Karnataka logo

Karnataka Tourism
GO UP
Image Alt

ಕರ್ನಾಟಕದಲ್ಲಿ ಸಂಬ್ರಮದ ಕ್ರಿಸಮಸ್‍ ಆಚರಣೆಯ ಸ್ಥಳಗಳು

separator
  /  ಬ್ಲಾಗ್   /  ಕರ್ನಾಟಕದಲ್ಲಿ ಸಂಬ್ರಮದ ಕ್ರಿಸಮಸ್‍ ಆಚರಣೆಯ ಸ್ಥಳಗಳು

ಕರ್ನಾಟಕದಲ್ಲಿ ಸಂಬ್ರಮದ ಕ್ರಿಸಮಸ್‍ ಆಚರಣೆಯ ಸ್ಥಳಗಳು

ಮತ್ತೆ ಕ್ರಿಸಮಸ್ ಬಂದಿದೆ! ಕ್ರಿಸಮಸ್ ಹಬ್ಬವೆಂದರೇ ಎಲ್ಲೆಲ್ಲಿಯೂ ಸಡಗರವೇ. ಬೀದಿಬೀದಿಗಳು ಸಂತೋಷ ಮತ್ತು ಸಂಭ್ರಮದಿಂದ ಕೂಡಿರುತ್ತದೆ ಈ ಸಂದರ್ಭದಲ್ಲಿ ಇಡೀ ಜಗತ್ತೆ ರಜೆಯ ಮೂಡ್‌ನಲ್ಲಿದ್ದು ಜನರು ಸುಂದರ ಸ್ಥಳಗಳಿಗೆ ಪ್ರಯಾಣಿಸಲು, ಪ್ರೀತಿಪಾತ್ರರನ್ನು ಭೇಟಿ ಮಾಡಲು ಮತ್ತು ಸ್ವಾಗತಿಸಲು ಅಥವಾ ನಗರದ ಗಡಿಬಿಡಿಯಿಂದ ತಪ್ಪಿಸಿಕೊಳ್ಳಲು ಕಾಯುತ್ತಿರುತ್ತಾರೆ.ಕೇಕ್ ಮತ್ತು ವೈನ್‌ಗಳ ಸುಗಂಧ, ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರಗಳು, ಆಕರ್ಷಣೀಯ ಬೆಳಕು, ಅಲಂಕೃತ ಕ್ರಿಸ್ಮಸ್ ಮರಗಳು, ಗರಿಗರಿಯಾದ ವರ್ಣರಂಜಿತ ಉಡುಗೊರೆಗಳು, ಸುಮಧುರ ಕರೋಲ್‌ಗಳು, ಬೀದಿಗಳಲ್ಲಿ ಸಾಂಟಾ ಮತ್ತು ಸುತ್ತಲೂ ಇರುವ ಸಂತೋಷ – ಕ್ರಿಸ್ಮಸ್‌ನ ಅಗಾಧ ಉತ್ಸಾಹವನ್ನು ಇನ್ನಷ್ಟು ಹೆಚ್ಚುಗೊಳಿಸುತ್ತವೆ. ಕರ್ನಾಟಕದಲ್ಲಿ ಕ್ರಿಸ್‌ಮಸ್ ಅನ್ನು ಸಂಭ್ರಮ, ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿ ಕ್ರಿಸಮಸ್

