Karnataka Tourism
GO UP

ಫೆಬ್ರವರಿ 2023

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿ ಬೈಲುಕುಪ್ಪೆ ಮೈಸೂರಿನಿಂದ ಕೇವಲ 80 ಕಿ.ಮೀ ದೂರದಲ್ಲಿದ್ದು ಹಲವಾರು ಟಿಬೆಟಿಯನ್ ವಸಾಹತುಗಳಿಗೆ ನೆಲೆಯಾಗಿದೆ. ಬೈಲಕುಪ್ಪೆ ವಿಶ್ವದಲ್ಲಿ ಧರ್ಮಶಾಲಾ ನಂತರ ಎರಡನೇ ಅತಿದೊಡ್ಡ ಟಿಬೆಟಿಯನ್ ವಸಾಹತು ಆಗಿದೆ. ಈ ಟಿಬೆಟಿಯನ್ ವಸಾಹತುಗಳನ್ನು 1961 ಮತ್ತು 1969 ರಲ್ಲಿ ಸ್ಥಾಪಿಸಲಾಯಿತು ಮತ್ತು ಈಗ ಇವುಗಳು ಪೂರ್ಣ ಪ್ರಮಾಣದ ಟೌನ್‌ಶಿಪ್‌ಗಳಾಗಿವೆ.

ಹೊನ್ನಾವರದ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ , ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಉತ್ತರ ಕನ್ನಡದ ಸುಂದರವಾದ ಈ ಚಿಕ್ಕ ಪಟ್ಟಣವು ಪ್ರಕೃತಿಯ ಅದ್ಭುತ ಕೊಡುಗೆ ಆಗಿದೆ. ನೀವು ಹೊನ್ನಾವರವನ್ನು ಬೆಂಗಳೂರು, ಮಂಗಳೂರು, ಗೋವಾ ಮತ್ತು ಶಿವಮೊಗ್ಗದಿಂದ ಸುಲಭವಾಗಿ ತಲುಪಬಹುದು.