Karnataka logo

Karnataka Tourism
GO UP
World animal day

ವಿಶ್ವ ಪ್ರಾಣಿ ದಿನಾಚರಣೆ

separator
  /  ವಿಶ್ವ ಪ್ರಾಣಿ ದಿನಾಚರಣೆ

ವಿಶ್ವ ಪ್ರಾಣಿ ದಿನಾಚರಣೆ

Tiger Couple

ವಿಶ್ವ ಪ್ರಾಣಿಗಳ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ 4 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಗುರಿ ಪ್ರಪಂಚದಾದ್ಯಂತ ಇರುವ ಪ್ರಾಣಿಗಳ ಕಲ್ಯಾಣ ಗುಣಮಟ್ಟವನ್ನು ಸುಧಾರಿಸುವುದು ಆಗಿದೆ. ಅಕ್ಟೋಬರ್ 4 ಅನ್ನು ವಿಶ್ವ ಪ್ರಾಣಿಗಳ ದಿನವೆಂದು ಆಚರಿಸಲಾಗುತ್ತದೆ ಏಕೆಂದರೆ ಇದು ಪ್ರಾಣಿಗಳ ಪೋಷಕ ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿಯ ಹಬ್ಬದ ದಿನವಾಗಿದೆ. ವಿಭಿನ್ನ ವಿವಿಧ ಉಪಕ್ರಮಗಳ ಮೂಲಕ ಪ್ರಾಣಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದರಿಂದ ಈ ದಿನವು ಅತ್ಯಂತ ಮಹತ್ವವನ್ನು ಹೊಂದಿದೆ. ಈ ದಿನದಂದು ಪ್ರಾಣಿಗಳ ರಕ್ಷಣೆಯ ಉದ್ದೇಶಕ್ಕಾಗಿ ಹಲವಾರು ಸಂಘಟನೆಗಳು, ಕಲ್ಯಾಣ ಸಂಘಗಳು ಮತ್ತು ವ್ಯಕ್ತಿಗಳು ಒಗ್ಗೂಡುತ್ತಾರೆ. ವಿಶ್ವ ಪ್ರಾಣಿ ದಿನಾಚರಣೆ ಯನ್ನು ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣದ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸಲು ಪ್ರತಿವರ್ಷ ವಿವಿಧ ವಿಷಯಗಳೊಂದಿಗೆ ಆಚರಿಸಲಾಗುತ್ತದೆ. 2021 ರ ವಿಷಯವೆಂದರೆ ‘ಅರಣ್ಯಗಳು ಮತ್ತು ಜೀವನೋಪಾಯಗಳು’.

ವಿಶ್ವದ ಬಹುತೇಕ ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಭಾರತವು ಸಹ ಈ ದಿನಾಚರಣೆಯ ಆಚರಣೆಯಲ್ಲಿ ತನ್ನ ಒಳಗೊಳ್ಳುವಿಕೆಯನ್ನು ಸಕಾರಾತ್ಮಕವಾಗಿ ತೋರಿಸಿದೆ. ಭಾರತವು ತಾನು ಹೊಂದಿರುವ ಶ್ರೀಮಂತ ವನ್ಯಜೀವಿಗಳ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಪ್ರಾಣಿಗಳ ಕಲ್ಯಾಣವನ್ನು ಬೆಂಬಲಿಸುತ್ತಿದೆ. ಕರ್ನಾಟಕವು ತನ್ನ ಮಡಿಲಲ್ಲಿ ಸಹಸ್ರಾರು ಪಶು ಪ್ರಾಣಿಗಳನ್ನು ಪೋಷಿಸುತ್ತಿದೆ. ಹೀಗಾಗಿ ಕರ್ನಾಟಕವು ವಿಶ್ವ ಪ್ರಾಣಿ ದಿನಾಚರಣೆ ಯ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಕರ್ನಾಟಕವು ಭಾರತದ ಜೀವವೈವಿಧ್ಯಗಳ ಹಾಟ್ ಸ್ಪಾಟ್ ಆಗಿದೆ. ರಾಜ್ಯವು 18 ಕ್ಕೂ ಹೆಚ್ಚು ವನ್ಯಜೀವಿ ಅಭಯಾರಣ್ಯಗಳು, 5 ರಾಷ್ಟ್ರೀಯ ಉದ್ಯಾನವನಗಳು, 5 ಮೃಗಾಲಯಗಳು ಮತ್ತು ಹಲವಾರು ಪಕ್ಷಿಧಾಮಗಳಿಗೆ ನೆಲೆಯಾಗಿದೆ. ಪ್ರತಿವರ್ಷ ಆಶ್ರಯ ತಾಣಗಳನ್ನು ತೆರೆಯುವುದು, ಪ್ರಾಣಿಗಳ ಕಲ್ಯಾಣ ಅಭಿಯಾನಗಳು ಮತ್ತು ಇತರ ನಿಧಿಸಂಗ್ರಹಣೆ ಕಾರ್ಯಕ್ರಮಗಳಂತಹ ವಿವಿಧ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತದೆ.