ಕರ್ನಾಟಕದಲ್ಲಿ ಕ್ರಿಸಮಸ್

ಕರ್ನಾಟಕದಾದ್ಯಂತ ಕ್ರಿಸ್ಮಸ್ ಆಚರಣೆಯನ್ನು ವೈಭವ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಚರ್ಚುಗಳು ಮತ್ತು ಬೀದಿಗಳು ಪ್ರಕಾಶಮಾನವಾದ ಮಿನುಗುವ ದೀಪಗಳಿಂದ ಬೆಳಗುತ್ತವೆ, ಬೃಹತ್ ಅಲಂಕೃತ ಕ್ರಿಸ್ಮಸ್ ಮರಗಳನ್ನು ಮಾಲ್‌ಗಳು ಮತ್ತು ಹೋಟೆಲ್‌ಗಳಲ್ಲಿ ಇರಿಸಲಾಗುತ್ತದೆ, ನಗರದ ಬೇಕರಿಗಳು ಕುಕೀಗಳು ಮತ್ತು ಪ್ಲಮ್ ಕೇಕ್‌ಗಳಿಂದ ದೈವಿಕ ಪರಿಮಳವನ್ನು ಬೀರುತ್ತವೆ ಮತ್ತು ವೈನ್‌ಗಳ ಪರಿಮಳವು ಋತುವನ್ನು, ಹಬ್ಬಗಳ ಋತುವನ್ನು ಇನ್ನಷ್ಟು ಆಕರ್ಷಿತಗೊಳಿಸುತ್ತದೆ. ಕ್ರಿಸ್‌ಮಸ್ ಸಮಯದಲ್ಲಿ ಭೇಟಿ ನೀಡಲೇಬೇಕಾದ ಕೆಲವು ಸ್ಥಳಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಬೆಂಗಳೂರು

ಸಾಂಪ್ರದಾಯಿಕ ಮತ್ತು ಸಮಕಾಲೀನ ಮಿಶ್ರಣವಾದ ಬೆಂಗಳೂರು ರಾಜ್ಯದ ಕೆಲವು ಅತ್ಯುತ್ತಮ ಮತ್ತು ಅತ್ಯಂತ ಪ್ರಾಚೀನ ಚರ್ಚ್‌ಗಳನ್ನು ಹೊಂದಿದೆ. ಈ ಚರ್ಚುಗಳು ಕ್ರಿಸ್‌ಮಸ್ ಸಮಯದಲ್ಲಿ ತುಂಬಾ ಸುಂದರವಾಗಿ ವರ್ಣರಂಜಿತ ದೀಪಗಳು ಮತ್ತು ನಕ್ಷತ್ರಗಳಿಂದ ಸುಂದರವಾಗಿ ಅಲಂಕರಿಸಲಾಗಿರುತ್ತದೆ. ಭಾರತದ ಸಿಲಿಕಾನ್ ರಾಜಧಾನಿಯು ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಬಹಳ ಸಂತೋಷದಿಂದ ಆಚರಿಸುತ್ತದೆ. ಈ ಸಮಯದಲ್ಲಿ ಬೆಂಗಳೂರು ಪ್ರತಿ ಚರ್ಚ್ ಕ್ಯಾರೋಲ್ ಮತ್ತು ಜನಸಾಮಾನ್ಯರ ಸಂತೋಷ, ಪ್ರಾರ್ಥನೆಗಳಿಂದ ತುಂಬಿರುತ್ತದೆ.

ಸೇಂಟ್ ಮೇರಿಸ್ ಬೆಸಿಲಿಕಾ

Manjarabad Fort

ಸೇಂಟ್ ಮೇರಿಸ್ ಬೆಸಿಲಿಕಾ

ಸೇಂಟ್ ಮೇರಿಸ್ ಬೆಸಿಲಿಕಾ ಮೂಲತಃ ಪ್ರಾರ್ಥನಾ ಮಂದಿರವಾಗಿತ್ತು. 1818 ರಲ್ಲಿ ಈ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಗಿತ್ತು. ನಂತರ ಇದನ್ನು 1874 ರಲ್ಲಿ ಸುಂದರವಾದ ಗೋಥಿಕ್ ಶೈಲಿಯಲ್ಲಿ ಚರ್ಚ್ ಆಗಿ ಮಾರ್ಪಡಿಸಲಾಯಿತು, ಸೇಂಟ್ ಮೇರಿಸ್ ಬೆಸಿಲಿಕಾವು ಅದ್ಭುತವಾದ ಒಳಾಂಗಣದ ಜೊತೆಗೆ ಬಣ್ಣದ ಗಾಜಿನ ಕಿಟಕಿಗಳು ಮತ್ತು ಭವ್ಯವಾದ ಕಮಾನುಗಳನ್ನು ಹೊಂದಿದೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಚರ್ಚ್ ಅದ್ಭುತವಾದ ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದ್ದು ತಾಯಿಯನ್ನು ಆರೋಗ್ಯದ ಮಹಿಳೆ ಎಂದು ಕರೆಯಲಾಗುತ್ತದೆ. ಚರ್ಚ್‌ನ ಸುಂದರವಾದ ದೀಪ ಅಲಂಕಾರಗಳು ಕ್ರಿಸ್‌ಮಸ್ ಸಮಯದಲ್ಲಿ ಮತ್ತು ವರ್ಷವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತವೆ. ಚರ್ಚ್ ಅನ್ನು 1974 ರಲ್ಲಿ ಪೋಪ್ ಅವರು ಬೆಸಿಲಿಕಾದ ಸ್ಥಾನಮಾನವನ್ನು ನೀಡಿದರು.

