ಗೋಕಾಕ್ ಜಲಪಾತವು ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ ಮತ್ತು ಈ ಪ್ರದೇಶಗಳಲ್ಲಿ ಹೇರಳವಾಗಿ ಕಂಡುಬರುವ “ಗೋಕಿ” ಮರಗಳಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಜಲಪಾತದ ವೈಶಿಷ್ಟ್ಯಗಳು, ಆಕಾರ ಇತ್ಯಾದಿಗಳಿಂದಾಗಿ ಇದು ನಯಾಗರಾ ಜಲಪಾತವನ್ನು ಹೋಲುತ್ತದೆ. ಇಲ್ಲಿ, ಘಟಪ್ರಭಾ ನದಿಯು 52 ಮೀಟರ್ ಎತ್ತರದಿಂದ ಮರಳುಗಲ್ಲಿನ ಬಂಡೆಯ ಮೇಲೆ, ಒರಟಾದ ಕಣಿವೆಯ ರಮಣೀಯ ಕಮರಿಯ ಮಧ್ಯೆ, ಸುಂದರ ನೋಟವನ್ನು ಸೃಷ್ಟಿಸುತ್ತದೆ. ಸುಮಾರು 1887 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದಿಸಿದ ಕೀರ್ತಿ ಈ ಸ್ಥಳಕ್ಕಿದೆ. ಗೋಕಾಕ್ ಜಲಪಾತದ ಪ್ರಮುಖ ಆಕರ್ಷಣೆಯೆಂದರೆ, ಬಂಡೆಯ ಬುಡದಿಂದ 14 ಮೀಟರ್ ಎತ್ತರದಲ್ಲಿರುವ 200 ಮೀಟರ್ ಉದ್ದದ ತೂಗು ಸೇತುವೆ. ಪ್ರವಾಸಿಗರು ಕಲ್ಲಿನ ಕಮರಿಯ ಎರಡೂ ಬದಿಯಲ್ಲಿರುವ ದುರ್ಗಾ ದೇವಿ, ಷಣ್ಮುಖ ದೇವರು ಮತ್ತು ಮಹಾಲಿಂಗೇಶ್ವರ ದೇವಾಲಯಗಳನ್ನು ಒಳಗೊಂಡಂತೆ ಸಾಂಪ್ರದಾಯಿಕ ಚಾಲುಕ್ಯ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಸ್ಮಾರಕಗಳಿಗೂ ಭೇಟಿ ನೀಡಬಹುದು.
ಗೋಕಾಕ್ ಜಲಪಾತಕ್ಕೆ ಭೇಟಿ ನೀಡಲು ಕಾರಣಗಳು
ತೂಗು ಸೇತುವೆ : ನದಿಗೆ ಅಡ್ಡಲಾಗಿ ನಿರ್ಮಿಸಲಾದ 200 ಮೀಟರ್ ಉದ್ದದ ಈ ಸೇತುವೆಯು ಜಲಪಾತದ ಎತ್ತರದ ನೋಟವನ್ನು ನೀಡುತ್ತದೆ.
ಶ್ರೀ ಮಹಾಲಿಂಗೇಶ್ವರ ದೇವಾಲಯ : ಚಾಲುಕ್ಯ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ.
ಕೆಂಪಳೆ ಪಾರ್ಕ್ ಸಸ್ಯೋದ್ಯಾನಗಳು :
ಯೋಗಿ ಕೊಳ ಚಾರಣ : ಜಲಪಾತದಿಂದ 3 ಕಿ.ಮೀ ದೂರದಲ್ಲಿರುವ ಜನಪ್ರಿಯ ಚಾರಣ ತಾಣ.
ಮಲಪ್ರಭಾ ದೋಣಿ ವಿಹಾರ : ಜಲಪಾತದಿಂದ 8 ಕಿ.ಮೀ ದೂರದಲ್ಲಿರುವ ಮಾರ್ಕಂಡೇಯ ನದಿಯಲ್ಲಿ ದೋಣಿ ವಿಹಾರದ ಆಯ್ಕೆಗಳು.
ಇತರ ದೇವಾಲಯಗಳು : ಯೋಗಿಕೊಳ್ಳ ಮಲ್ಲಿಕಾರ್ಜುನ ದೇವಾಲಯ, ಕರಿಯಮ್ಮ ದೇವಾಲಯ, ಲಕ್ಷ್ಮಿ ದೇವಾಲಯ ಮತ್ತು ಇನ್ನಿತರ ದೇವಾಲಯಗಳು.
ಹತ್ತಿರದ ಸ್ಥಳಗಳು
ಗೋಕಾಕ್ ಜಲಪಾತದೊಂದಿಗೆ ಹೆಚ್ಚಾಗಿ ಗೊಡಚಿನ್ಮಲ್ಕಿ ಜಲಪಾತಗಳು (ಗೋಕಾಕ್ ಜಲಪಾತದಿಂದ 13 ಕಿ.ಮೀ) ಮತ್ತು ಸವದತ್ತಿ ಎಲ್ಲಮ್ಮ (73 ಕಿ.ಮೀ) ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ.
