ಡಿಸೆಂಬರ್ನಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು
ನಮ್ಮ ಕರ್ನಾಟಕವು ವರ್ಷಪೂರ್ತಿ ಸುಂದರವಾಗಿ ಕಂಗೊಳಿಸುತ್ತದೆ, ಆದರೆ ಕರ್ನಾಟಕದಲ್ಲಿ ಡಿಸೆಂಬರ್ ತಿಂಗಳು ತನ್ನೊಂದಿಗೆ ಪೌರಾಣಿಕ ಆಕರ್ಷಣೆಯನ್ನು ತರುತ್ತದೆ. ನೀವು ಈ ಸುಂದರ ಅನುಭವಗಳನ್ನು ನಿಮ್ಮದಾಗಿಸಿಕೊಳ್ಳಬೇಕು.
ಕರಾವಳಿ ಕರ್ನಾಟಕದ ಪ್ರವಾಸಿ ಸ್ಥಳಗಳು
ಕರಾವಳಿ ಕರ್ನಾಟಕವು ಮರಳಿನ ಕಡಲತೀರಗಳು, ಹಚ್ಚ ಹಸಿರು ಪ್ರಕೃತಿ, ಉತ್ಸಾಹಭರಿತ ಸಂಸ್ಕೃತಿ, ಭವ್ಯವಾದ ದೇವಾಲಯಗಳು ಮತ್ತು ರುಚಿಕರವಾದ ತಿನಿಸುಗಳಿಗೆ ಹೆಸರುವಾಸಿ ಆಗಿದೆ. ದೈನಂದಿನ ಜೀವನದ ಜಂಜಾಟದಿಂದ ಹೊರಬರಲು ವಿಶ್ರಾಂತಿಗಾಗಿ ನೀವು ಪ್ರವಾಸಿ ಸ್ಥಳಗಳನ್ನು ಹುಡುಕಾಡುತ್ತಿದ್ದರೇ ಕರಾವಳಿ ಕರ್ನಾಟಕದ ಪಟ್ಟಣಗಳು ನಿಮಗೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ.
ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣವು ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಒಂದು. ಕಾವೇರಿ ನದಿಯ ದ್ವೀಪವಾದ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಾಲಯವು ದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಹೆಸರುವಾಸಿ ಆಗಿದೆ. ಇದು ವಿಷ್ಣುವಿನ ಅವತಾರವಾದ ರಂಗನಾಥನಿಗೆ ಸಮರ್ಪಿತವಾಗಿದೆ. ಇದು ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರ (ವಿಷ್ಣುಗೆ ಅರ್ಪಿತವಾದ ಐದು ಪ್ರಮುಖ ದೇವಾಲಯಗಳು) ಎಂದು ಪರಿಗಣಿಸಲಾಗಿದೆ. ಪ್ರಧಾನ ದೇವತೆಯನ್ನು ಆದಿ ರಂಗ ಎಂದು ಕರೆಯಲಾಗುತ್ತದೆ
ಕ್ರಿಸ್ಮಸ್ ಹಬ್ಬದ ಆಚರಣೆ
ಇಡೀ ಪ್ರಪಂಚವು ಯೇಸುಕ್ರಿಸ್ತನ ಜನ್ಮದಿನವನ್ನು ಪ್ರತಿ ವರ್ಷ, ಡಿಸೆಂಬರ್ 25 ರಂದು ಕ್ರಿಸ್ಮಸ್ ಎಂದು ಆಚರಿಸುತ್ತದೆ. ಕ್ರಿಶ್ಚಿಯನ್ ಧರ್ಮದ ಪ್ರಕಾರ, ಯೇಸು ಕ್ರೈಸ್ತರನ್ನು "ದೇವರ ಮಗ" ಎಂದು ನಂಬಲಾಗಿದೆ . ಹೀಗಾಗಿ ಯೇಸುವಿನ ಜನ್ಮದಿನವು ನಮಗೆಲ್ಲರಿಗೂ ದೇವರ ಅನಂತ ಆಶೀರ್ವಾದಗಳ ಸ್ಮರಣೆಯಾಗಿದೆ. ಕ್ರಿಸ್ಮಸ್ ಹಬ್ಬವು ಭಗವಂತನು ನಮ್ಮ ಮೇಲೆ ತನ್ನ