Karnataka logo

Karnataka Tourism
GO UP
ಈದ್

ಈದ್

separator
  /  ಈದ್

ರಮಾದಾನ್ (ರಂಜಾನ್) ತಿಂಗಳು ಮುಗಿದ ನಂತರ ಚಂದ್ರನ ಕ್ಯಾಲೆಂಡರ್‌ನ ಮೊದಲ ದಿನದಲ್ಲಿ ಈದ್ ಉಲ್ ಫಿತರ್ ಬರುತ್ತದೆ . ಈದ್ ಉಲ್ ಫಿತರ್ ಎಂಬುದು ರಂಜಾನ್‌ನಲ್ಲಿ ಇಡೀ ತಿಂಗಳ ಉಪವಾಸದ ನಂತರ ಮುಸ್ಲಿಮರು ಆಚರಿಸುವ ಹಬ್ಬ ಮತ್ತು ಇದು ವಿಶ್ವದಾದ್ಯಂತ ಮುಸ್ಲಿಮರಿಗೆ ಹಬ್ಬದ ದಿನವನ್ನು ಸೂಚಿಸುತ್ತದೆ. ಫಿತರ್ ಎಂದರೆ ಬಡವರಿಗೆ ಮತ್ತು ಅಗತ್ಯವಿರುವವರಿಗೆ  ನಾವು ಈದ್ ಮಿಲಾದ್ ದಿನದಂದು ನೀಡುವ ದಾನ, ಏಕೆಂದರೆ ಇದರಿಂದ ಅವರು ಹಬ್ಬವನ್ನು  ಆಚರಿಸಲು ಸಾಧ್ಯವಾಗುತ್ತದೆ ಮತ್ತು ಅವರು ಹಬ್ಬದಿಂದ ಹೊರಗೆ ಉಳಿಯುವುದಿಲ್ಲ ಮತ್ತು ದುಃಖಿತರಾಗುವುದಿಲ್ಲ.

ಮುಸ್ಲಿಮರು ಪವಿತ್ರ ರಂಜಾನ್ ತಿಂಗಳಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಅಲ್ಲಾ ನ ಸ್ಮರಣೆಯಲ್ಲಿ ಉಪವಾಸ ಮಾಡುತ್ತಾರೆ. ಇದು ಸಾಮಾನ್ಯವಾಗಿ ತಮ್ಮ ದಿನನಿತ್ಯದ ಜೀವನದಲ್ಲಿ ತಿನ್ನಲು ಆಹಾರವನ್ನು ಪಡೆಯದ ಜನರ ಹೋರಾಟಗಳನ್ನು ಅರ್ಥಮಾಡಿಕೊಳ್ಳುವ ಒಂದು ಉದ್ದೇಶವಾಗಿದೆ . ಜನರು ಎಲ್ಲಾ ರೀತಿಯ ತಪ್ಪು ಕೆಲಸಗಳನ್ನು ಮತ್ತು ಚಾಡಿ ಹೇಳುವುದು , ಸುಳ್ಳು ಹೇಳುವುದು, ತಪ್ಪಿಸಬೇಕಾದ ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸುವುದು ಮತ್ತು ಜನರಿಗೆ ನೋವುಂಟು ಮಾಡುವಂತಹ ಯಾವುದೇ ಚಟುವಟಿಕೆಗಳನ್ನು ಮಾಡುವುದನ್ನು ತ್ಯಜಿಸುತ್ತಾರೆ. ಜನರು ಮಾನವೀಯತೆಯ ಬಗ್ಗೆ ಹೆಚ್ಚು ಉದಾರ ಮತ್ತು ದಯೆ ತೋರಲು ಸೂಚಿಸುತ್ತಾರೆ ಆದ್ದರಿಂದ ಅವರು ತಮ್ಮಲ್ಲಿ ಹೆಚ್ಚು ಸಹನೆ ಮತ್ತು ತಾಳ್ಮೆ ಹೊಂದಿರಬೇಕು.

ಜನರು ಈದ್ ದಿನದಂದು ಹೊಸ ಅಥವಾ ಉತ್ತಮ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಸೇವೈಯಾನ್(ಶಾವಿಗೆ ), ಬಿರಿಯಾನಿ,  ಕೂರ್ಮಾ, ಸಿಹಿತಿಂಡಿಗಳು ಮತ್ತು ಇನ್ನಿತರ ರುಚಿಯಾದ ಊಟಗಳನ್ನು ತಯಾರಿಸಿ ತಿನ್ನುತ್ತಾರೆ. ಉತ್ತಮವಾಗಿ ಕಾಣುವುದು ಮತ್ತು ಒಳ್ಳೆಯದನ್ನು ಧರಿಸುವುದು ಕೇವಲ ಒಂದು ದಿನವಲ್ಲ ಆದರೆ ಪವಿತ್ರ ರಂಜಾನ್ ತಿಂಗಳಲ್ಲಿ ನಡೆದ ಎಲ್ಲಾ ಒಳ್ಳೆಯ ಕೆಲಸಗಳನ್ನು ಅಭ್ಯಾಸ ಮಾಡುತ್ತಾರೆ. ಅಲ್ಲಾನು ನಮಗೆ ನೀಡಿರುವ ಎಲ್ಲಾ ರೀತಿಯ ಆಶೀರ್ವಾದಗಳಿಗಾಗಿ ಮತ್ತು ಆತನು ನಮಗೆ ಒದಗಿಸಿದ ಎಲ್ಲದಕ್ಕೂ ಧನ್ಯವಾದ ಹೇಳುವ ದಿನ ಈದ್ ಆಗಿರುತ್ತದೆ. ಇದು ಮಾನವಕುಲಕ್ಕೆ ಕೃತಜ್ಞರಾಗಿರಬೇಕು ಎಂದು ನಮಗೆ ಸಂದೇಶ ನೀಡುತ್ತದೆ.

ಮಕ್ಕಳು ಮತ್ತು ಕುಟುಂಬ ಸದಸ್ಯರು ಅವರಲ್ಲಿ “ಈದಿ” ಎಂದು ಕರೆಯುವ  ಹಣವನ್ನು ನೀಡುತ್ತಾರೆ . ಮುಂದಿನ ವರ್ಷವೂ ಮಕ್ಕಳು ಉಪವಾಸ ಮಾಡಲು ಪ್ರೇರೇಪಿಸಲ್ಪಡುತ್ತಾರೆ ಮತ್ತು ತಾವು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಆದರೆ ಎಂದಿಗೂ ತಮಗೆ ಬಳಿಗೆ ಮತ್ತೆ ಬರುತ್ತದೆ ಎಂದು ತಿಳಿಸುವ  ಮೂಲಕ ಹಿರಿಯರು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ.

ಈದ್ ಹಬ್ಬವನ್ನು ಕರ್ನಾಟಕದಲ್ಲಿ ಅತ್ಯಂತ ಸಂತೋಷದಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಆದಾಗ್ಯೂ ಸಾಂಕ್ರಾಮಿಕ ಪಿಡುಗಿನ ಪರಿಣಾಮದ ಹಿನ್ನೆಲೆಯಲ್ಲಿ, ಈದ ಹಬ್ಬವನ್ನು  ಆಚರಣೆ ಮಾಡಬೇಕಾಗಿದೆ .