Karnataka logo

Karnataka Tourism
GO UP
Pattadakal Dance Festival

ಪಟ್ಟದಕಲ್ ನೃತ್ಯೋತ್ಸವ

separator
  /  ಪಟ್ಟದಕಲ್ ನೃತ್ಯೋತ್ಸವ

ಪಟ್ಟದಕಲ್ಲು ಬಗ್ಗೆ

ಪಟ್ಟದಕಲ್ಲು, ಸಾಮಾನ್ಯವಾಗಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ ಎಂದು ಕರೆಯಲ್ಪಡುತ್ತದೆ ಮತ್ತು ಇಲ್ಲಿನ ಆಕೃತಿಗಳು ಭಾರತೀಯ ವಾಸ್ತುಶಿಲ್ಪದ ಅದ್ಭುತವಾಗಿದೆ. ಮಲಪ್ರಭಾ ನದಿ ತೀರದಲ್ಲಿರುವ, ಈ ಗ್ರಾಮವು  UNESCO ಘೋಷಿತ ವಿಶ್ವ ಪರಂಪರೆಯ ತಾಣವಾಗಿದೆ. ಪಟ್ಟಡಕಲ್ಲು ಅಂದರೆ “ಪಟ್ಟಾಭಿಷೇಕದ ಸ್ಥಳ”. ಹೆಸರೇ ಸೂಚಿಸುವಂತೆ, ಚಾಲುಕ್ಯ ರಾಜವಂಶದ ಎಲ್ಲ ರಾಜರಿಗೆ  ಇಲ್ಲಿಯೇ ಪಟ್ಟಾಭಿಷೇಕವಾಯಿತು ಮತ್ತು, ಇದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿತು.

ಈ ಗ್ರಾಮವು ಕೆಲವು ಜೈನ ದೇವಾಲಯಗಳು ಮತ್ತು ಇತರ ಸ್ಮಾರಕಗಳು ಮತ್ತು ಶಾಸನಗಳನ್ನು ಒಳಗೊಂಡಂತೆ ಸುಮಾರು ಹತ್ತು ದೇವಾಲಯಗಳಿಗೆ ನೆಲೆಯಾಗಿದೆ. ಪಟ್ಟದಕಲ್ ದೇವಾಲಯಗಳನ್ನು ಅಸಾಧಾರಣ ವಾಸ್ತುಶಿಲ್ಪವೆಂದು ಪರಿಗಣಿಸಲಾಗಿದೆ  ಮತ್ತು ಸ್ಥಳದ ಶ್ರೀಮಂತ ಇತಿಹಾಸವನ್ನು ಎತ್ತಿಹಿಡಿಯುತ್ತದೆ. ರಚನಾತ್ಮಕವಾಗಿ, ದೇವಾಲಯಗಳನ್ನು ದಕ್ಷಿಣ ಭಾರತದ ಅಂದರೆ ದ್ರಾವಿಡ ಶೈಲಿಯಲ್ಲಿ ಮತ್ತು ಉತ್ತರ ಭಾರತೀಯ ಅಂದರೆ ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ಮಾಡಲಾಗಿದೆ.

ಪ್ರತಿಯೊಂದು ದೇವಾಲಯವು ಅದರ ರಚನೆಯಲ್ಲಿ ವಿಶಿಷ್ಟವಾಗಿದೆ ಮತ್ತು ತನ್ನದೇ ಆದ ಕಥೆಯನ್ನು ನಿರೂಪಿಸುತ್ತದೆ. ಕ್ರಿ.ಶ 7 ಮತ್ತು 8 ನೇ ಶತಮಾನದಲ್ಲಿ ನಿರ್ಮಿಸಲಾದ  ಈ ಸಂಕೀರ್ಣ ಗ್ರಾಮವು ಇಲ್ಲಿನ ಹಿಂದಿನ ಜನರ ಜೀವನ ಶೈಲಿಯನ್ನು ಚಿತ್ರಿಸುತ್ತದೆ . UNESCO ಈ ಸ್ಮಾರಕಗಳನ್ನು ಉತ್ತರ ಮತ್ತು ದಕ್ಷಿಣ ಭಾರತದಿಂದ ಬಂದ ವಾಸ್ತುಶಿಲ್ಪದ ಸಾಮರಸ್ಯದ ಮಿಶ್ರಣವೆಂದು ವರ್ಣಿಸಿದೆ.  ಇಲ್ಲಿನ ದೇವಾಲಯಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆ, ಮಹತ್ವದ ಸಂಪ್ರದಾಯಗಳು ಮತ್ತು ಅದ್ಭುತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಪೂಜಾ ಸ್ಥಳವಾಗಿರುವುದರ ಜೊತೆಗೆ, ದೇವಾಲಯಗಳು ತಮ್ಮ ಸಂಕೀರ್ಣ ಮತ್ತು ಆಕರ್ಷಕ ವಾಸ್ತುಶಿಲ್ಪದಿಂದ ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ.