ಸೇಂಟ್ ಪ್ಯಾಟ್ರಿಕ್ ಚರ್ಚ್

Manjarabad Fort
ಸೇಂಟ್ ಪ್ಯಾಟ್ರಿಕ್ಸ್ ಚರ್ಚ್ಚಿತ್ರ ಕ್ರೆಡಿಟ್‌ಗಳು : ಸೇಂಟ್ ಪ್ಯಾಟ್ರಿಕ್ ಚರ್ಚ್
ಈ ಚರ್ಚ್ ಸಹ ಪಟ್ಟಣದ ಹೃದಯಭಾಗದಲ್ಲಿದ್ದು ಜನಪ್ರಿಯ ಚರ್ಚ್ ಆಗಿದ್ದು ಇದನ್ನು 1844 ರಲ್ಲಿ ನಿರ್ಮಿಸಲಾಯಿತು ಚರ್ಚ್‌ನ ಬಳಿ ಇರುವ ಐರಿಶ್ ಪಡೆಗಳಿಂದ ಚರ್ಚ್ ಅನ್ನು ಹೆಸರಿಸಲಾಯಿತು, ಇದನ್ನು ಮೂಲತಃ ವರ್ಜಿನ್ ಮೇರಿ ಮತ್ತು ಆರ್ಚಾಂಗೆಲ್ ಮೈಕೆಲ್‌ಗೆ ಸಮರ್ಪಿಸಲಾಗಿದ್ದು ‘ಚರ್ಚ್ ಆಫ್ ದಿ ಅಸಂಪ್ಷನ್ಸ್’ ಎಂದು ಗುರುತಿಸಲಾಗಿದೆ. ಚರ್ಚ್ ಅನ್ನು 2000 ಮತ್ತು 2012 ರಲ್ಲಿ ನವೀಕರಿಸಲಾಯಿತು ಮತ್ತು ಈ ಚರ್ಚಿನಲ್ಲಿ ಐದುನೂರಕ್ಕೂ ಹೆಚ್ಚು ಜನರು ಒಂದೇ ಸಮಯದಲ್ಲಿ ಪ್ರಾರ್ಥಿಸಬಹುದಾಗಿದೆ. 2012 ರಲ್ಲಿ ಈ ಚರ್ಚ್‍ನ್ನು ತಮಿಳುನಾಡಿನ ನಾಗರಕೋಯಿಲ್‌ನ ಕುಶಲಕರ್ಮಿಗಳ ಸಹಾಯದಿಂದ ಶತಮಾನದಷ್ಟು ಹಳೆಯದನ್ನು ಅದರ ಮೂಲ ಸ್ವರೂಪಕ್ಕೆ ಹತ್ತಿರವಾಗುವಂತೆ ಸುಂದರವಾಗಿ ಪುನಃಸ್ಥಾಪಿಸಲಾಯಿತು. ನಗರದ ಅತ್ಯುತ್ತಮ ಚರ್ಚಾಗಿರುವ ಇದನ್ನು ವೀಕ್ಷಿಸುವುದೇ ಕಣ್ಣಿಗೆ ಹಬ್ಬವಾಗಿದೆ.

