Karnataka logo

Karnataka Tourism
GO UP
Best Places To Explore in Western Ghats

ಪಶ್ಚಿಮ ಘಟ್ಟ ಪ್ರದೇಶದ ಆಕರ್ಷಕ ಸ್ಥಳಗಳು

separator
  /  ಬ್ಲಾಗ್   /  ಪಶ್ಚಿಮ ಘಟ್ಟ ಪ್ರದೇಶದ ಆಕರ್ಷಕ ಸ್ಥಳಗಳು
ಪಶ್ಚಿಮ ಘಟ್ಟ ಪ್ರದೇಶದ ಆಕರ್ಷಕ ಸ್ಥಳಗಳು

ಪಶ್ಚಿಮ ಘಟ್ಟ ಪ್ರದೇಶದ ಆಕರ್ಷಕ ಸ್ಥಳಗಳು

ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿಗಳು ಇವು ಗಿರಿಧಾಮಗಳು, ಜೀವವೈವಿಧ್ಯಗಳು, ಜಲಪಾತಗಳು, ನದಿಗಳು, ಕಾನನಗಳು, ಸುಂದರ ಪಟ್ಟಣಗಳು, ಸ್ಮಾರಕಗಳು, ದೇವಾಲಯಗಳು ಎಲ್ಲವುಗಳಿಗೆ ನೆಲೆಯಾಗಿದೆ. ಪಶ್ಚಿಮ ಘಟ್ಟಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿವೆ. ಒಮ್ಮೆಯಾದರೂ ಅದ್ಭುತ ಜೀವಮಾನದ ಅನುಭವಕ್ಕಾಗಿ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡಲೇ ಬೇಕು. ಪ್ರವಾಸಿಗರಿಗೆ ಅನುಕೂಲವಾಗಲೆಂದು ಪಶ್ಚಿಮ ಘಟ್ಟದ ಕೆಲವು ಆಕರ್ಷಕ ಸ್ಥಳಗಳ ಕುರಿತು ವಿವರಣೆಯನ್ನು ಕೆಳಗೆ ನೀಡಲಾಗಿದೆ.

 

ಆಗುಂಬೆ :

Agumbe

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿರುವ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾದ ಆಗುಂಬೆ ತನ್ನ ಮನಮೋಹಕ ನೈಸರ್ಗಿಕ ಸೌಂದರ್ಯದಿಂದ ಜನರ ಕಣ್ಮನಗಳನ್ನು ಸೆಲೆಯುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಪಟ್ಟಣವು ರಮಣೀಯ ಬೆಟ್ಟ,ಗುಡ್ಡಗಳಿಂದ ಸುತ್ತುವರೆದಿದ್ದು ಸೊಂಪಾದ ಕಾಡುಗಳು ಮತ್ತು ಸಮೃದ್ಧ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. ಹಲವಾರು ಚಾರಣದ ಹಾದಿಗಳು ಮತ್ತು ಪ್ರಕೃತಿ ಮಾರ್ಗಗಳನ್ನು ಹೊಂದಿರುವ ಆಗುಂಬೆ ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಇಲ್ಲಿ ಸಾಯಂಕಾಲ ಸೂರ್ಯಾಸ್ತವನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಇಷ್ಟೇ ಅಲ್ಲ, ಈ ಪ್ರದೇಶವು ಅನೇಕ ಪೂಜ್ಯ ದೇವಾಲಯಗಳು ಮತ್ತು ಸ್ಮಾರಕಗಳಿಗೆ ನೆಲೆಯಾಗಿದೆ. ಆಗುಂಬೆಗೆ ಭೇಟಿ ನೀಡುವ ಪ್ರವಾಸಿಗರು ಇದಕ್ಕೆ ಹತ್ತಿರವಿರುವ ಶೃಂಗೇರಿಗೆ ಭೇಟಿ ನೀಡಲು ಮರೆಯುವುದಿಲ್ಲ.

 

ದಾಂಡೇಲಿ:

Belagum Ganesh

ದಾಂಡೇಲಿ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಚಿಕ್ಕ ಪಟ್ಟಣವಾಗಿದ್ದು ಸಾಹಸವನ್ನು ಇಷ್ಟಪಡುವವ ಸಾಹಸರಿಗೆ ಅತ್ಯುತ್ತಮ ಸ್ಥಳವಾಗಿದೆ., ದಾಂಡೇಲಿಯು ಪ್ರಸಿದ್ಧ ವನ್ಯಜೀವಿ ಆವಾಸಸ್ಥಾನವಾಗಿದ್ದು ಇಲ್ಲಿಗೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಥಳವು ವನ್ಯಜೀವಿ ಸಫಾರಿಗಳು, ಚಾರಣ, ಕ್ಯಾಂಪಿಂಗ್ ಮತ್ತು ವೈಟ್‌ವಾಟರ್ ರಾಫ್ಟಿಂಗ್ ಸೇರಿದಂತೆ ವನ್ಯಜೀವಿ ಉತ್ಸಾಹಿಗಳು ಮತ್ತು ಸಾಹಸಪ್ರಿಯರನ್ನು ಆಕರ್ಷಿಸಲು ಬೇಕಾದ ಎಲ್ಲ ಚಟುವಟಿಕೆಗಳನ್ನು ಹೊಂದಿದೆ. ನಿಮ್ಮ ರಜೆಯ ಸಮಯವನ್ನು ಅದ್ಭುತವಾಗಿ ಕಳೆಯುವ ಸಲುವಾಗಿ ಕರ್ನಾಟಕದಲ್ಲಿ ಭೇಟಿ ನೀಡಲು ಇದು ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ.