ಈ ದೇವಾಲಯಗಳ ಭವ್ಯತೆ ಮತ್ತು ಕಥೆಯನ್ನು ಆಚರಿಸಲು ಕರ್ನಾಟಕ ಸರ್ಕಾರ ವಾರ್ಷಿಕ ಪಟ್ಟದಕಲ್ ನೃತ್ಯೋತ್ಸವವನ್ನು ಆಯೋಜಿಸುತ್ತದೆ. ಪ್ರತಿ ವರ್ಷ, ಜನವರಿ ಅಥವಾ ಫೆಬ್ರವರಿಯಲ್ಲಿ ಇದು ನೃತ್ಯ ಉತ್ಸವವನ್ನು ಗ್ರಾಮದಲ್ಲಿಯೇ ನಡೆಸಲಾಗುತ್ತದೆ ಮತ್ತು ಪ್ರಪಂಚದಾದ್ಯಂತದ ಜನರು ಇದರಲ್ಲಿ ಭಾಗವಹಿಸುತ್ತಾರೆ. ಈ ಬಾರಿಯ ಉತ್ಸವವನ್ನು ದಿನಾಂಕ ಜನವರಿ 1, 2021ರಂದು ನಡೆಸಲು ನಿಗದಿಯಾಗಿದೆ.

ಪಟ್ಟದಕಲ್ ನೃತ್ಯೋತ್ಸವದ ಬಗ್ಗೆ

ಇಲ್ಲಿನ ದೇವಾಲಯಗಳಲ್ಲಿ 3 ದಿನಗಳ ಆಚರಣೆ ಮತ್ತು ಜಾತ್ರೆಗಳು ನಡೆಯುತ್ತದೆ. ಈ ಹಬ್ಬವು ಈ ಸ್ಥಳದ ಸಾಂಸ್ಕೃತಿಕ ಇತಿಹಾಸವನ್ನು ನಾಶವಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಹಬ್ಬವು ವಿವಿಧ ಸಾಂಪ್ರದಾಯಿಕತೆಯನ್ನು ಪ್ರೋತ್ಸಾಹಿಸುತ್ತದೆ, ಅದರಲ್ಲಿ ಭಾರತನಾಟ್ಯ, ಕುಚಿಪುಡಿ, ಕಥಕಳಿ, ಯಕ್ಷಗಾನ ಮತ್ತು ಇನ್ನೂ ಅನೇಕ ಭಾರತದ ನೃತ್ಯ ಮತ್ತು ಸಂಗೀತ ಪ್ರಕಾರಗಳು ಅನಾವರಣಗೊಳ್ಳುತ್ತದೆ. ಈ ಪ್ರದರ್ಶನಗಳು ದೇವಾಲಯಗಳೊಂದಿಗೆ ಹಿನ್ನೆಲೆಯಾಗಿ ನಡೆಯುತ್ತವೆ ಮತ್ತು ಇದು ಪ್ರೇಕ್ಷಕರನ್ನು ಮಂತ್ರಮುಗ್ದರಾಗುವಂತೆ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಈ ಉತ್ಸವದಲ್ಲಿ ಭಾಗವಹಿಸಲು ಪ್ರದರ್ಶಕರು ಮತ್ತು ಉತ್ಸವವನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರು ಜಗತ್ತಿನಾದ್ಯಂತ ಪಟ್ಟದಕಲ್ಲಿನ ನೃತ್ಯೋತ್ಸವಕ್ಕೆ ಬರುತ್ತಾರೆ.