ಹೋಲಿ ಟ್ರಿನಿಟಿ ಚರ್ಚ್
ನೀವು ಬೆಂಗಳೂರಿಗೆ ಭೇಟಿ ನೀಡಿದಾಗ ಹೋಲಿ ಟ್ರಿನಿಟಿ ಚರ್ಚ್‍ಗೆ ಭೇಟಿ ನೀಡಲೇಬೇಕು. ಹೋಲಿ ಟ್ರಿನಿಟಿ ಚರ್ಚ್ ಅನ್ನು 1851 ರಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಬ್ರಿಟಿಷ್ ರೆಜಿಮೆಂಟ್‌ಗಾಗಿ ನಿರ್ಮಿಸಲಾಗಿದ್ದು ಇದನ್ನು ಇನ್ನೂ ದಕ್ಷಿಣ ಭಾರತದ ಅತಿದೊಡ್ಡ ಮಿಲಿಟರಿ ಚರ್ಚ್ ಎಂದು ಪರಿಗಣಿಸಲಾಗುತ್ತದೆ. ಕ್ರಿಸ್‌ಮಸ್ ಸಮಯದಲ್ಲಿ ಆಕರ್ಷಕವಾಗಿ ಹೊಳೆಯುವ ಈ ಚರ್ಚ್ ಅಲಂಕಾರವನ್ನು ನೋಡಲು ಸಾಗರೋಪಾದಿಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಇಂಗ್ಲಿಷ್ ನವೋದಯ ಶೈಲಿಯ ವಾಸ್ತುಶೈಲಿಯನ್ನು ಹೊಂದಿರುವ ಚರ್ಚ್ ಒಂದು ಸಮಯಕ್ಕೆ ಸುಮಾರು 700 ಜನರಿಗೆ ಅವಕಾಶ ಕಲ್ಪಿಸುತ್ತದೆ. ಚರ್ಚ್‌ನಲ್ಲಿ ಐತಿಹಾಸಿಕ ಪ್ರಾಮುಖ್ಯತೆಯ ಭಿತ್ತಿಚಿತ್ರಗಳು, ಪ್ರತಿಮೆಗಳು ಮತ್ತು ಕಲಾಕೃತಿಗಳನ್ನು ಪ್ರವಾಸಿಗರು ವೀಕ್ಷಿಸಬಹುದು.

ಇನಫಾಂಟ್ ಜೀಸಸ್ ಚರ್ಚ್

Manjarabad Fort
ಇನ್ಫೆಂಟ್ ಜೀಸಸ್ ಚರ್ಚ್ ಬೆಂಗಳೂರುಚಿತ್ರ ಕ್ರೆಡಿಟ್‌ಗಳು : ಇನಫಾಂಟ್ ಜೀಸಸ್ ಚರ್ಚ್
ಇನಫಾಂಟ್ ಜೀಸಸ್ ಚರ್ಚ್ ಬೆಂಗಳೂರಿನ ದೊಡ್ಡ ಚರ್ಚ್‌ಗಳಲ್ಲಿ ಒಂದಾಗಿದ್ದು ಇಲ್ಲಿ ಸುಮಾರು ಒಂದೇ ಬಾರಿಗೆ 2500 ಜನರು ಪ್ರಾರ್ಥನೆ ಮಾಡಬಹುದು. ಮತ್ತು ಇಲ್ಲಿ 10000 ಕ್ಕೂ ಹೆಚ್ಚು ಜನರು ಕ್ರಿಸ್‌ಮಸ್‌ನಲ್ಲಿ ಪವಿತ್ರ ಮಾಸ್‌ಗೆ ಹಾಜರಾಗುತ್ತಾರೆ. ಈ ಚರ್ಚ್ ತುಂಬಾ ಶಕ್ತಿಶಾಲಿ ಆಗಿದ್ದು ಇಲ್ಲಿ ಪವಾಡಗಳು ಸಂಭವಿಸುತ್ತವೆ ಎಂದು ನಂಬಲಾಗಿದೆ. ಇನ್ಫೆಂಟ್ ಜೀಸಸ್ ಚರ್ಚ್ ಅನ್ನು 1971 ರಲ್ಲಿ ಬೆಂಗಳೂರಿನ ವಿವೇಕ್ ನಗರದಲ್ಲಿ ರೋಮನ್ ಕ್ಯಾಥೋಲಿಕ್ ಶೈಲಿಯಲ್ಲಿ ಸ್ಥಾಪಿಸಲಾಯಿತು, ಚರ್ಚ್ ಅನ್ನು ಇನಫಾಂಟ್ ಜೀಸಸ್‍ಗೆ ಸಮರ್ಪಿಸಲಾಗಿದೆ. ವಿಶೇಷವಾಗಿ ಗುರುವಾರದಂದು ಇನಫಾಂಟ್ ಜೀಸಸ್ ಚರ್ಚ್‌ಗೆ ಭೇಟಿ ನೀಡುವ ಜನರ ಸಂಖ್ಯೆಯು ದೇಗುಲದ ಮೇಲಿನ ಜನರ ಭಕ್ತಿ ಮತ್ತು ಅದರ ಮಹತ್ವವನ್ನು ತೋರಿಸುತ್ತದೆ . ಕ್ರಿಸ್‌ಮಸ್ ಸಂದರ್ಭದಲ್ಲಿ ದೇಶಾದ್ಯಂತ ಪ್ರವಾಸಿಗರು ಮತ್ತು ಭಕ್ತರು ಇನ್‌ಫೆಂಟ್ ಜೀಸಸ್ ಚರ್ಚ್‌ಗೆ ಆಗಮಿಸುತ್ತಾರೆ.