 

ಮಡಿಕೇರಿ, ಕೂರ್ಗ:

Mangalore
ಕೂರ್ಗನ ಸುಂದರ ರಾಜಧಾನಿ ಆಗಿರುವ ಮಡಿಕೇರಿಯು ಒಂದು ನೈಸರ್ಗಿಕ ಸೊಬಗಿನಿಂದ ಕೂಡಿದ ಒಂದು ವಿಹಂಗಮ ಸ್ಥಳವಾಗಿದೆ. ಇದು ಪಶ್ಚಿಮ ಘಟ್ಟ ಪ್ರದೇಶಗಳ ಅತ್ಯಂತ ಜನಪ್ರಿಯ ಪ್ರದೇಶಗಳಲ್ಲಿ ಒಂದು. ಪ್ರವಾಸಿಗರು ಮಡಿಕೇರಿಗೆ ಭೇಟಿ ನೀಡಿ ಇಲ್ಲಿ ಸೌಂದರ್ಯವನ್ನು ಆಸ್ವಾದಿಸಲೇಬೇಕು. ಮಡಿಕೇರಿಯಲ್ಲಿ ಪ್ರವಾಸಿಗರು ಆನಂದಿಸಲು ಹಲವಾರು ಸ್ಥಳಗಳಿವೆ. ಮಡಿಕೇರಿ ಕೋಟೆ, ಓಂಕಾರೇಶ್ವರ ದೇವಸ್ಥಾನ, ಮತ್ತು ಸೇಂಟ್ ಮಾರ್ಕ್ಸ್ ಚರ್ಚ್- ಇವೆಲ್ಲವೂ ಇಲ್ಲಿ ಪ್ರವಾಸಿಗರು ಭೇಟಿ ನೀಡಬೇಕಾದ ಪ್ರಸಿದ್ಧ ತಾಣಗಳಾಗಿವೆ. ಈ ಪ್ರದೇಶವು ಸುಂದರ ಭೂದೃಶ್ಯ, ಜಲಪಾತಗಳು ಮತ್ತು ದಟ್ಟವಾದ ಕಾಡುಗಳಿಂದ ಕೂಡಿದ್ದು ಈ ಗಿರಿಧಾಮವು ಹನಿಮೂನಗೆ ಬರುವವರ ಮೊದಲ ಆಯ್ಕೆಯಾಗಿದೆ. ವನ್ಯಜೀವಿ ಪ್ರೇಮಿಗಳು ಮತ್ತು ಪಕ್ಷಿ ವೀಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಆನಂದಿಸುತ್ತಾರೆ.

 

ಚಿಕ್ಕಮಂಗಳೂರು:

Bangalore Ganesh
‘ಕರ್ನಾಟಕದ ಕಾಫಿ ನಾಡು’ ಎಂದು ಜನಪ್ರಿಯ ಹೆಸರಿನಿಂದ ಕರೆಯಲ್ಪಡುವ ಚಿಕ್ಕಮಗಳೂರು ಪಶ್ಚಿಮ ಘಟ್ಟದ ಇನ್ನೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಹಚ್ಚ ಹಸಿರಿನ ಕಾಡುಗಳು, ಕಾಫಿ ತೋಟಗಳ ಆಹ್ಲಾದಕರ ಸುವಾಸನೆ, ಅದ್ಭುತ ಜಲಪಾತಗಳು ಮತ್ತು ವಿವಿಧ ದೇವಾಲಯಗಳಿಗೆ ನೆಲೆಯಾಗಿರುವ ಚಿಕ್ಕ ಮಂಗಳೂರಿಗೆ ಪ್ರವಾಸಿಗರು ಭೇಟಿ ನೀಡಲೇಬೇಕು. ಇಲ್ಲಿನ ವಿಹಂಗಮ ಮತ್ತು ಆಹ್ಲಾದಕರ ಸೌಂದರ್ಯವನ್ನು ಸವಿಯಲೇ ಬೇಕು. ನೀವು ಉತ್ಕಟ ಚಾರಣಿಗರಾಗಲಿ, ಪ್ರಕೃತಿ ಪ್ರೇಮಿಯಾಗಲಿ, ಆಧ್ಯಾತ್ಮಿಕ ಅನ್ವೇಷಕರಾಗಲಿ ಅಥವಾ ವಿಶ್ರಾಂತಿ ಪಡೆಯಲು ಬಯಸುವವರಾಗಲಿ, ಚಿಕ್ಕಮಗಳೂರು ನಿಮ್ಮ ಮುಂದಿನ ಪ್ರವಾಸದಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಕುದುರೆಮುಖ, ಶೃಂಗೇರಿ ಶಾರದ ಪೀಠ, ಕಾಫಿ ಮ್ಯೂಸಿಯಂ ಚಿಕ್ಕಮಗಳೂರು, ಭದ್ರಾ ವನ್ಯಜೀವಿ ಅಭಯಾರಣ್ಯ ಮತ್ತು ಹೆಬ್ಬೆ ಜಲಪಾತಗಳು ಪಟ್ಟಣದ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.