Karnataka logo

Karnataka Tourism
GO UP
mysuru dasara

ಮೈಸೂರು ದಸರಾ -2021

ಮೈಸೂರು ದಸರಾ -2021

ಮೈಸೂರು ದಸರಾ ಭಾರತದ ಅತ್ಯಂತ ಆಕರ್ಷಣೀಯವಾದ ಹಬ್ಬದ ಆಚರಣೆಗಳಲ್ಲಿ ಒಂದಾಗಿದೆ. ಇದನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ನವರಾತ್ರಿಯ ಸಮಯದಲ್ಲಿ 10 ದಿನಗಳ ಹಬ್ಬವನ್ನು ಆಚರಿಸಲಾಗುತ್ತದೆ. ಹತ್ತನೆಯ ದಿನ ವಿಜಯದಶಮಿಯಂದು ದಸರಾ ಹಬ್ಬ ಮುಕ್ತಾಯವಾಗುತ್ತದೆ. ಈ ಹಬ್ಬದ ಸಮಯದಲ್ಲಿ ಇಡೀ ಮೈಸೂರು ನಗರವು ಧಾರ್ಮಿಕ ವಾತಾವರಣ ಮತ್ತು ವರ್ಣರಂಜಿತ ಅಲಂಕಾರಗಳಲ್ಲಿ ಕಂಗೊಳಿಸುತ್ತದೆ. ಇದು ಕನ್ನಡ ನಾಡಿನ ಸಾಂಸ್ಕೃತಿಕ ಸಂಭ್ರಮವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತದೆ. ಪುರಾಣಗಳ ಪ್ರಕಾರ ದೇವಿ ಚಾಮುಂಡೇಶ್ವರಿ (ದುರ್ಗಾ) ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಒಂಬತ್ತು ರಾತ್ರಿ ಭೀಕರ ಹೋರಾಟ ಮಾಡಿ 10 ನೇ ದಿನ ಮಹಿಷಾಸುರನನ್ನು ಸಂಹರಿಸಿದಳು. ಅದಕ್ಕಾಗಿಯೇ ಈ ಪಟ್ಟಣಕ್ಕೆ ಮಹಿಷಾಸುರ ಎಂದು ಹೆಸರಿಡಲಾಯಿತು. ಈ ಮಹಿಷಾಸುರ ಎಂಬ ಹೆಸರೇ ಮುಂದೆ ಮೈಸೂರು ಎಂದು ಪ್ರಸಿದ್ಧವಾಯಿತು ಎಂಬ ನಂಬಿಕೆ ಇದೆ. ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಮೈಸೂರು ದಸರಾ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ.

ಐತಿಹಾಸಿಕ ಮಹತ್ವವುಳ್ಳ ಈ ಹಬ್ಬವು 15 ನೇ ಶತಮಾನದಲ್ಲಿ ವಿಜಯನಗರ ರಾಜರ ಕಾಲದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆಯಿತು. ಅಂದಿನಿಂದ ಈ ಹಬ್ಬವನ್ನು ದೇವಿಯನ್ನು ಪೂಜಿಸುವ ಮೂಲಕ, ಭವ್ಯ ಮೆರವಣಿಗೆಗಳನ್ನು ಆಯೋಜಿಸುವ ಮೂಲಕ, ಆಯುಧಗಳನ್ನು ಪೂಜಿಸುವ ಮೂಲಕ ಆಚರಿಸಲು ಆರಂಭಿಸಲಾಯಿತು. ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೇ ಜಂಬೂ ಸವಾರಿ ಅಥವಾ ಆನೆಗಳ ಮೆರವಣಿಗೆ. ಇದು ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುತ್ತದೆ. ಈ ಮೆರವಣಿಗೆಯಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟ ಆನೆಗಳನ್ನು ಬೀದಿಗಳಲ್ಲಿ ಮೆರವಣಿಗೆ ಕರೆದೊಯ್ಯಲಾಗುತ್ತದೆ, ಅವುಗಳಲ್ಲಿ ಒಂದು ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತೊಯ್ಯುತ್ತದೆ. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಖಡ್ಗ ಕಲಾವಿದರು, ನೃತ್ಯಗಾರರು ಮತ್ತು ಸಂಗೀತಗಾರರು ತಮ್ಮ ಕಲಾತ್ಮಕತೆಯನ್ನು ಪ್ರದರ್ಶಿಸುತ್ತಾರೆ. ಈ ಶ್ರೀಮಂತ ದೃಶ್ಯವನ್ನು ತಮ್ಮ ಕಣ್ಮನಗಳಲ್ಲಿ ತುಂಬಿಕೊಳ್ಳಲು ಸಹಸ್ರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಅಲ್ಲದೇ ಈ ಸಮಯದಲ್ಲಿ ಮೈಸೂರು ಅರಮನೆಯು ಸಾವಿರಾರು ದೀಪಗಳಿಂದ ವರ್ಣರಂಜಿತವಾಗಿ ಬೆಳಗುತ್ತದೆ.

ಈ ದೀಪ ಅಲಂಕಾರವನ್ನು ನೋಡುವುದೆಂದರೇ ಕಣ್ಣಿಗೆ ಹಬ್ಬವೋ ಹಬ್ಬ. ಈ ಉತ್ಸವದ ವೈಭವವನ್ನು ಇಮ್ಮಡಿಗೊಳಿಸಲು ದೊಡ್ಡಕೆರೆ ಮೈದಾನದಲ್ಲಿ ಅತ್ಯಾಕರ್ಷಕ ಪ್ರದರ್ಶನವನ್ನು ಸಹ ನಡೆಸಲಾಗುತ್ತದೆ. ರಾಜ್ಯದ ಸಂಸ್ಕೃತಿ, ಸಂಪ್ರದಾಯ ಮತ್ತು ಪಾಕಶಾಲೆಯ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ನೀವು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಬಹುದು. ನೀವು ಇಲ್ಲಿ ಸುಂದರವಾದ ಸಾಂಪ್ರದಾಯಿಕ ಬಟ್ಟೆಗಳನ್ನು ಮತ್ತು ಇತರ ಸುಂದರ ವಸ್ತುಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಪ್ರದರ್ಶನವು ಮೈಸೂರು ದಸರಾದಲ್ಲಿ ಪ್ರಾರಂಭವಾಗುತ್ತದೆ ಮತ್ತು ಸಾರ್ವಜನಿಕರಿಗೆ ಡಿಸೆಂಬರ್ ವರೆಗೆ ತೆರೆದಿರುತ್ತದೆ. ನೀವು ರಾಜ್ಯದ ಅತ್ಯುತ್ತಮವಾದದನ್ನು ನೋಡಲು ಬಯಸಿದಲ್ಲಿ ಮೈಸೂರು ದಸರಾ ಹಬ್ಬದ ಹತ್ತು ದಿನಗಳು ಒಂದು ಪರಿಪೂರ್ಣ ಆಯ್ಕೆಯಾಗಿ ಕಾಣುತ್ತದೆ. ನೀವು ಈ ಸಮಯದಲ್ಲಿ ನಗರದಲ್ಲಿ ಪ್ರಯಾಣಿಸುವಾಗ ಸುತ್ತಲೂ ಉತ್ಸಾಹ, ಉಲ್ಲಾಸ ಮತ್ತು ಸಂತೋಷವನ್ನು ಅನುಭವಿಸುವಿರಿ. ಮೈಸೂರು ದಸರಾ ಭಾರತದಾದ್ಯಂತ ತನ್ನ ಸಂಭ್ರಮದ ಆಚರಣೆಗೆ ಹೆಸರುವಾಸಿಯಾಗಿದೆ. ಕೋವಿಡ್ -19 ಸುರಕ್ಷತೆ ಮಾರ್ಗಸೂಚಿಗಳ ಅನುಸಾರವಾಗಿ ಕರ್ನಾಟಕ ಸರ್ಕಾರವು ಈ ಮಹತ್ವದ ಹಬ್ಬವನ್ನು ಅಕ್ಟೋಬರ್ 7 ರಿಂದ 15 ರವರೆಗೆ ಸರಳವಾಗಿ ಆಚರಿಸಲು ನಿರ್ಧರಿಸಿದೆ. ಯಾವುದೇ ದೊಡ್ಡ ಸಾರ್ವಜನಿಕ ಕೂಟಗಳಿಲ್ಲದಿದ್ದರೂ ಸಹ ಇನ್ನೂ ಈ ಅತಿರಂಜಿತ ಹಬ್ಬದ ಭಾಗವಾಗಬಹುದು.

ಗ್ಯಾಲರಿ

mysuru
mysore dasara Events
mysuru night view
mysuru night view
mysuru dasara

ಮೈಸೂರು ದಸರಾ ಆಚರಣೆಗಳು 2021

[MEC id=”119894″]