RAJIV GANDHI NATIONAL PARK
daroji

ಕರ್ನಾಟಕ ರಾಜ್ಯವ್ಯ್ 2021 ರ ವಿಶ್ವ ಪ್ರಾಣಿ ದಿನವನ್ನು ಆಚರಿಸಲು ನಿಮಗೆ ಅಸಂಖ್ಯಾತ ಮಾರ್ಗಗಳನ್ನು ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಈ ಉಪಕ್ರಮದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಣ್ಣ ಪ್ರಯತ್ನಗಳನ್ನು ಮಾಡಬಹುದು. ಈ ಬಗ್ಗೆ ಜಾಗೃತಿ ಮೂಡಿಸಲು ನೀವು ಅಂತಹ ಚಟುವಟಿಕೆಗಳಲ್ಲಿ ಅಥವಾ ಆನ್‌ಲೈನ್ ಚಟುವಟಿಕೆಗಳಲ್ಲಿ ಭಾಗವಾಗಬಹುದು. ಭೂಮಿಯ ಸುಸ್ಥಿರತೆಗೆ ಮೂಲ ಬೇರಾಗಿರುವ ಕಾಡುಗಳು ಮತ್ತು ವನ್ಯಜೀವಿಗಳ ಮಹತ್ವವನ್ನು ನೆನೆಪಿಸಿಕೊಳ್ಳಲು ನೀವು ರಾಜ್ಯದ ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಬಹುದು. ಕರ್ನಾಟಕದ ಕಾಡುಗಳಲ್ಲಿ ದೇಶದ 25% ಆನೆಗಳು ಮತ್ತು ೧೦% ಹುಲಿಗಳು ಕರ್ನಾಟಕದ ಕಾಡುಗಳಲ್ಲಿವೆ. ಕರ್ನಾಟಕದ ಕಾಡುಗಳು ಹಲವಾರು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಘಟಪ್ರಭಾ ವನ್ಯಜೀವಿ ಅಭಯಾರಣ್ಯ, ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯಗಳು 2021 ವಿಶ್ವ ಪ್ರಾಣಿ ದಿನದಂದು ಕರ್ನಾಟಕದಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಾಗಿವೆ. ವಿವಿಧ ಪ್ರಾಣಿ ಪ್ರಭೇದಗಳ ಬಗ್ಗೆ ಕಾಳಜಿ, ರಕ್ಷಣೆ ಮತ್ತು ಜಾಗೃತಿ ಮೂಡಿಸುವಲ್ಲಿ ನಮ್ಮ ಬೆಂಬಲವನ್ನು ನೀಡೋಣ .

