Karnataka logo

Karnataka Tourism
GO UP
Kannada Rajyotsava 2021

ಕನ್ನಡ ರಾಜ್ಯೋತ್ಸವ – ಕರ್ನಾಟಕ ಸಂಸ್ಥಾಪನಾ ದಿನ

separator
  /  ಬ್ಲಾಗ್   /  ಕನ್ನಡ ರಾಜ್ಯೋತ್ಸವ – ಕರ್ನಾಟಕ ಸಂಸ್ಥಾಪನಾ ದಿನ
ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ – ಕರ್ನಾಟಕ ಸಂಸ್ಥಾಪನಾ ದಿನ

ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗುತ್ತದೆ. ಈ ದಿನದಂದು ನಮ್ಮ ರಾಜ್ಯವನ್ನು ರಚಿಸಲಾಯಿತು. ಹೀಗಾಗಿ, ಇದನ್ನು ಕರ್ನಾಟಕ ಸಂಸ್ಥಾಪನಾ ದಿನ ಎಂದೂ ಕರೆಯಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟಿಗೆ ಸೇರಿಸಿ ಕರ್ನಾಟಕವನ್ನು ರೂಪಿಸಿದ ದಿನ ಇದಾಗಿದೆ. ನವೆಂಬರ್ 1 ಕರ್ನಾಟಕದಲ್ಲಿ ಸಾರ್ವಜನಿಕ ರಜಾದಿನವಾಗಿದೆ.

ಕರ್ನಾಟಕ ರಚನೆಯಾದಾಗ ಅದಕ್ಕೆ ಮೈಸೂರು ಎಂದು ನಾಮಕರಣ ಮಾಡಲಾಯಿತು. ಆದಾಗ್ಯೂ, ಹೆಚ್ಚಿನ ಜನರು ಈ ಹೆಸರನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಹೀಗಾಗಿ, ಮೈಸೂರನ್ನು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

ಕನ್ನಡ ರಾಜ್ಯೋತ್ಸವದ ಅತ್ಯುತ್ತಮ ಭಾಗವೆಂದರೆ ಇದನ್ನು ರಾಜ್ಯಾದ್ಯಂತ ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ವಿವಿಧ ಧರ್ಮಗಳು ಮತ್ತು ಜಾತಿಗಳ ಜನರು ಈ ದಿನವನ್ನು ಸಾಮರಸ್ಯ, ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಾರೆ. ಈ ಸಂಭ್ರಮ ದಿನದಂದು ಬಹುತೇಕ ಜನರು ಹಳದಿ ಮತ್ತು ಕೆಂಪು ಹೊಳೆಯುವ ಉಡುಪುಗಳನ್ನು ಧರಿಸಿರುವುದನ್ನು ನೀವು ನೋಡಬಹುದು. ಈ ಸೌಂದರ್ಯ ಮತ್ತು ಉತ್ಸಾಹಭರಿತ ವಾತಾವರಣದ ಛಾಯೆಗಳು ನಿಮ್ಮ ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

ಕನ್ನಡ ರಾಜ್ಯೋತ್ಸವದ ಕೆಲವು ಪ್ರಮುಖ ಮುಖ್ಯಾಂಶಗಳೆಂದರೇ:

ಸರ್ಕಾರಿ ಮೆರವಣಿಗೆಗಳು:

ಕನ್ನಡ ರಾಜ್ಯೋತ್ಸವದ ಒಂದು ಪ್ರಮುಖ ಅಂಶವೆಂದರೆ ವರ್ಣರಂಜಿತ ಮೆರವಣಿಗೆಗಳು. ಈ ಸಮಯದಲ್ಲಿ, ಬಹುವರ್ಣದ ಭುವನೇಶ್ವರಿ ದೇವಿಯ ಚಿತ್ರವನ್ನು ಸುಂದರವಾಗಿ ಅಲಂಕರಿಸಿದ ವಾಹನದ ಮೇಲೆ ಮೆರವಣಿಗೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.ಈ ಕಾರ್ಯಕ್ರಮಗಳಲ್ಲಿ ಕಲಾವಿದರು ಡೊಳ್ಳು ಕುಣಿತ, ಕಂಸಾಳೆ ಮತ್ತು ಕೋಲಾಟ ಸೇರಿದಂತೆ ನಾಟಕ, ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುತ್ತಾರೆ. ಇದಲ್ಲದೇ, ಶಾಸ್ತ್ರೀಯ ಕರ್ನಾಟಕ ಸಂಗೀತವನ್ನು ಸಹ ಆಯೋಜಿಸಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿಗಳು:

Rajyotsava karnataka
ಈ ವಿಶೇಷ ಸಂದರ್ಭದಲ್ಲಿ, ರಾಜ್ಯ ಸರ್ಕಾರವು ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸುತ್ತದೆ. ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ ಜನರಿಗೆ ಇವುಗಳನ್ನು ನೀಡಲಾಗುತ್ತದೆ. ಈ ಗಣ್ಯ ಪ್ರಶಸ್ತಿಗಳು ಸಾಮಾನ್ಯವಾಗಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿವೆ. ರಾಜ್ಯವನ್ನು ಅಭಿವೃದ್ಧಿಪಡಿಸಲು ನಿರಂತರ ಪ್ರಯತ್ನಗಳನ್ನು ಮಾಡುವ ಮತ್ತು ಕೊಡುಗೆಗಳನ್ನು ನೀಡುವ ನಾಗರಿಕರನ್ನು ಗೌರವಿಸುವುದು ಗಮನಾರ್ಹವಾಗಿದೆ. ಧ್ವಜಾರೋಹಣದ ನಂತರ ಕ್ರಾಂತಿವೀರ ಕ್ರೀಡಾಂಗಣದಲ್ಲಿ ಇವುಗಳನ್ನು ಅರ್ಹರಿಗೆ ನೀಡಿ ಗೌರವಿಸಲಾಗುತ್ತದೆ.

ಸಾಂಸ್ಕೃತಿಕ ಹಬ್ಬಗಳು:

Cultural
ವರ್ಣರಂಜಿತ ಮತ್ತು ರೋಮಾಂಚಕ ಆಚರಣೆಗಳಿಲ್ಲದೇ ಯಾವ ಹಬ್ಬವೂ ಪೂರ್ಣವಾಗುವುದಿಲ್ಲ. ಕನ್ನಡ ರಾಜ್ಯೋತ್ಸವ ದಿನ, ಇಡೀ ರಾಜ್ಯವು ಸಕಾರಾತ್ಮಕತೆ ಮತ್ತು ವೈಭವದಿಂದ ತುಂಬಿರುತ್ತದೆ. ರಾಜ್ಯ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಕಲಾವಿದರ ಪ್ರದರ್ಶನಗಳು ಮತ್ತು ಶಾಸ್ತ್ರೀಯ ಸಂಗೀತವನ್ನು ಆಯೋಜಿಸಲಾಗಿರುತ್ತದೆ. ಈ ಕಾರ್ಯಕ್ರಮಗಳನ್ನು ಸಮುದಾಯ ಮತ್ತು ಶಾಲಾ ಮಟ್ಟದಲ್ಲಿ ಅದರ ಪ್ರಗತಿ ಮತ್ತು ಅಭಿವೃದ್ಧಿಯನ್ನು ಆಚರಿಸಲು ನಡೆಸಲಾಗುತ್ತದೆ. ನೀವು ರಾಜಕೀಯ ಕಚೇರಿಗಳು ಸೇರಿದಂತೆ ಹಲವಾರು ಸ್ಥಳಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಹಾರುವ ಧ್ವಜಗಳನ್ನು ನೋಡಬಹುದು. ಈ ಸಂದರ್ಭದಲ್ಲಿ ಕೆಲವು ಬೈಕ್ ಮೆರವಣಿಗೆಗಳನ್ನು ಯುವಕರಿಗಾಗಿ ಆಯೋಜಿಸಲಾಗುತ್ತದೆ. ಇದು ಯುವಕರಿಗೆ ತುಂಬಾ ಉತ್ಸಾಹವನ್ನು ನೀಡುತ್ತದೆ.

ಧ್ವಜಾರೋಹಣ ಸಮಾರಂಭಗಳು:

Flag karnataka
ಆಕಾಶದಲ್ಲಿ ಕೆಂಪು ಮತ್ತು ಹಳದಿ ಬಣ್ಣಗಳ ಸೌಂದರ್ಯವನ್ನು ಹರಡಿ ರಾಜ್ಯದ ಧ್ವಜಗಳನ್ನು ಎಲ್ಲೆಡೆ ಹಾರಿಸಲಾಗುತ್ತದೆ.ಇದನ್ನು ನೋಡುವುದೇ ಚಂದ. ಧ್ವಜಗಳನ್ನು ವಿವಿಧ ಸ್ಥಳಗಳಲ್ಲಿ ಹಾರಿಸಲಾಗುತ್ತದೆ, ಆದಾಗ್ಯೂ, ರಾಜ್ಯೋತ್ಸವದ ಪ್ರಮುಖ ಆಚರಣೆಯು ಬೆಂಗಳೂರಿನ ಕಂಠಿರವ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಈ ದಿನದಂದು, ರಾಜ್ಯದ ಮುಖ್ಯಮಂತ್ರಿಗಳು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಧ್ವಜಾರೋಹಣವನ್ನು ಮಾಡುತ್ತಾರೆ.

ಐತಿಹಾಸಿಕ ಮಹತ್ವದೊಂದಿಗೆ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.