ಸೇಕ್ರೆಡ್ ಹಾರ್ಟ್ ಚರ್ಚ್

Manjarabad Fort

ಸೇಕ್ರೆಡ್ ಹಾರ್ಟ್ ಚರ್ಚ್

ಪಟ್ಟಣದ ಹೃದಯಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಎಂದು ಪ್ರಸಿದ್ಧವಾಗಿರುವ ಅವರ್ ಲೇಡಿ ಆಫ್ ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಸಿದ್ಧ ಧಾರ್ಮಿಕ ಹೆಗ್ಗುರುತಾಗಿದೆ. 1896 ರಲ್ಲಿ ನಿರ್ಮಿಸಲಾದ ಈ ಚರ್ಚ್ ಗೋಥಿಕ್ ಮತ್ತು ಫ್ರೆಂಚ್ ವಾಸ್ತುಶಿಲ್ಪದ ಶೈಲಿಗಳ ಅಪರೂಪದ ಮಿಶ್ರಣವಾಗಿದ್ದು ಮಾರ್ಬಲ್ ಒಳಾಂಗಣಗಳು, ಸಂಕೀರ್ಣವಾದ ಕೆತ್ತನೆಯ ಪ್ರತಿಮೆಗಳು ಮತ್ತು ಕೊರಿಂಥಿಯನ್-ಶೈಲಿಯ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಸೊಗಸಾದ ಸ್ತಂಭಗಳೊಂದಿಗೆ ಅದ್ಭುತವಾಗಿದೆ.
ಕ್ರಿಸ್ಮಸ್ ಸಮಯದಲ್ಲಿ ಈ ಚರ್ಚ್‌ಗೆ ಭೇಟಿ ನೀಡುವುದು ಒಂದು ವಿಶೇಷವೇ ಸರಿ. ಈ ಸಮಯದಲ್ಲಿ ಚರ್ಚ್ ದೀಪಗಳು ಮತ್ತು ಸುಂದರ ಕೃತಕ ನಕ್ಷತ್ರಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿರುತ್ತದೆ. ಸುಮಧುರ ಕ್ಯಾರೋಲ್‌ಗಳು ಮತ್ತು ಸುಸಂಘಟಿತ ಮಾಸ್ ಈ ಚರ್ಚ್ ಅನ್ನು ಕರ್ನಾಟಕದ ಅತ್ಯಂತ ಜನಪ್ರಿಯ ಚರ್ಚ್‌ಗಳಲ್ಲಿ ಒಂದಾಗಿಸುತ್ತವೆ.

ಮೈಸೂರು

ಕರ್ನಾಟಕದ ಐತಿಹಾಸಿಕ ಮತ್ತು ಪಾರಂಪರಿಕ ನಗರಗಳಲ್ಲಿ ಒಂದಾದ ಮೈಸೂರು ಕೆಲವು ಅದ್ಭುತವಾದ ಮತ್ತು ಜನಪ್ರಿಯ ಚರ್ಚುಗಳನ್ನು ಸಹ ಹೊಂದಿದೆ. ಈ ಸಾಂಸ್ಕೃತಿಕ ನಗರವು ತನ್ನ ವಿಜೃಂಭಣೆಯ ಕ್ರಿಸ್ಮಸ್ ಆಚರಣೆಗೆ ಸಾಕಷ್ಟು ಪ್ರಸಿದ್ಧವಾಗಿದೆ.

ಸೇಂಟ್ ಫಿಲೋಮಿನಾ ಚರ್ಚ್

Manjarabad Fort

ಸೇಂಟ್ ಫಿಲೋಮಿನಾ ಚರ್ಚ್

ಅದ್ಭುತವಾದ ಈ ಚರ್ಚ್ ಮೈಸೂರಿನಲ್ಲಿ ಭೇಟಿ ನೀಡಲೇಬೇಕಾದ ಚರ್ಚ್‌ಗಳಲ್ಲಿ ಒಂದಾಗಿದೆ ಮತ್ತು ಅದರ ವೈಭವಕ್ಕಾಗಿ ಪ್ರತಿ ಪ್ರವಾಸಿಗರ ಪ್ರವಾಸದಲ್ಲಿ ಇದನ್ನು ಸೇರಿಸುವುದು ಅಗತ್ಯವಾಗಿದೆ. ನಿಯೋ-ಗೋಥಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ 1936 ರಲ್ಲಿ ನಿರ್ಮಿಸಲಾದ ಈ ಭವ್ಯವಾದ ಚರ್ಚ್ ಏಷ್ಯಾದ ಅತ್ಯಂತ ಎತ್ತರದ ಚರ್ಚ್‌ಗಳಲ್ಲಿ ಒಂದಾಗಿದೆ ಮತ್ತು ಏಷ್ಯಾ ಖಂಡದಲ್ಲಿ ಎರಡನೇ ಅತಿದೊಡ್ಡ ಚರ್ಚ್ ಎಂದು ಹೇಳಲಾಗುತ್ತದೆ.ಈ ಚರ್ಚ್‌ನಲ್ಲಿ ನಡೆಯುವ ಕ್ರಿಸ್ಮಸ್ ಆಚರಣೆಗಳು ವೈಭವದಿಂದ ಕೂಡಿರುತ್ತವೆ. ಇಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೀದಿ ಪ್ರದರ್ಶನಗಳು, ಲೈವ್ ಈವೆಂಟ್‌ಗಳು, ಸಾಮೂಹಿಕ ಮತ್ತು ಕ್ಯಾರೋಲ್‌ಗಳೊಂದಿಗೆ ಆಚರಿಸಲಾಗುತ್ತದೆ ಮತ್ತು ಅಲಂಕಾರಗಳು ಮತ್ತು ದೀಪಗಳು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಸೇಂಟ್ ಆಂಟನಿ ಬೆಸಿಲಿಕಾ

Manjarabad Fort
ಸೇಂಟ್ ಆಂಟನಿ ಬೆಸಿಲಿಕಾಚಿತ್ರ ಕ್ರೆಡಿಟ್‌ಗಳು : ಸೇಂಟ್ ಆಂಟನಿ ಬೆಸಿಲಿಕಾ
ಈ ಸುಂದರವಾದ ಚರ್ಚ್ ಸೇಂಟ್ ಆಂಟೋನಿಸ್ ಸಂತ ಆಂಟನಿಗೆ ಸಮರ್ಪಿತವಾಗಿದ್ದು ಕರ್ನಾಟಕದ ಪ್ರಸಿದ್ಧ ಚರ್ಚ್‌ಗಳಲ್ಲಿ ಒಂದಾಗಿದೆ. ಈ ಚರ್ಚ್ ಅದ್ಭುತ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದ್ದು ಇದು ಭಕ್ತರನ್ನು ಮಾತ್ರವಲ್ಲದೆ ಪ್ರವಾಸಿಗರನ್ನೂ ಆಕರ್ಷಿಸುತ್ತದೆ. ಚರ್ಚಿನ ಅದ್ಭುತವಾದ ದೀಪಾಲಂಕಾರವು ಹಬ್ಬದ ಋತುವಿನ ಅತ್ಯಂತ ವಿಶಿಷ್ಟ ಅನುಭವಕ್ಕಾಗಿ ಜನರನ್ನು ಆಕರ್ಷಿಸುತ್ತದೆ. ಇಲ್ಲಿ ಸ್ಟಾಲ್‍ಗಳಿದ್ದು, ಪರ್ಪೆಚುಯಲ್ ಅಡೋರೇಶನ್ ಚಾಪೆಲ್, ಜಪಮಾಲೆಗಳು, ಪವಿತ್ರ ನೀರು, ಕಡಗಗಳು, ಕೀ ಚೈನ್‌ಗಳು ಇತ್ಯಾದಿಗಳನ್ನು ಮಾರಾಟ ಮಾಡಲಾಗುತ್ತದೆ.

1920 ರಲ್ಲಿ ಒಂದು ಸಣ್ಣ ದೇಗುಲವಾಗಿ ನಿರ್ಮಿಸಲಾದ ಸೇಂಟ್ ಆಂಟೋನಿಯನ್ನು ನಂತರ 1969 ರಲ್ಲಿ ನವೀಕರಿಸಲಾಯಿತು ಮತ್ತು ಪುನಃಸ್ಥಾಪಿಸಲಾಯಿತು. ನಂತರ 2019 ರಲ್ಲಿ, ಸರ್ವಶಕ್ತನ ಆಶೀರ್ವಾದದಿಂದ, ಚರ್ಚ್‌ಗೆ ಅವರ ಪವಿತ್ರ ಪೋಪ್ ಫ್ರಾನ್ಸಿಸ್ ಅವರು ‘ಮೈನರ್ ಬೆಸಿಲಿಕಾ’ ಸ್ಥಾನಮಾನವನ್ನು ನೀಡಿದರು. ಮತ್ತು ಜೂನ್ 2020 ರಲ್ಲಿ ಮೈಸೂರಿನ ಡಾ. ಕೆ ಎ ವಿಲಿಯಂ ಬಿಷಪ್ ಅವರು ಅಧಿಕೃತವಾಗಿ ಘೋಷಿಸಿದರು. ಇದು ನಿಜಕ್ಕೂ ಭಕ್ತರಲ್ಲಿ ಸಂತೋಷದ ವಿಷಯವಾಗಿತ್ತು.

ಸೇಂಟ್ ಬಾರ್ತಲೋಮಿವ್ ಚರ್ಚ್

ಸೇಂಟ್ ಬಾರ್ತಲೋಮಿವ್ ಚರ್ಚ್ ಅನ್ನು 1832 ರಲ್ಲಿ ಮೈಸೂರು ಸಾಮ್ರಾಜ್ಯದಲ್ಲಿ ನೆಲೆಸಿದ್ದ ಈಸ್ಟ್ ಇಂಡಿಯಾ ಕಂಪನಿ ಪಡೆಗಳಿಗೆ ಮದ್ರಾಸ್ ಸರ್ಕಾರದ ವತಿಯಿಂದ ನಿರ್ಮಿಸಲಾಯಿತು. ಇದು ಕರ್ನಾಟಕ ಮತ್ತು ಭಾರತದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ. ಇಂದಿನ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕ್ರಿಸ್ತಶಕ ಮೊದಲ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನೆಂದು ಹೇಳಲಾದ ಯೇಸುಕ್ರಿಸ್ತನ 12 ಅಪೊಸ್ತಲರಲ್ಲಿ ಒಬ್ಬರಾದ ಸಂತ ಬಾರ್ತಲೋಮೆವ್ ಅವರ ಹೆಸರನ್ನು ಈ ಚರ್ಚ್‌ಗೆ ಇಡಲಾಗಿದೆ.
ಈ ಚರ್ಚ್ ತನ್ನ ಮಾರ್ಬಲ್ ಅಲ್ಟರಗೆ ಹೆಸರುವಾಸಿಯಾಗಿದೆ ಇದನ್ನು ಮೈಸೂರು ಮಹಾರಾಜ ಒಡೆಯರ್ IV ಅವರು ಉದಾರವಾಗಿ ದಾನ ಮಾಡಿದರು. ಇದರ ಬೆರಗುಗೊಳಿಸುವ ಬಣ್ಣದ ಗಾಜು ಮತ್ತು ತೇಗದ ಮರದ ಫಲಕಗಳು ಸಂದರ್ಶಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಇಲ್ಲಿ ಕ್ರಿಸ್‌ಮಸಯನ್ನು ತುಂಬಾ ಅದ್ಭುತವಾಗಿ ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ವಿವಿಧ ಲೈವ್ ವಾದ್ಯಗಳೊಂದಿಗೆ ಸುಮಧುರವಾದ ಕರೋಲ್‌ಗಳು ಮತ್ತು ಹರ್ಷಚಿತ್ತದಿಂದ ಮತ್ತು ಸಂತೋಷದಾಯಕ ವೈಬ್‌ಗಳು ನಿಮ್ಮ ಇಲ್ಲಿಯ ಭೇಟಿಯನ್ನು ಸ್ಮರಣೀಯಗೊಳಿಸುತ್ತದೆ.

ಮಂಗಳೂರು

ಮಂಗಳೂರಿನಲ್ಲಿ ಆಂಗ್ಲೋ-ಭಾರತೀಯರ ಜನಸಂಖ್ಯೆಯು ಹೆಚ್ಚಾಗಿರುವುದರಿಂದ ನಗರವು ಅನೇಕ ಸಣ್ಣ ಮತ್ತು ದೊಡ್ಡ ಚರ್ಚ್‌ಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಹೊಂದಿದೆ. ಇಲ್ಲಿ ಕ್ರಿಸ್‌ಮಸ್ ಅನ್ನು ಅತ್ಯಂತ ಸುಂದರವಾಗಿ ಮತ್ತು ಶಾಂತಿಯುತವಾಗಿ ಆಚರಿಸಲಾಗುತ್ತದೆ, ಇದು ‘ದೇವರ ಮಗನ’ ಜನ್ಮವನ್ನು ಸೂಚಿಸುತ್ತದೆ.

ಮಿಲಾಗ್ರೆಸ್ ಚರ್ಚ್ – ಚರ್ಚ್ ಆಫ್ ಅವರ್ ಲೇಡಿ ಆಫ್ ಮಿರಾಕಲ್ಸ್

Manjarabad Fort
ಮಿಲಾಗ್ರೆಸ್ ಚರ್ಚ್ ಚಿತ್ರ ಕ್ರೆಡಿಟ್‌ಗಳು :ಮಿಲಾಗ್ರೆಸ್ ಚರ್ಚ್
1680 ರಲ್ಲಿ ಬಿಷಪ್ ಥಾಮಸ್ ಡಿ ಕ್ಯಾಸ್ಟ್ರೊ ನಿರ್ಮಿಸಿದ, ಮಿಲಾಗ್ರೆಸ್ ಚರ್ಚ್ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದ್ದು, ಅವರ್ ಲೇಡಿ ಆಫ್ ಮಿರಾಕಲ್ಸ್ ಗೆ ಸಮರ್ಪಿಸಲಾಗಿದೆ. ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಈ ಚರ್ಚ್ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಚರ್ಚ್ ಆಗಿದೆ. ಇಲ್ಲಿ ಕ್ರಿಸ್ಮಸ್ ಅನ್ನು ಬಹಳ ಸಂತೋಷ, ಹರ್ಷಚಿತ್ತತೆ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಚರ್ಚ್‌ನಲ್ಲಿನ ಅದ್ಭುತ ಅಲಂಕಾರವು ಭಕ್ತರನ್ನು ಆಕರ್ಷಿಸುತ್ತದೆ.

ನಮ್ಮ ಓದುಗರಿಗೆ ಸಂತೋಷದ ಮೆರ್ರಿ ಕ್ರಿಸ್ಮಸ್ !!!!