GO UP
Image Alt

ಬೆಂಗಳೂರಿನಲ್ಲಿ ವಿಸ್ಟಾಡೋಮ್ ಕೋಚ್ – ಮಂಗಳೂರು ರೈಲು

separator
  /  ಬೆಂಗಳೂರಿನಲ್ಲಿ ವಿಸ್ಟಾಡೋಮ್ ಕೋಚ್ – ಮಂಗಳೂರು ರೈಲು
Vistadome Train Side View

ಭಾರತೀಯ ರೈಲ್ವೇಯು ಜುಲೈ 7, 2021 ರಂದು ಮಂಗಳೂರು-ಬೆಂಗಳೂರು ರೈಲಿನಲ್ಲಿ ವಿಶೇಷ ವಿಸ್ಟಾಡೋಮ್ (ಗ್ಲಾಸ್ ಟಾಪ್) ಕೋಚ್ ಅನ್ನು ಆರಂಭಿಸಿದೆ. ಈ ರೈಲು ಮೋಡಿಮಾಡುವ ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುತ್ತದೆ. ಈ 45 ಕಿಲೋಮೀಟರ್ ಪ್ರಯಾಣವನ್ನು ನಂಬಲಾಗದಷ್ಟು ಆಕರ್ಷಕವಾಗಿದ್ದು ಇದು ಸುಳ್ಯ ತಾಲೂಕಿನ ನೆಟ್ಟಣದಲ್ಲಿ ಆರಂಭವಾಗಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕೊನೆಗೊಳ್ಳುತ್ತದೆ.

ಆರಾಮದಾಯಕ ಪ್ರಯಾಣಕ್ಕಾಗಿ ಇದು 40 ಒರಗಿಕೊಳ್ಳುವ ಮತ್ತು ತಿರುಗುವ ಆಸನಗಳನ್ನು ಹೊಂದಿದ್ದು ಬುಕಿಂಗ್ ಅನ್ನು ಭಾರತೀಯ ರೈಲ್ವೆ ಪೋರ್ಟಲ್ www.irctc.co.in ನಲ್ಲಿ ಮಾಡಬಹುದು. ಭಾರತೀಯ ರೈಲ್ವೆಯ ಶತಾಬ್ದಿಯ ಎಕ್ಸಿಕ್ಯೂಟಿವ್ ಕ್ಲಾಸ್ ದರವನ್ನು ಹೋಲುತ್ತದೆ.

ರೈಲ್ವೆ ಕೋಚ್ನ ಸಾಂಪ್ರದಾಯಿಕ ರಚನೆಯಿಂದಾಗಿ ಮಂಗಳೂರು-ಬೆಂಗಳೂರು ರಮಣೀಯ ಮಾರ್ಗವನ್ನು ಪ್ರಯಾಣಿಕರಿಗೆ ಹೆಚ್ಚು ಕಣ್ತುಂಬಿಕೊಳ್ಳಲಾಗಲಿಲ್ಲ. ಆದರೆ ಇನ್ನು ಮುಂದೆ ಚಿಂತೆ ಬೇಡ.. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಕಾರವಾರ-ಯಶವಂತಪುರ ನಡುವೆ ಈ ವಿಸ್ಟಾಡೋಮ್ ಕೋಚ್ ಸೇರ್ಪಡೆಗೊಳಿಸಲಾಗಿದ್ದು ಈ ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯವನ್ನು ಪ್ರಯಾಣಿಕರು ಕಣ್ತುಂಬಿಕೊಳ್ಳಲು ರೈಲು ಸಿರಿಬಾಗಿಲುನಲ್ಲಿ 10 ನಿಮಿಷಗಳ ಕಾಲ ನಿಲ್ಲುತ್ತದೆ. ಈ ನಿಲ್ದಾಣವು ಬ್ರಹ್ಮಗಿರಿ ಶ್ರೇಣಿಯ ಮೇಲ್ಭಾಗದಲ್ಲಿದ್ದು ಪಶ್ಚಿಮ ಘಟ್ಟಗಳ 180-ಡಿಗ್ರಿ ಸುಂದರವಾದ ವಿಹಂಗಮ ನೋಟವನ್ನು ನೀಡುತ್ತದೆ.

ವಿಸ್ಟಾಡೋಮ್ ಕೋಚ್ನಲ್ಲಿ ಪಯಣಿಸುವುದು ಒಂದು ಅದ್ಭುತ ಅನುಭವವೇ ಸರಿ. ಇದು ಪ್ರಯಾಣಿಕರಿಗೆ ಪ್ರಕೃತಿಯೊಂದಿಗೆ ನಿಕಟವಾಗಿರಲು ಮತ್ತು ಪ್ರಯಾಣಿಸುತ್ತಿರುವಾಗ ವೈಭವದಿಂದ ತುಂಬಿದ ನೈಸರ್ಗಿಕ ಅದ್ಭುತಗಳನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತದೆ. ದೊಡ್ಡ ಗಾಜಿನ ಕಿಟಕಿಗಳು, ಮೇಲ್ಛಾವಣಿ ಫಲಕಗಳು ಮತ್ತು 180 ಡಿಗ್ರಿಯಷ್ಟು ತಿರುಗುವ ಕುರ್ಚಿಗಳನ್ನು ಹೊಂದಿರುವ ಈ ಐಷಾರಾಮಿ ಕೋಚ್ ನೀವು ಪ್ರಕೃತಿಯನ್ನು ಆನಂದಿಸಲು ಅದ್ಭುತ ಅವಕಾಶವನ್ನು ನೀಡುತ್ತದೆ.

Vistadome Train
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
  1. ವಿಸ್ಟಾಡೋಮ್ ಗೆ ಟಿಕೇಟ್ ಬುಕ್ ಮಾಡುವುದು ಹೇಗೆ?

ವಿಸ್ಟಾಡೋಮ್ ಟಿಕೆಟ್ ಬುಕ್ಕಿಂಗ್ ಅನ್ನು ಆನ್ಲೈನ್ www.irctc.co.in ನಲ್ಲಿ ಮಾಡಬಹುದು. ವಿಸ್ಟಾಡೋಮ್ ಎಂದು ಪ್ರತ್ಯೇಕ ವರ್ಗವಿಲ್ಲ, ನೀವು ಇಸಿಸಿ (ಎಕ್ಸಿಕ್ಯೂಟಿವ್ ಚೇರ್ ಕಾರ್) ವಿಭಾಗದಲ್ಲಿ ಟಿಕೆಟ್ ಕಾಯ್ದಿರಿಸಬೇಕು.

  1. ರೈಲು ಸಂಖ್ಯೆ ಮತ್ತು ದರ ಎಷ್ಟು?

ಬೆಂಗಳೂರಿನಿಂದ ಮಂಗಳೂರಿಗೆ, ಕಾರವಾರದವರೆಗೆ ಹಲವು ರೈಲುಗಳಿವೆ. ಇ ಸಿ ಎಸ್ ಕ್ಯಾಟಗರಿ ವರ್ಗದ ರೈಲುಗಳು ಮಾತ್ರ ವಿಸ್ಟಾಡೋಮ್ ಕೋಚ್ಗಳನ್ನು ಹೊಂದಿವೆ. ಈ ರೈಲುಗಳು ಬೆಂಗಳೂರಿನ ಮುಖ್ಯ ನಿಲ್ದಾಣದಿಂದ ಪ್ರಾರಂಭವಾಗುವುದಿಲ್ಲ, ಇದು ಯಶವಂತಪುರ ನಿಲ್ದಾಣದಿಂದ ಪ್ರಾರಂಭವಾಗುತ್ತದೆ. ಕಾರವಾರ ಎಕ್ಸ್ಪ್ರೆಸ್ ಸಂಖ್ಯೆ 16515 ರೈಲು ಯಶವಂತಪುರದಿಂದ ಮಂಗಳೂರಿಗೆ ಮತ್ತು ಮಂಗಳೂರು ಯಶವಂತಪುರ ಎಕ್ಸ್ಪ್ರೆಸ್ ಸಂಖ್ಯೆ 16576 ಮಂಗಳೂರಿನಿಂದ ಯಶವಂತಪುರಕ್ಕೆ ಪಯಣಿಸುತ್ತದೆ. ಪ್ರಸ್ತುತ ಏಕಮುಖದ ಪೂರ್ಣ ದರವು ರೂ 1525 ಆಗಿದೆ (22.03.2022 ರಂತೆ). ಹಿರಿಯ ನಾಗರಿಕರ ರಿಯಾಯಿತಿಯು ಇದಕ್ಕೆ ಅನ್ವಯಿಸುವುದಿಲ್ಲ

  1. ಕೋಚ್ ನಲ್ಲಿ ಎಷ್ಟು ಸೀಟುಗಳಿವೆ?

