆ ತರಬೇತಿ ಪಡೆದು ವೇದಿಕೆ ಮೇಲೆ ನರ್ತಿಸುವ ಅರ್ಹತೆ ಪಡೆದುಕೊಳ್ಳುತ್ತಾರೆ. ವೇದಿಕೆಯ ಉದ್ದ ಅಗಲವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಸಂಗೀತ ಮತ್ತು ನೃತ್ಯ ಸಂಯೋಜನೆಯೊಂದಿಗೆ ಭಾವ, ಕೈಸನ್ನೆ ಮತ್ತು ಆಕರ್ಷಕ ವೇಷ ಭೂಷಣಗಳೊಂದಿಗೆ ನಡೆಸಿಕೊಡುವ ಭರತನಾಟ್ಯ ನೃತ್ಯ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ.
  • ನಟರಾಜ ಪ್ರತಿಮೆ: ಎಲ್ಲಾ ಭರತನಾಟ್ಯ ಪಟುಗಳು ನಟರಾಜನನ್ನು ಆರಾಧಿಸುತ್ತಾರೆ. ನಟರಾಜನ ಪ್ರತಿಮೆಯ ಮುಂದೆ ಹೆಚ್ಚಿನ ಭರತನಾಟ ನೃತ್ಯಗಳನ್ನು ನಡೆಸಲಾಗುತ್ತದೆ. ಎಲ್ಲಾ ಪ್ರದರ್ಶನಗಳು ಪ್ರಾರ್ಥನೆ ಮತ್ತು ಭಗವಾನ್ ನಟರಾಜರಿಗೆ ಗೌರವವನ್ನು ಸೂಚಿಸುವ ಮೂಲಕ  ಪ್ರಾರಂಭವಾಗುತ್ತವೆ.
  • ಉಡುಗೆ: ಭರತನಾತ್ಯ ಪ್ರದರ್ಶಕರು (ಮಹಿಳೆಯರು) ರೇಷ್ಮೆ ಸೀರೆಯನ್ನು ಧರಿಸುತ್ತಾರೆ, ಜೊತೆಗೆ ಸೂಕ್ತವಾದ ಆಭರಣಗಳು ಮತ್ತು ಗೆಜ್ಜೆಯನ್ನು ತಮ್ಮ ಮಣಿಕಟ್ಟು ಮತ್ತು ಪಾದದ ಮೇಲೆ ಧರಿಸುತ್ತಾರೆ. ಸೀರೆಗಳನ್ನು ವಿಶಿಷ್ಟ ಶೈಲಿಯಲ್ಲಿ ಧರಿಸಲಾಗುತ್ತದೆ, ಇದರಿಂದಾಗಿ ನರ್ತಕಿ ವಿವಿಧ ಚಲನೆಗಳನ್ನು ತೊಂದರೆಯಿಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ. ಪುರುಷ ಪ್ರದರ್ಶನಕಾರರು ರೇಷ್ಮೆ ಧೋತಿ, ಶಲ್ಯ ಮತ್ತು ಆಭರಣಗಳನ್ನು ಧರಿಸುತ್ತಾರೆ.
  • ನಾಟ್ಯ ಪಟುಗಳು : ಭರತನಾಟ್ಯವನ್ನು ಪುರುಷ ಮತ್ತು ಸ್ತ್ರೀ ಕಲಾವಿದರು ಇಬ್ಬರೂ ಕಲಿಯಬಹುದು. ಆದಾಗ್ಯೂ ಭರತನಾಟ್ಯ ಕಲಾವಿದರಲ್ಲಿ  ಸ್ತ್ರೀಯರದೇ  ಸಿಂಹಪಾಲು. ಯುವತಿಯರು ಶಾಲಾ ದಿನಗಳಿಂದ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸುತ್ತಾರೆ ಮತ್ತು ಪರಿಣಿತ ಗುರುಗಳ  ಅಡಿಯಲ್ಲಿ ವರ್ಷಗಳ ಅಭ್ಯಾಸದ ನಂತರ ರಂಗ ಪ್ರವೇಶ  (ದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ಬೇಕಾಗುವ  ಅನುಭವ ಮತ್ತು ವಿಶ್ವಾಸವನ್ನು ತೋರಿಸಿಕೊಡುವ ಪ್ರತಿಭಾ ಪ್ರದರ್ಶನ) ಮಾಡುತ್ತಾರೆ. 
  • ಏಕವ್ಯಕ್ತಿ / ಗುಂಪು: ಭರತನಾಟ್ಯವನ್ನು ಏಕವ್ಯಕ್ತಿ ಅಭಿನಯ ಅಥವಾ ಸಣ್ಣ ಗುಂಪಿನಲ್ಲಿ ಕೂಡ ನಿರ್ವಹಿಸಬಹುದು.

ಭರತನಾಟ್ಯವನ್ನು ಎಲ್ಲಿ ನೋಡಬಹುದು?

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲೆ / ಕಾಲೇಜು ಉತ್ಸವಗಳು ಮತ್ತು ಸ್ಪರ್ಧೆಗಳಲ್ಲಿ ಭರತನಾಟ್ಯ ಪ್ರದರ್ಶನ ನಿಯಮಿತವಾಗಿ ನಡೆಯುತ್ತದೆ. ವಿವಿಧ ನೃತ್ಯ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಪ್ರದರ್ಶನಗಳನ್ನು ಹಾಗೂ ‘ರಂಗಪ್ರವೇಶ’ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳಾದ ಹಂಪಿ ಉತ್ಸವ, ಬೆಂಗಳೂರು ಹಬ್ಬ, ಪಟ್ಟದಕಲ್ಲು ನೃತ್ಯೋತ್ಸವವು ಸಾಮಾನ್ಯವಾಗಿ ಭರತನಾಟ್ಯ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಹತ್ತಿರದ ಭರತನಾಟ ಪ್ರದರ್ಶನವನ್ನು ಗುರುತಿಸಲು ಸ್ಥಳೀಯ ಮಾಧ್ಯಮದಲ್ಲಿ ಪರಿಶೀಲಿಸಿ ಅಥವಾ ನಿಮ್ಮ ಹೋಟೆಲ್ ಸಿಬ್ಬಂದಿಯ  ಸಹಾಯ ಪಡೆಯಿರಿ.