Tiger Couple

ವಿಶ್ವ ಪ್ರಾಣಿಗಳ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ 4 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಗುರಿ ಪ್ರಪಂಚದಾದ್ಯಂತ ಇರುವ ಪ್ರಾಣಿಗಳ ಕಲ್ಯಾಣ ಗುಣಮಟ್ಟವನ್ನು ಸುಧಾರಿಸುವುದು ಆಗಿದೆ. ಅಕ್ಟೋಬರ್ 4 ಅನ್ನು ವಿಶ್ವ ಪ್ರಾಣಿಗಳ ದಿನವೆಂದು ಆಚರಿಸಲಾಗುತ್ತದೆ ಏಕೆಂದರೆ ಇದು ಪ್ರಾಣಿಗಳ ಪೋಷಕ ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿಯ ಹಬ್ಬದ ದಿನವಾಗಿದೆ. ವಿಭಿನ್ನ ವಿವಿಧ ಉಪಕ್ರಮಗಳ ಮೂಲಕ ಪ್ರಾಣಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದರಿಂದ ಈ ದಿನವು ಅತ್ಯಂತ ಮಹತ್ವವನ್ನು ಹೊಂದಿದೆ. ಈ ದಿನದಂದು ಪ್ರಾಣಿಗಳ ರಕ್ಷಣೆಯ ಉದ್ದೇಶಕ್ಕಾಗಿ ಹಲವಾರು ಸಂಘಟನೆಗಳು, ಕಲ್ಯಾಣ ಸಂಘಗಳು ಮತ್ತು ವ್ಯಕ್ತಿಗಳು ಒಗ್ಗೂಡುತ್ತಾರೆ. ವಿಶ್ವ ಪ್ರಾಣಿ ದಿನಾಚರಣೆಯನ್ನು ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣದ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸಲು ಪ್ರತಿವರ್ಷ ವಿವಿಧ ವಿಷಯಗಳೊಂದಿಗೆ ಆಚರಿಸಲಾಗುತ್ತದೆ. 2021 ರ ವಿಷಯವೆಂದರೆ ‘ಅರಣ್ಯಗಳು ಮತ್ತು ಜೀವನೋಪಾಯಗಳು’.

RAJIV GANDHI NATIONAL PARK

ವಿಶ್ವದ ಬಹುತೇಕ ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಭಾರತವು ಸಹ ಈ ದಿನಾಚರಣೆಯ ಆಚರಣೆಯಲ್ಲಿ ತನ್ನ ಒಳಗೊಳ್ಳುವಿಕೆಯನ್ನು ಸಕಾರಾತ್ಮಕವಾಗಿ ತೋರಿಸಿದೆ. ಭಾರತವು ತಾನು ಹೊಂದಿರುವ ಶ್ರೀಮಂತ ವನ್ಯಜೀವಿಗಳ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಪ್ರಾಣಿಗಳ ಕಲ್ಯಾಣವನ್ನು ಬೆಂಬಲಿಸುತ್ತಿದೆ. ಕರ್ನಾಟಕವು ತನ್ನ ಮಡಿಲಲ್ಲಿ ಸಹಸ್ರಾರು ಪಶು ಪ್ರಾಣಿಗಳನ್ನು ಪೋಷಿಸುತ್ತಿದೆ. ಹೀಗಾಗಿ ಕರ್ನಾಟಕವು ವಿಶ್ವ ಪ್ರಾಣಿ ದಿನಾಚರಣೆಯ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಕರ್ನಾಟಕವು ಭಾರತದ ಜೀವವೈವಿಧ್ಯಗಳ ಹಾಟ್ ಸ್ಪಾಟ್ ಆಗಿದೆ. ರಾಜ್ಯವು 18 ಕ್ಕೂ ಹೆಚ್ಚು ವನ್ಯಜೀವಿ ಅಭಯಾರಣ್ಯಗಳು, 5 ರಾಷ್ಟ್ರೀಯ ಉದ್ಯಾನವನಗಳು, 5 ಮೃಗಾಲಯಗಳು ಮತ್ತು ಹಲವಾರು ಪಕ್ಷಿಧಾಮಗಳಿಗೆ ನೆಲೆಯಾಗಿದೆ. ಪ್ರತಿವರ್ಷ ಆಶ್ರಯ ತಾಣಗಳನ್ನು ತೆರೆಯುವುದು, ಪ್ರಾಣಿಗಳ ಕಲ್ಯಾಣ ಅಭಿಯಾನಗಳು ಮತ್ತು ಇತರ ನಿಧಿಸಂಗ್ರಹಣೆ ಕಾರ್ಯಕ್ರಮಗಳಂತಹ ವಿವಿಧ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತದೆ.