Karnataka logo

Karnataka Tourism
GO UP
Ganesh Chaturhti

ಕರ್ನಾಟಕದಲ್ಲಿ ಸಂಭ್ರಮದ ಗಣೇಶ ಚತುರ್ಥಿಯ ಆಚರಣೆ

separator
  /  ಬ್ಲಾಗ್   /  ಕರ್ನಾಟಕದಲ್ಲಿ ಸಂಭ್ರಮದ ಗಣೇಶ ಚತುರ್ಥಿಯ ಆಚರಣೆ
ಗಣೇಶ ಚತುರ್ಥಿ

ಕರ್ನಾಟಕದಲ್ಲಿ ಸಂಭ್ರಮದ ಗಣೇಶ ಚತುರ್ಥಿಯ ಆಚರಣೆ

ಗಣೇಶ ಹಬ್ಬವೆಂದರೇ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ ಮತ್ತು ಸಂಭ್ರಮ. ಕರ್ನಾಟಕ ರಾಜ್ಯವು ತನ್ನ ಗಣೇಶ ಹಬ್ಬದ ಸಂಭ್ರಮದ ಆಚರಣೆಗೆ ಪ್ರಸಿದ್ಧವಾಗಿದೆ. ಗಣೇಶ ಚತುರ್ಥಿ ಎಂದರೇ ಈ ದಿನ ಗಣೇಶನು ಆನೆಯ ಶಿರದೊಂದಿಗೆ ಪುನರುತ್ಥಾನಗೊಂಡ ದಿನವಾಗಿದೆ. ಶಿವ ಮತ್ತು ಉಮೆಯರ ಮಗನಾದ ಗಣೇಶನು ಬುದ್ಧಿವಂತಿಕೆ, ಜ್ಞಾನ ಮತ್ತು ಅದೃಷ್ಟದ ದೇವರಾಗಿದ್ದಾನೆ ಮತ್ತು ವಿಘ್ನ ನಿವಾರಕನಾಗಿದ್ದಾನೆ. “ಶುಭ ಮತ್ತು ಲಾಭ” ದ ಧ್ಯೇಯದೊಂದಿಗೆ ಎಲ್ಲ ಭಕ್ತರ ಮನೆಮನೆಗೂ ಸಮೃದ್ಧಿ,ಸುಖ ಸಂಪತ್ತನ್ನು ಕರುಣಿಸುತ್ತಾನೆ. ಈ ಹಬ್ಬವನ್ನು ದೇಶದ ಹಲವೆಡೆ ಆಚರಿಸಿದರೂ ಸಹ ಕರ್ನಾಟಕದಲ್ಲಿ ಗಣೇಶ ಹಬ್ಬದ ಆಚರಣೆ ತನ್ನದೇ ಆದ ವಿಶಿಷ್ಟ ಆಕರ್ಷಣೆ ಮತ್ತು ವೈಭವಗಳನ್ನು ಹೊಂದಿದೆ.
ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಗಣೇಶ ಚತುರ್ಥಿಯ ಒಂದು ದಿನದ ಮೊದಲು ಗೌರಿ ಹಬ್ಬ ಅಥವಾ ಗೌರಿ ವೃತವನ್ನು ಆಚರಿಸಲಾಗುತ್ತದೆ. ಕರ್ನಾಟಕದ ಹಲವು ನಗರಗಳು ಗಣೇಶ ಹಬ್ಬದ ಆಚರಣೆಗೆ ಹೆಸರುವಾಸಿಯಾಗಿವೆ. ಈ ಸಮಯದಲ್ಲಿ ಈ ಸ್ಥಳಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಂತಹ ಕೆಲವು ನಗರಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ.

 

ಹುಬ್ಬಳಿ:

Agumbe

ಉತ್ತರ ಕರ್ನಾಟಕದ ಇನ್ನೊಂದು ಪ್ರಮುಖ ನಗರವೆಂದರೇ ಹುಬ್ಬಳಿ. ಪೂರ್ಣವೈಭವ ಮತ್ತು ಭವ್ಯತೆಯಿಂದ ಕೂಡಿದ ಗಣೇಶ ಉತ್ಸವನ್ನು ನೀವು ನೋಡಲು ಬಯಸಿದರೇ ಹುಬ್ಬಳ್ಳಿ ಅದಕ್ಕೆ ಸೂಕ್ತವಾದ ಸ್ಥಳ ಎಂದರೇ ತಪ್ಪಲ್ಲ. ಈ ಹಬ್ಬದ ದಿನದಂದು ಇಲ್ಲಿ ಎಲ್ಲೆಡೆಯೂ ಧಾರ್ಮಿಕ ವಾತಾವರಣ ಇರುತ್ತದೆ. ಬೀದಿಬೀದಿಗಳು ಅಲಂಕಾರಗಳಿಂದ ಶೋಭಿಸುತ್ತದೆ. ಹುಬ್ಬಳಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಗಣೇಶ ವಿಗ್ರಹಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ಕಳೆದ 11 ವರ್ಷಗಳಿಂದ ಸುಮಾರು 20 ಅಡಿಯಷ್ಟು ಎತ್ತರದ ಗಣೇಶ ವಿಗ್ರಹಗಳನ್ನು ಸ್ಥಾಪಿಸಲಾಗುತ್ತಿದ್ದು ಇವುಗಳನ್ನು ಆಭರಣಗಳು, ವಿವಿಧ ವರ್ಣಮಯ ಹೂವುಗಳು ಮತ್ತು ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದ ವೈಭವ ಮತ್ತು ಭವ್ಯತೆಗಳನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತದ ಪ್ರವಾಸಿಗರು ಹುಬ್ಬಳಿ ನಗರಕ್ಕೆ ಗಣೇಶ ಹಬ್ಬದ ಸಮಯದಲ್ಲಿ ಇಲ್ಲಿ ಭೇಟಿಗೆ ನೀಡುತ್ತಾರೆ. ಇಲ್ಲಿ ನಡೆಯುವ ಮೆರವಣಿಗೆ ಮತ್ತು ನೃತ್ಯಗಳು ಎಲ್ಲರ ಮನಗಳನ್ನು ಆಕರ್ಷಿಸುತ್ತವೆ.

 

ಬೆಳಗಾವಿ:

Belagum Ganesh

ಕರ್ನಾಟಕದ ಇನ್ನೊಂದು ಪ್ರಮುಖ ನಗರವಾಗಿ ಬೆಳಗಾವಿಯ ಗಣೇಶ ಹಬ್ಬದ ಆಚರಣೆ ಮತ್ತು ಉತ್ಸವನ್ನು ನೋಡಿಯೇ ಆನಂದಿಸಬೇಕು. ಮಾತುಗಳಲ್ಲಿ ಅದನ್ನು ವರ್ಣಿಸಿದರೇ ಸಾಲದು. ಇಲ್ಲಿ ನೀವು ಧಾರ್ಮಿಕ ಮೆರವಣಿಗೆಗಳೊಂದಿಗೆ ಉತ್ಸಾಹಭರಿತ ಆಚರಣೆಗಳನ್ನು ನೋಡಬಹುದು.ಈ ನಗರವು ವಿಶೇಷವಾಗಿ ಗಣೇಶ ವಿಗ್ರಹಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಭಕ್ತರಿಗಾಗಿ ವಿವಿಧ ಗಾತ್ರಗಳ ಮತ್ತು ವಿವಿಧ ಬಣ್ಣಗಳ ಗಣೇಶ ವಿಗ್ರಹಗಳನ್ನು ತಯಾರಿಸಲಾಗುತ್ತದೆ. ಅತಿ ಎತ್ತರದ ಗಣೇಶ ವಿಗ್ರಹಗಳನ್ನೂ ಸಹ ತಯಾರಿಸಲಾಗುತ್ತದೆ. ಇಲ್ಲಿ ನೀವು ವಿವಿಧ ಧರ್ಮದ ಜನರು ಸೇರಿ ಸುಂದರ ಅಲಂಕಾರ ಭೂಷಿತ ಗಣೇಶನನ್ನು ಪ್ರತಿಷ್ಠಾಪಿಸಿರುವ ಸಾರ್ವಜನಿಕ ಪೆಂಡಾಲ್ ಗಳನ್ನು ನೋಡಬಹುದು. ಇದನ್ನು ವಿವಿಧ ಧರ್ಮದ ಜನರು ಸೇರಿ ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿ ನೀವು ಹಬ್ಬವನ್ನು ಮನದಣಿಯೇ ಆನಂದಿಸಬಹುದು. ಇದರಿಂದ ದುಃಖ ಮತ್ತು ಸಮಸ್ಯೆಗಳು ಕಡಿಮೆ ಆದಂತೆ, ಗಣೇಶನು ನಿಮ್ಮನ್ನು ಆಶೀರ್ವದಿಸಿದಂತೇ ಅನಿಸುತ್ತದೆ. ಗಣೇಶ ಹಬ್ಬವನ್ನು ಇಲ್ಲಿ ಮೊದಲ 9 ದಿನಗಳವರೆಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನಗಳು ಬೆಳಗಾವಿಗೆ ಭೇಟಿ ನೀಡುವ ಅತ್ಯುತ್ತಮ ದಿನಗಳಾಗಿವೆ.

 

ಮಂಗಳೂರು :

Mangalore
ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾದ ಮಂಗಳೂರು ಸಹ ಗಣೇಶ ಹಬ್ಬದ ಆಚರಣೆಗೆ ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ನಗರವು ವರ್ಣರಂಜಿತವಾಗುತ್ತದೆ. ಸುಂದರ ಅಲಂಕಾರಗಳಿಂದ ಶೋಭಿಸುತ್ತದೆ. ಎಲ್ಲೆಡೆ ಸಮಾರಂಭಗಳು ಮತ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಗಣೇಶ ಹಬ್ಬವು ಈ ನಗರದ ಮಹತ್ವದ ಉತ್ಸವಗಳಲ್ಲಿ ಒಂದಾಗಿದೆ. ಈ ಹಬ್ಬದ ಹಿಂದಿನ ದಿನದಂದು ಮಂಗಳೂರಿನ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿರುತ್ತದೆ. ಜನಗಳ ಖರೀದಿಯ ಭರಾಟೆಯೂ ಜೋರಾಗಿರುತ್ತದೆ. ಎಲ್ಲೆಡೆಯೂ ಹೂವು, ಹಣ್ಣು ಮತ್ತು ವಿವಿಧ ಅಲಂಕಾರಿಕ ವಸ್ತುಗಳು, ಪೂಜೆಗೆ ಬೇಕಾದ ಅವಶ್ಯಕ ವಸ್ತುಗಳ ರಾಶಿ ಕಂಡುಬರುತ್ತದೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ. ಕಾರ್ ಸ್ಟ್ರೀಟ್ ಮತ್ತು ಸೆಂಟ್ರಲ್ ಮಾರುಕಟ್ಟೆಯು ಗಣೇಶ ಹಬ್ಬದ ಆಚರಣೆಯ ಪ್ರಮುಖ ಸ್ಥಳಗಳಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿಯೂ ಸುಂದರವಾಗಿ ಅಲಂಕರಿಸಿದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಹಬ್ಬದಂದು ಭಕ್ತರು ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ ಮತ್ತು ಮನೆಯಲ್ಲಿ ಸಿಹಿ ತಿಂಡಿಗಳನ್ನು ಮಾಡಿ, ಗಣೇಶನಿಗೆ ಅರ್ಪಿಸಿ, ತಾವು ಸೇವಿಸಿ ಆನಂದಿಸುತ್ತಾರೆ.

 

ಬೆಂಗಳೂರು :