ಇಲ್ಲಿ 44 ಆಸನಗಳಿದ್ದು ಇದು 180 ಡಿಗ್ರಿಯಷ್ಟು ತಿರುಗುತ್ತದೆ, ಇದು ನಿಮಗೆ ರಮಣೀಯ ಪ್ರಯಾಣದ ಪರಿಪೂರ್ಣ ನೋಟವನ್ನು ನೀಡುತ್ತದೆ. ಪ್ರತಿ ಆಸನವು ಹಿಂದಿನ ಪಾಕೆಟ್, ಕಪ್ ಹೋಲ್ಡರ್, ಮಡಿಸಬಹುದಾದ ಟ್ರೇ, ಆರ್ಮ್ರೆಸ್ಟ್ ಮತ್ತು ಪುಶ್-ಬಟನ್ ರಿಕ್ಲೈನರ್ನೊಂದಿಗೆ ಬರುತ್ತದೆ. ಜೊತೆಗೆ ಲ್ಯಾಪ್ಟಾಪ್ಗಳಲ್ಲಿ ಮತ್ತು ಮೊಬೈಲ್ ಫೋನ್ಗಳಲ್ಲಿ ಕೆಲಸ ಮಾಡುವ ಜನರ ಅನುಕೂಲಕ್ಕಾಗಿ ಪ್ರತಿಯೊಂದು ಆಸನವು ವೈಯಕ್ತಿಕ ಚಾರ್ಜಿಂಗ್ ಸಾಕೆಟ್ಗಳನ್ನು ಹೊಂದಿದೆ. ದೃಷ್ಟಿಹೀನ ಪ್ರಯಾಣಿಕರಿಗಾಗಿ ಆಸನ ಸಂಖ್ಯೆಗಳನ್ನು ಬ್ರೈಲ್ ಲಿಪಿಯಲ್ಲಿ ಬರೆಯಲಾಗಿದೆ. ಇದರಿಂದ ದೃಷ್ಟಿಹೀನ ಪ್ರಯಾಣಿಕರಿಗಾಗಿ ಸಹಾಯವಾಗುತ್ತದೆ.

  1. ನನ್ನ ಸಾಮಾನುಗಳನ್ನು ನನ್ನ ಹತ್ತಿರ ಕೋಚ್ನಲ್ಲಿ ಸಂಗ್ರಹಿಟ್ಟುಕೊಳ್ಳಬಹುದೇ?

ಇಲ್ಲ. ಬಾಗಿಲಿನ ಬಳಿ ಎರಡೂ ಬದಿಯಲ್ಲಿ ಕೋಚ್ನ ಕೊನೆಯಲ್ಲಿ ಪ್ರತ್ಯೇಕ ಲಗೇಜ್ ವಿಭಾಗ/ರ್ಯಾಕ್ ಇದೆ. ಓವರ್ಹೆಡ್ ಲಗೇಜ್ ಸ್ಥಳವಿಲ್ಲ.

  1. ಶತಾಬ್ದಿ ಎಕ್ಸ್ಪ್ರೆಸ್ ಅಥವಾ ಇತರ ಯಾವುದೇ ಪ್ರೀಮಿಯಂ ರೈಲುಗಳಂತಹ ರೈಲುಗಳಲ್ಲಿ ನಮಗೆ ಆಹಾರ ಸಿಗುತ್ತದೆಯೇ?

ಇಲ್ಲ. ರೈಲಿನಲ್ಲಿ ನಿಮಗೆ ಆಹಾರ ಲಭ್ಯವಾಗುವುದಿಲ್ಲ. ಬದಲಿಗೆ ಆಹಾರ ಮಾರಾಟಗಾರರು ಮಧ್ಯೆ ಮಧ್ಯೆ ಆಹಾರ ಮಾರಾಟ ಮಾಡುತ್ತಾರೆ.ನೀವು ಪಾವತಿಸಿ ಆಹಾರ ಪಡೆಯಬೇಕು. ನಿಮಗೆ ಈ ಸಮಯದಲ್ಲಿ ನೂಡಲ್ಸ್, ಪಲಾವ, ಬಿಸ್ಕತ್ತು, ಬ್ರೆಡ್ಡಿನಂತಹ ಆಹಾರಗಳು ಸಿಗುತ್ತವೆ.ಬೆಂಗಳೂರು-ಮಂಗಳೂರು ರೈಲು ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುತ್ತದೆ . ಸಕಲೇಶಪುರದಿಂದ ಸುಬ್ರಹ್ಮಣ್ಯ ಘಾಟ್ವರೆಗಿನ 45 ಕಿ.ಮೀ ಉದ್ದವು ಈ ಪ್ರಯಾಣದ ಪ್ರಮುಖ ಅಂಶವಾಗಿದೆ. ವಿಸ್ಟಾಡೋಮ್ ಕೋಚ್ನ ಕೊನೆಯಲ್ಲಿ ಇರಿಸಲಾಗಿರುವ ವಿಶೇಷ ವೀಕ್ಷಣಾ ಡೆಕ್ನಿಂದ ನೀವು ಪ್ರಕೃತಿಯ ಅದ್ಭುತವಾದ ನೋಟಗಳನ್ನು ನೋಡಬಹುದು.