Karnataka logo

Karnataka Tourism
GO UP
world tourism day

ವಿಶ್ವ ಪ್ರವಾಸೋದ್ಯಮ ದಿನ

separator
  /  ವಿಶ್ವ ಪ್ರವಾಸೋದ್ಯಮ ದಿನ
World Tourism Day

ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು 1980 ರಿಂದ ಆಚರಿಸುತ್ತಿದೆ. ಹಲವಾರು ಪ್ರವಾಸಿ ಕೇಂದ್ರಗಳು, ಸಂಘಟನೆಗಳು ಮತ್ತು ಸರ್ಕಾರಿ ಏಜನ್ಸಿಗಳು ಈ ದಿನವನ್ನು  ಆಚರಿಸುವಲ್ಲಿ ವಿಶೇಷ ಆಸಕ್ತಿಹೊಂದಿವೆ. 

ಪ್ರವಾಸ ಮಾಡುವುದರಿಂದ ನಮ್ಮ ಜೀವನದ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಅರ್ಥಿಕ ಪರಿಣಾಮವನ್ನು  ಬೀರುತ್ತದೆ. ಪ್ರವಾಸೋದ್ಯಮ ದಿನ ಆಚರಿಸುವ ಮುಖ್ಯ ಉದ್ದೇಶ ಏನೆಂದರೆ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ .

ಈ ವರ್ಷದ ವಿಷಯ “ಪ್ರವಾಸೋದ್ಯಮ ಮತ್ತು ಉದ್ಯೋಗ: ಎಲ್ಲರಿಗೂ ಉತ್ತಮ ಭವಿಷ್ಯ” ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಇದು ಅತ್ಯಂತ ಸೂಕ್ತವಾಗಿದೆ. ಏಕಂದರೆ, ಪ್ರಪಂಚದ ಅನೇಕ ರಾಷ್ಟ್ರಗಳು ತಮ್ಮ ಅರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರವಾಸೋದ್ಯಮದ ಮೊರೆಹೋಗಿವೆ.

ಕೋವಿಡ್ -19 ಕಾರಣದಿಂದ, ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಅಧಿಕೃತ ಆಚರಣೆಯನ್ನು ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿಯ ಒಂದೇ ಸದಸ್ಯ ರಾಷ್ಟ್ರ ಆಯೋಜಿಸುವುದಿಲ್ಲ. ಆದರೂ , ಮರ್ಕೊಸೂರ್ ಬ್ಲಾಕ್ ರಾಷ್ಟ್ರಗಳು (ಚಿಲಿಯೊಂದಿಗೆ ಅರ್ಜೆಂಟೀನಾ, ಬ್ರೆಜಿಲ್, ಪರಾಗ್ವೆ ಮತ್ತು ಉರುಗ್ವೆ, ವೀಕ್ಷಕರ ಸ್ಥಾನಮಾನದೊಂದಿಗೆ ಸೇರಿಕೊಳ್ಳುತ್ತವೆ) ಜಂಟಿ ಆತಿಥೇಯರಾಗಿ ಕಾರ್ಯನಿರ್ವಹಿಸುತ್ತವೆ. ಸಹ-ಆತಿಥೇಯರ ಒಪ್ಪಂದವು ಪ್ರವಾಸೋದ್ಯಮದ ಮೂಲಕ ಸಾಗುವ ಅಂತರರಾಷ್ಟ್ರೀಯ ಒಗ್ಗಟ್ಟಿನ ಮನೋಭಾವವನ್ನು ಪ್ರತಿನಿಧಿಸುತ್ತದೆ ಮತ್ತು UNWTO ಅಂತರರಾಷ್ಟ್ರೀಯ ಚೇತರಿಕೆ ಎಂದು ಗುರುತಿಸಿದೆ.