Bangalore Ganesh
ಕರ್ನಾಟಕ ರಾಜಧಾನಿ ಬೆಂಗಳೂರು ತಮ್ಮ ಹಬ್ಬ ಮತ್ತು ಉತ್ಸವಗಳಿಗೆ ಹೆಸರುವಾಗಿದೆ. ಗಣೇಶ ಚತುರ್ಥಿಯನ್ನು ಇಲ್ಲಿ ಹೆಚ್ಚು ಉತ್ಸಾಹದಿಂದ ಆಚರಿಸಲಾಗಿದೆ. ಬೆಂಗಳೂರು ನಗರದ ಹಬ್ಬದ ಆಚರಣೆಗಳು ಸಂಪೂರ್ಣವಾಗಿ ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯನ್ನು ಆಧರಿಸಿವೆ. ಈ ಹಬ್ಬದಂದು ಬೆಂಗಳೂರಿಗರು ಮುಂಜಾನೆಯೇ ಗಣೇಶ ದರ್ಶನಕ್ಕಾಗಿ ನಗರದ ಪ್ರತಿಷ್ಠಿತ ದೇವಸ್ಥಾನಗಳಿಗೆ ಭೇಟಿ ನೀಡಲು ಸಿದ್ಧವಾಗುತ್ತಾರೆ. ಶ್ರೀ ಜಂಬು ಗಣಪತಿ ದೇವಸ್ಥಾನ, ಅನಂತ ನಗತ ಗಣಪತಿ ದೇವಸ್ಥಾನ ಮತ್ತು ಪಂಚಮುಖ ಹೇರಂಬ ಗಣಪತಿ ದೇವಸ್ಥಾನಗಳು ಪ್ರಸಿದ್ಧ ದೇವಸ್ಥಾನಗಳಾಗಿದ್ದು ಇಲ್ಲಿ ನಡೆಯುವ ಗಣೇಶ ಹಬ್ಬದ ಆಚರಣೆಗಳು ಜನರ ಕಣ್ಮನಗಳನ್ನು ಸೆಳೆಯುತ್ತವೆ. ಪ್ರತಿ ವರ್ಷವೂ ಸ್ಯಾಂಕಿ ಟ್ಯಾಂಕ್ ಮತ್ತು ಹಲಸೂರು ಕೆರೆಯಲ್ಲಿ ಆಯೋಜಿಸಲಾಗುವ ವಿಧಿವಿಧಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತವೆ. ಹೀಗಾಗಿ ಗಣೇಶ ಉತ್ಸವವನ್ನು ಆಯೋಜಿಸುವುದರಲ್ಲಿ ಬೆಂಗಳೂರು ಪ್ರಸಿದ್ಧವಾಗಿದೆ.

ಕರ್ನಾಟಕವು ಗಣೇಶ ಹಬ್ಬಕ್ಕೆ ಜನಪ್ರಿಯವಾಗಿದೆ. ಇಲ್ಲಿ ಜರುಗುವ ಗಣೇಶ ಹಬ್ಬದ ಸಂಭ್ರಮ ಸಡಗರಗಳು ಮತ್ತು ಮೆರವಣೆಗೆಗಳು ಜನರನ್ನು ಆಕರ್ಷಿಸುತ್ತವೆ. ಹೀಗಾಗಿ ಗಣೇಶ ಹಬ್ಬ ಎಂದರೇ ಕರ್ನಾಟಕವು ಜನರ ಮೊದಲ ಆಯ್ಕೆಯಾಗಿದೆ. ಆದರೆ ಈ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಇನ್ನೂ ಇರುವುದರಿಂದ ಈ ವರ್ಷ ಗಣೇಶ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತದೆ. ಸರ್ಕಾರವು ಜನರ ಸುರಕ್ಷತೆಯನ್ನು ಪರಿಗಣಿಸಿ ಸೂಕ್ತ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೆರವಣಿಗೆಗಳನ್ನು ನಿಷೇಧಿಸಲಾಗಿದೆ. ಮತ್ತು ಸರ್ಕಾರವು ಗೊತ್ತು ಪಡಿಸಿದ ಸ್ಥಳಗಳಲ್ಲಿ, ಹೆಚ್ಚು ಜನ ಸಮೂಹ ಇರದ ಸ್ಥಳಗಳಲ್ಲಿ ಭಕ್ತರು ಗಣೇಶ ವಿಗ್ರಹವನ್ನು ಮುಳುಗಿಸಬಹುದು. ನೀವು ಈ ಸಮಯದಲ್ಲಿ ದೇವಸ್ಥಾನಗಳಿಗೂ ಸಹ ಭೇಟಿ ನೀಡಬಹುದು. ದೇವಸ್ಥಾನ ಪ್ರವೇಶ ಸಮಯದಲ್ಲಿ ನಿಮಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು.