Karnataka logo

Karnataka Tourism
GO UP
Image Alt

ಐಷಾರಾಮಿ ಸುವರ್ಣ ರಥದ ರೈಲು

separator
  /  ಐಷಾರಾಮಿ ಸುವರ್ಣ ರಥದ ರೈಲು

Luxury Golden Chariot Train

ಭಾರತೀಯ ರೈಲ್ವೆ ಅಂಗಸಂಸ್ಥೆ IRCTC ಮತ್ತು ಕರ್ನಾಟಕದಿಂದ, ನಿರ್ವಹಿಸಲ್ಪಡುವ ಐಷಾರಾಮಿ ಸುವರ್ಣ ರಥದ ರೈಲು ಮುಂದಿನ ವರ್ಷ ಜನವರಿ 2021 ರಿಂದ ಹೊರಡಲು ಸಜ್ಜಾಗಿದೆ. ಸರ್ವವ್ಯಾಪಿ ವ್ಯಾಧಿಯ ಸಮಯದಲ್ಲಿ ಬುಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ ಮೊದಲ ಐಷಾರಾಮಿ ರೈಲು ಇದು.

ಎಲ್ಲಾ ಪ್ರಯಾಣಗಳು ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತವೆ ಮತ್ತು ಕೊನೆಗೊಳ್ಳುತ್ತವೆ ಮತ್ತು ಇದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಅನೇಕ ಹೆಸರುವಾಸಿಯಾದಂತಹ  ಸ್ಥಳಗಳನ್ನು ಒಳಗೊಂಡಿದೆ.  IRCTC ವಿಭಿನ್ನ ಪ್ಯಾಕೇಜುಗಳನ್ನು ಪರಿಚಯಿಸಿದೆ ಅವು ಈ ಕೆಳಗಿನಂತಿವೆ;

ಕರ್ನಾಟಕ ಪ್ರವಾಸದ ಪ್ಯಾಕೇಜ್ ನ ಹೆಮ್ಮೆ:

ಈ ಪ್ಯಾಕೇಜ್ 6 ರಾತ್ರಿಗಳು / 7 ದಿನಗಳು ಮತ್ತು ಬಂಡೀಪುರ ಟೈಗರ್ ರಿಸರ್ವ್, ಮೈಸೂರು, ಚಿಕ್ಮಗಲೂರ್, ಹಂಪಿ, ಬಾದಾಮಿ, ಪಟ್ಟದಕಲ್, ಹಲೆಬೀಡು, ಗೋವಾವನ್ನು ಒಳಗೊಂಡಿದೆ.

ದಕ್ಷಿಣ ಭಾರತದ ಆಭರಣದ ಪ್ಯಾಕೇಜ್:

ಈ ಪ್ರಯಾಣವು 6 ರಾತ್ರಿಗಳು / 7 ದಿನಗಳು ಇದು ಮೈಸೂರು, ಮಹಾಬಲಿಪುರಂ, ಹಂಪಿ, ಚೆಟ್ಟಿನಾಡ್, ತಂಜಾವೂರು, ಕುಮಾರಕೋಮ್ ಮತ್ತು ಕೊಚ್ಚಿನ್ ಅನ್ನು ಒಳಗೊಂಡಿರುತ್ತದೆ.

ಕರ್ನಾಟಕ ಪ್ರವಾಸ ಪ್ಯಾಕೇಜ್ ನ ಸಂಕ್ಷಿಪ್ತ ನೋಟ:

ಈ ಪ್ಯಾಕೇಜ್ 3 ರಾತ್ರಿಗಳು / 4 ದಿನಗಳು ಮತ್ತು ಮೈಸೂರು, ಬಂಡೀಪುರ, ಹಂಪಿಯನ್ನು ಒಳಗೊಂಡಿರುತ್ತದೆ

ರೈಲಿನಲ್ಲಿ ನೀವು ಏನನ್ನು ನಿರೀಕ್ಷಿಸಬಹುದು:

18 ಕೋಚ್ ಐಷಾರಾಮಿ ರೈಲನ್ನು  ಮೃದುವಾದ  ಪೀಠೋಪಕರಣಗಳು, ನವೀಕರಿಸಿದ ಕೊಠಡಿಗಳು ಮತ್ತು ಸ್ನಾನಗೃಹಗಳು, ನೂತನ ಮಾರ್ಗಗಳು ಮತ್ತು ಹೊಚ್ಚ ಹೊಸ ಕಟ್ಲರಿಗಳೊಂದಿಗೆ ನವೀಕರಿಸಲಾಗಿದೆ. ಪ್ರತಿ ಕೋಣೆಯಲ್ಲಿ ಸ್ಮಾರ್ಟ್ TVಗಳನ್ನು WIFIನೊಂದಿಗೆ ಸ್ಟ್ರೀಮಿಂಗ್ ಸೇವೆಗಳಿಗಾಗಿ ಅಳವಡಿಸಲಾಗಿದೆ. ರೈಲು 84 ಅತಿಥಿಗಳ ಸಾಮರ್ಥ್ಯವನ್ನು ಹೊಂದಿರುವ 44 ಅತಿಥಿ ಕೊಠಡಿಗಳನ್ನು ಒಳಗೊಂಡಿದೆ. ಈ ರೈಲಿನಲ್ಲಿ ಎರಡು ರೆಸ್ಟೋರೆಂಟ್‌ಗಳು, ಒಂದು ಅಡುಗೆಮನೆ, ಒಂದೊಂದು ಕೋಚ್ ಗೆ ಬಾರ್ ಕೊಠಡಿ, ವ್ಯಾಪಾರ ಕೇಂದ್ರ, ಮಿನಿ ಜಿಮ್ ಮತ್ತು ಆಯುರ್ವೇದ ಸ್ಪಾ ಇರುತ್ತದೆ.

ಐಷಾರಾಮಿ ರೈಲಿನಲ್ಲಿ ಪ್ರವಾಸ ಮಾಡುವ ವೆಚ್ಚ:

ಅಧಿಕಾರಿಗಳು ಭಾರತೀಯ ಪ್ರಜೆಗಳಿಗೆ ಪ್ರಚಾರದ ಕೊಡುಗೆಗಳನ್ನು ಪರಿಚಯಿಸಿದ್ದಾರೆ ಅವು ಕೆಳಗಿನಂತಿವೆ;

  • ಒಬ್ಬರಿಗೆ ಪಾವತಿಸಿ ಮತ್ತು ಜೊತೆಗಾರರಿಗೆ  ಕೇವಲ 50%  ಪಾವತಿಸಿ ಅಥವಾ; 
  • ಪೂರ್ಣ ಪ್ರವಾಸಕ್ಕಾಗಿ ನೀಡಿರುವ  ದರದಲ್ಲಿ 35% ರಿಯಾಯಿತಿ ಪಡೆಯಿರಿ ಅಥವಾ;
  • ಜೊತೆ ಹಂಚಿಕೆ ಆಧಾರದ ಮೇಲೆ ಪ್ರತಿ ವ್ಯಕ್ತಿಗೆ ಕೇವಲ 59,999 ರೂಪಾಯಿಗಳಿಗೆ 2 ರಾತ್ರಿಗಳು/3 ದಿನಗಳನ್ನು ಆನಂದಿಸಿ

COVID-19 ನಿಯಮಾವಳಿಗಳು :

ನಡೆಯುತ್ತಿರುವ ಸರ್ವವ್ಯಾಪಿ  ಸಾಂಕ್ರಾಮಿಕದ ಹಿನ್ನೆಲೆಯಲ್ಲಿ , ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಲಗತ್ತಿಸಲಾದ ನಿಯಮಾವಳಿಗಳನ್ನು ಪರಿಚಯಿಸಿದ್ದಾರೆ.

https://www.irctctourism.com/newIRCTC/mobile/index.html

ಹೆಚ್ಚಿನ ವಿವರಗಳು ಮತ್ತು ಬುಕಿಂಗ್ಗಾಗಿ, https://www.goldenchariot.org/m ಗೆ ಲಾಗ್ ಇನ್ ಮಾಡಿ

Luxury Golden Chariot Train

For more details and booking, log on to   https://www.goldenchariot.org/m