ಕೆಲವು ಪ್ರಸಿದ್ಧ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯಗಾರರು ಪ್ರತಿವರ್ಷ ಉತ್ಸವದಲ್ಲಿ ಪ್ರದರ್ಶನ ನೀಡಲು ಬರುತ್ತಾರೆ. ಈ ಉತ್ಸವವು ಜನರು ಮತ್ತು ಕಲೆಗಳ ನಡುವಿನ ಪ್ರಾಚೀನ ಒಡನಾಟವನ್ನು ನೆನಪಿಸುತ್ತದೆ. ಸುಂದರವಾದ ನೃತ್ಯ ಮತ್ತು ಸಂಗೀತ ಪ್ರದರ್ಶನಗಳ ಜೊತೆಗೆ, ಕುಶಲಕರ್ಮಿಗಳು ಮತ್ತು ಕಲಾವಿದರುಗಳಿಗೆ ಮಳಿಗೆಗಳನ್ನು ತೆರೆಯಲು ಮತ್ತು ಅವರ ಪ್ರತಿಭೆಯನ್ನು ಉತ್ತೇಜಿಸಲು ಮತ್ತು ಉತ್ಸವದ ಕ್ರಾಫ್ಟ್ ಮೇಳದಲ್ಲಿ ಕೆಲಸ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಸ್ಥಳೀಯ ವ್ಯಾಪಾರಿ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಮತ್ತು ಪ್ರೇಕ್ಷಕರು ಕಲೆ ಮತ್ತು ಇತರ ಸ್ಮಾರಕಗಳನ್ನು ಮಳಿಗೆಗಳಿಂದ ಖರೀದಿಸಬಹುದು.

ಈ ಉತ್ಸವವು ಕಲಾವಿದರು, ನೃತ್ಯಗಾರರು, ಸಂಗೀತಗಾರರು, ನಾಟಕ ವೃತ್ತಿಪರರು ಮತ್ತು ವಿವಿಧ ಕಲೆಗಳಿಗೆ ಸಂಬಂಧಿಸಿದ ಎಲ್ಲರಿಗೂ ಉತ್ತಮ ಅವಕಾಶ ನೀಡುವುದರ ಜೊತೆಗೆ ತಮ್ಮನ್ನು ಭಾರತದ ವಿವಿಧ ಸಾಂಪ್ರದಾಯಿಕ ನೃತ್ಯ ಪ್ರಕಾರಗಳೊಂದಿಗೆ ಪರಿಚಯ ಮಾಡಿಕೊಳ್ಳುವ ಅತ್ಯುತ್ತಮ ವೇದಿಕೆಯೂ ಆಗುತ್ತದೆ.

ಅದ್ಭುತ ವಾಸ್ತುಶಿಲ್ಪ, ಐತಿಹಾಸಿಕ ವಾತಾವರಣ, ಆಕರ್ಷಣೀಯ ಪ್ರದರ್ಶನಗಳು ಮತ್ತು ವಿಶಿಷ್ಟ ಕರಕುಶಲ ವಸ್ತುಗಳು ಸುತ್ತಮುತ್ತಲಿನ ಜನರನ್ನು ಉತ್ಸವಕ್ಕೆ ಬರುವಂತೆ ಆಕರ್ಷಿಸುತ್ತವೆ. ಕರ್ನಾಟಕ ಸರ್ಕಾರವು ಪ್ರಾಯೋಜಿಸಿದ ಸಾಂಸ್ಕೃತಿಕ  ವಾರ್ಷಿಕ ಉತ್ಸವವು ಕೇವಲ ಒಂದು ಉತ್ಸವವಲ್ಲ, ಕಲೆ ಮತ್ತು ಇತಿಹಾಸದ ಪ್ರೇಮಿಗಳು ಮತ್ತು ಉತ್ಸಾಹಿಗಳಿಗೆ  ಪಟ್ಟದಕಲ್ ನೃತ್ಯೋತ್ಸವವು ವೈಭವ ಮತ್ತು ಭವ್ಯತೆಯ ಭರವಸೆಯಾಗಿದೆ.