Karnataka Tourism
GO UP

ನವೆಂಬರ್ 2022

ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಬೆಳಗಾವಿಯು ಅನೇಕ ನೈಸರ್ಗಿಕ ಅದ್ಭುತಗಳಿಗೆ ನೆಲೆಯಾಗಿದೆ. ಉತ್ತರ ಕರ್ನಾಟಕದ ಐತಿಹಾಸಿಕ ಪಟ್ಟಣವಾಗಿರುವ ಬೆಳಗಾವಿಯನ್ನು ಹಿಂದೆ ಬೆಳಗಾಮ್ ಎಂದು ಕರೆಯಲಾಗುತ್ತಿತ್ತು, ಇದು ಮಲೆನಾಡು ಪ್ರದೇಶದಲ್ಲಿದ್ದು ವರ್ಷವಿಡೀ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಬೆಳಗಾವಿಯು ಅನೇಕ ಐತಿಹಾಸಿಕ ಸ್ಥಳಗಳು ಮತ್ತು ದೇವಾಲಯಗಳಿಗೆ ನೆಲೆಯಾಗಿದೆ.

ಸಾಂಸ್ಕೃತಿಕ,ಪಾರಂಪಾರಿಕ, ಶೈಕ್ಷಣಿಕ ಮತ್ತು ಐತಿಹಾಸಿಕ ಪ್ರಸಿದ್ಧವಾಗಿರುವ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಪ್ರವಾಸಿಗರಿಗೆ ಬೇಕಾದ ಎಲ್ಲವನ್ನೂ ಹೊಂದಿದೆ. ಧಾರವಾಡವು ಚಾಲುಕ್ಯರು, ಬಹಮನಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾಹಿಗಳು, ಮೊಘಲರು, ಶಿವಾಜಿ ಮಹಾರಾಜರು, ಪೇಶ್ವೆ ಬಾಲಾಜಿ ರಾವ್, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರಿಂದ ಆಳಲ್ಪಟ್ಟಿತ್ತು. ಧಾರವಾಡವು ಶೈಕ್ಷಣಿಕ ಮತ್ತು ಕೃಷಿ ವಿಜ್ಞಾನಗಳ ಕೇಂದ್ರವಾಗಿರುವುದರಿಂದ ಇಲ್ಲಿ ನೀವು

ನೀವು ಬೆಂಗಳೂರಿನಿಂದ ಮೈಸೂರು ಅಥವಾ ಮಡಿಕೇರಿ ಕಡೆಗೆ ಪ್ರಯಾಣಿಸುವಾಗ ರಾಮನಗರಕ್ಕೆ ಬರಲೇ ಬೇಕು. ರಾಮನಗರವು ಹಲವು ಆಕರ್ಷಣೆಗಳನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ರೇಷ್ಮೆ ಸೀರೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಏಷ್ಯಾ ಮತ್ತು ಭಾರತದಲ್ಲಿ ರೇಷ್ಮೆ ಕೋಕೂನ್‌ಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿರುವ ರಾಮನಗರವು ‘ಸಿಲ್ಕ್ ಸಿಟಿ’ ಎಂದೂ ಜನಪ್ರಿಯವಾಗಿದೆ.

50 ಮಸೀದಿಗಳು, 20ಕ್ಕೂ ಹೆಚ್ಚು ಸಮಾಧಿಗಳು, ಕೆಲವು ಅರಮನೆಗಳು ಮತ್ತು ಅವಶೇಷಗಳನ್ನು ಹೊಂದಿರುವ ವಿಜಯಪುರವು, ರಾಜ್ಯದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಪಟ್ಟಣಗಳಲ್ಲಿ ಒಂದಾಗಿದೆ. ಹಿಂದೆ ಬಿಜಾಪುರ ಎಂದು ಕರೆಯಲ್ಪಡುತ್ತಿದ್ದ ವಿಜಯಪುರ, ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೋಲಾಪುರ ಪಟ್ಟಣಗಳಿಗೆ ಹತ್ತಿರದಲ್ಲಿದೆ. ನಿಸ್ಸಂದೇಹವಾಗಿ ವಿಜಯಪುರವು ನೋಡಲು ಆಸಕ್ತಿದಾಯಕವಾದ ಅನೇಕ ಸ್ಥಳಗಳನ್ನು