Karnataka logo

Karnataka Tourism
GO UP
Solo Travel

ನೀವು ಒಂಟಿಯಾಗಿ ಪಯಣಿಸಬಹುದಾದ ತಾಣಗಳು

separator
  /  ನೀವು ಒಂಟಿಯಾಗಿ ಪಯಣಿಸಬಹುದಾದ ತಾಣಗಳು

ಭಾರತವು ತನ್ನ ಮಡಿಲಲ್ಲಿ ಅನೇಕ ಆಕರ್ಷಕ ಮತ್ತು ಮಂತ್ರಮುಗ್ಭಗೊಳಿಸುವ ಸ್ಥಳಗಳನ್ನು ಹೊಂದಿದೆ. ಕರ್ನಾಟಕವೂ ಸಹ ಅಂತಹ ಸುಂದರವಾದ ಸ್ಥಳಗಳನ್ನು ತನ್ನ ಮಡಿಲಲ್ಲಿ ಇಟ್ಟಿಕೊಂಡಿರುವ ರಾಜ್ಯವಾಗಿದ್ದು ಪ್ರವಾಸಿಗರನ್ನು ಕೈ ಮಾಡಿ ಕರೆಯುತ್ತಿದೆ. ಮೈಸೂರಿನ ರಾಜ ಪರಂಪರೆ ಮತ್ತು ಭವ್ಯವಾದ ಅರಮನೆಗಳು, ಐತಿಹಾಸಿಕ ಸ್ಥಳಗಳು, ದೇವಾಲಯಗಳು, ಕೋಟೆ ಕೊತ್ತಲಗಳು, ಬೆರಗುಗೊಳಿಸುವ ಕಡಲತೀರಗಳು ಮತ್ತು ಬೆಂಗಳೂರಿನ ವೇಗ ಶೈಲಿ ಜೀವನ, ಹೀಗೆ ಕರ್ನಾಟಕವು ಪ್ರತಿ ಪ್ರವಾಸಿಗರಿಗೆ ಅವರಿಗೇ ಬೇಕಾದ ಎಲ್ಲವನ್ನೂ ಹೊಂದಿದೆ. ಆದ್ದರಿಂದ ಕರ್ನಾಟಕವನ್ನು “ ಒಂದು ರಾಜ್ಯ, ಹಲವು ಪ್ರಪಂಚಗಳು” ಎಂದು ಕರೆಯಲಾಗುತ್ತದೆ.

Vittala temple hampi
ಹಂಪಿ

ಐತಿಹಾಸಿಕ ಪ್ರಸಿದ್ಧತೆಯನ್ನು ಪಡೆದ ಹಂಪೆಯ ಕುರಿತು ಯಾರಿಗೇ ತಾನೇ ಗೊತ್ತಿಲ್ಲ. ಇದು ಕರ್ನಾಟಕದ ಅತ್ಯಂತಆಕರ್ಷಣೀಯ ಸ್ಥಳಗಳಲ್ಲಿ ಒಂದು. ಹಂಪಿಯ ಪ್ರತಿ ಮೂಲೆಮೂಲೆಯೂ ತನ್ನ ಅದ್ಭುತವಾದ ಇತಿಹಾಸದ ಕಥೆಯನ್ನು ಹೇಳುತ್ತದೆ. ಇಲ್ಲಿನ . ದೇವಾಲಯಗಳು ಮತ್ತು ಅರಮನೆಗಳ ಪ್ರಾಚೀನ ಅವಶೇಷಗಳು ತಮ್ಮ ಇತಿಹಾಸವನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಕರ್ನಾಟಕದಲ್ಲಿ ಯುನೆಸ್ಕೋ ಮತ್ತು ವಿಶ್ವ ಪರಂಪರೆಯ ತಾಣವಾಗಿರುವ ಈ ಮಾಂತ್ರಿಕ ಭೂಮಿಯು ಪುರಾಣಗಳು, ದೇವರು ಮತ್ತು ದೇವತೆಗಳು ಮತ್ತು ವಿಶಾಲವಾದ ಭತ್ತದ ಗದ್ದೆಗಳ ಕಥೆಗಳಿಂದ ತುಂಬಿದೆ. ಇಲ್ಲಿನ ಐತಿಹಾಸಿಕ ಮತ್ತು ಪ್ರಾಕೃತಿಕ ಸೌಂದರ್ಯವು ಪ್ರವಾಸಿಗರ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ. ಇಲ್ಲಿನ ಪ್ರಸಿದ್ಧ ವಿರೂಪಾಕ್ಷ ಮಂದಿರವನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿ ಕಂಡುಬರುವ ಪುರಾತನ ಅವಶೇಷಗಳು ನಗರವು ಹಿಂದೆ ಹೊಂದಿದ್ದ ವೈಭವವನ್ನು ಪ್ರದರ್ಶಿಸುತ್ತದೆ.

gokarna
ಗೋಕರ್ಣ

ಗೋಕರ್ಣವು ಎಲ್ಲಾ ಕಡಲತೀರದ ಉತ್ಸಾಹಿಗಳಿಗೆ ಸ್ವರ್ಗವಾಗಿದ್ದು ಇಲ್ಲಿನ ಮನ ಸೆಳೆಯುವ ಸೂರ್ಯಾಸ್ತಗಳು, ಅಬ್ಬರದ ಅಲೆಗಳು ಮತ್ತು ಸ್ಥಳದ ಪ್ರಶಾಂತತೆಯು ನಿಮ್ಮನ್ನು ಪ್ರಕೃತಿಗೆ ಹತ್ತಿರವಾಗುವಂತೆ ಮಾಡುತ್ತದೆ. ಪಾದದ ಕೆಳಗಿರುವ ಮರಳು, ಅಲೆಗಳು ಅಪ್ಪಳಿಸುವ ಶಬ್ದ ಮತ್ತು ಸ್ವಚ್ಛವಾದ ಗಾಳಿಯು ಪ್ರವಾಸಿಗರು ತನ್ನನ್ನು ತಾನೇ ಮರೆಯುವಂತೆ ಮಾಡುವುದು
ಮತ್ತು ಪ್ರವಾಸಿಗರನ್ನು ದಿನನಿತ್ಯದ ಚಿಂತೆಯಿಂದ ಮುಕ್ತಗೊಳಿಸುವುದು. ಅಡ್ರಿನಾಲಿನ್ ಜಂಕಿಗೆ ಜಲಕ್ರೀಡೆಗಳು, ಆಧ್ಯಾತ್ಮಿಕ ಭಕ್ತರಿಗೆ ಮಹಾಬಲೇಶ್ವರ ದೇವಸ್ಥಾನ ಮತ್ತು ಶಾಂತ ಕಡಲತೀರಗಳು
ಹೀಗೆ ಗೋಕರ್ಣವು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಲು ಅಥವಾ ಪುನಶ್ಚೇತನಗೊಳ್ಳಲು ಬೇಕಾದ ಎಲ್ಲವನ್ನೂ ಹೊಂದಿದೆ.

chikmagalur hills
ಚಿಕ್ಕಮಗಳೂರು

ಇದು ಕಾಫಿ ಪ್ರಿಯರ ನಾಡು, ಚಿಕ್ಕಮಗಳೂರನ್ನು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲ್ಪಡುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ ,ಪ್ರಕೃತಿಯ ಮಡಿಲಲ್ಲಿರುವ ಈ ಪ್ರಶಾಂತ ಪಟ್ಟಣಕ್ಕೆ ಪ್ರಕೃತಿಯ ನಡುವೆ ಉತ್ತಮ ವಾಸ್ತವ್ಯವನ್ನು ಇಷ್ಟಪಡುವ ಪ್ರತಿಯೊಬ್ಬರೂ ಭೇಟಿ ನೀಡಲೇಬೇಕು. ಭದ್ರಾ ನದಿಯಲ್ಲಿ ಚಾರಣದಿಂದ ಹಿಡಿದು ಮುಳ್ಳಯ್ಯನಗಿರಿಗೆ ರಿವರ್ ರಾಫ್ಟಿಂಗ್ ವರೆಗೂ ಇಲ್ಲಿ ಸಾಕಷ್ಟು ಚಟುವಟಿಕೆಗಳನ್ನು ಮಾಡಬಹುದು. ಚಿಕ್ಕಮಗಳೂರು ನಗರವು ಜೀವನದ ದಿನ ನಿತ್ಯದ ಗದ್ದಲದಿಂದ ಹೊರಬರಲು ಹಾತೊರೆಯುವ ಒಂಟಿಯಾಗಿ ಪಯಣಿಸುವ ಪ್ರಯಾಣಿಕರಿಗೆ ಅದ್ಭುತವಾಗಿದೆ ಮತ್ತು ಇಲ್ಲಿರುವ ತಾಜಾ ಗಾಳಿಯು ಪ್ರವಾಸಿಗರ ಮನಸನ್ನು ಮುದಗೊಳಿಸುತ್ತದೆ.

mysore palace Honeymoon Destinations
ಮೈಸೂರು

ರಾಯಲ್ ಸಿಟಿ ಮೈಸೂರು ದಕ್ಷಿಣ ಭಾರತದ ಅತ್ಯಂತ ಸೊಗಸಾದ ನಗರಗಳಲ್ಲಿ ಒಂದಾಗಿರುವ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಪ್ರಸಿದ್ಧವಾಗಿರುವ ರಾಯಲ್ ಸಿಟಿ ಮೈಸೂರು ತನ್ನ ಅನೇಕ ಸ್ಥಳಗಳು ಮತ್ತು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಿದೆ. ಇಲ್ಲಿನ ಸುಂದರ ರೇಷ್ಮೆ ಸೀರೆಗಳು ಮತ್ತು ರುಚಿಕರವಾದ ಆಹಾರ ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿದೆ. ಮೈಸೂರು ಬಾಯಲ್ಲಿ ನೀರೂರಿಸುವ ಮೈಸೂರು ಪಾಕ್ ಗೆ ಹೆಸರುವಾಸಿ. ಅಷ್ಟೇ ಅಲ್ಲ ಇದು ಪ್ರತಿಯೊಬ್ಬ ಆಹಾರಪ್ರಿಯರಿಗೂ ಸ್ವರ್ಗವಾಗಿದೆ. ಇಲ್ಲಿ ನೀವು ಭೇಟಿ ನೀಡಬಹುದಾದ ಜನಪ್ರಿಯ ಸ್ಥಳಗಳೆಂದರೇ ಮೈಸೂರು ಅರಮನೆ , ಚಾಮುಂಡಿ ದೇವಸ್ಥಾನ, ಮೃಗಾಲಯ, ಮ್ಯೂಸಿಯಂ, ಬೃಂದಾವನ್ ಗಾರ್ಡನ್ ಮತ್ತು ದೇವರಾಜ ಮಾರುಕಟ್ಟೆಗಳು.

karwar beach
ಕಾರವಾರ

ಕಾರವಾರದ ಪ್ರಾಕೃತಿಕ ಸೌಂದರ್ಯ ಮತ್ತು ಪ್ರಶಾಂತತೆಯು ಪ್ರತಿಯೊಬ್ಬ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿನ ಆಕರ್ಷಕ ಕಡಲ ತೀರಗಳು ಮಹಾನ್ ಕವಿ ರವೀಂದ್ರನಾಥ ಟ್ಯಾಗೋರ್‌ಗೆ ಸ್ಫೂರ್ತಿ ನೀಡಿವೆ. ಅತ್ಯಂತ ಶಾಂತವಾದ ಕಡಲತೀರಗಳಲ್ಲಿ ಒಂದಾದ ದೇವಬಾಗ್ ಬೀಚ್ ಇದು ಉದ್ದವಾದ ತೀರ ಮತ್ತು ಕ್ಯಾಸುರಿನಾ ಮರಗಳನ್ನು ಹೊಂದಿದೆ. ಇಲ್ಲಿ

ಆಕರ್ಷಕವಾದ ಇನ್ನೊಂದು ಸ್ಥಳವೆಂದರೆ ಐತಿಹಾಸಿಕ ಕೋಡಿಬಾಗ್ ಕೋಟೆ ಅವಶೇಷಗಳು ಮತ್ತು ಅದರ ಸುತ್ತಲಿನ ಕಡಲತೀರ. ಅಲ್ಲದೆ, ಸಮುದ್ರ ಆಹಾರ ಪ್ರಿಯರಿಗೆ ಈ ಸ್ಥಳ ಅತ್ಯಂತ ಮೆಚ್ಚಿನದಾಗಿದೆ.