Karnataka logo

Karnataka Tourism
GO UP

ಬೆಂಗಳೂರು ಅರಮನೆ

separator
ಕೆಳಗೆ ಸ್ಕ್ರಾಲ್ ಮಾಡಿ

ಬೆಂಗಳೂರು ಅರಮನೆ

ಬೆಂಗಳೂರು ಅರಮನೆ ಬೆಂಗಳೂರಿನ ಹಿಂದಿನ ರಾಜ ನಿವಾಸವಾಗಿದ್ದು, ಈಗ ಪ್ರವಾಸಿ ಆಕರ್ಷಣೆ ಮತ್ತು ಸಭಾಂಗಣ ವಾಗಿದೆ.  ಬೆಂಗಳೂರಿನಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತಿದ್ದ ಮೈಸೂರಿನ ಯುವ ಮಹಾರಾಜ, 10 ನೇ ಚಾಮರಾಜೇಂದ್ರ ಒಡೆಯರ್ ಅವರ ನಿವಾಸವಾಗಿ 1878ರಲ್ಲಿ ಬೆಂಗಳೂರು ಅರಮನೆಯನ್ನು ನಿರ್ಮಿಸಲಾಯಿತು.

ಬೆಂಗಳೂರು ಅರಮನೆಯ ಪ್ರಮುಖ ಲಕ್ಷಣಗಳು

  • ಬೃಹತ್ 454 ಎಕರೆ ಜಾಗದ ಆವರಣ, ಇದರಲ್ಲಿ ಅರಮನೆಯ ವಿಸ್ತೀರ್ಣ ಒಂದು ಎಕರೆ (45000 ಚದರ ಅಡಿ)
  • 34 ಮಲಗುವ ಕೋಣೆಗಳು ಮತ್ತು ಈಜುಕೊಳ. 
  • ಕೋಟೆಯ ಗಡಿಯಾರ ಗೋಪುರಗಳು. 
  • ಮರದ ಕೆತ್ತನೆಗಳು, ವರ್ಣಚಿತ್ರಗಳು ಮತ್ತು ಚಿತ್ತಾರಗಳೊಂದಿಗೆ ಅಲಂಕಾರಗೊಂಡ ಸೊಗಸಾದ ಒಳಾಂಗಣ. 
  • ಅರಮನೆಯ ಹೊರಗಿನ ಗೋಡೆಯ ಮೇಲೆ ಹಬ್ಬಿರುವ ಹಸಿರು ಬಳ್ಳಿಗಳು ಕಟ್ಟಡಕ್ಕೆ ಸುಂದರ ನೋಟ ನೀಡಿವೆ. 
  • ಮರದ ಫ್ಯಾನ್ ಮತ್ತು ಆಮದು ಮಾಡಿದ ಕಲಾಕೃತಿಗಳು

ಸಮಯ: ಬೆಂಗಳೂರು ಅರಮನೆಯು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಖಾಸಗಿ ಕಾರ್ಯಕ್ರಮಗಳಿಗಾಗಿ ಬೆಂಗಳೂರು ಅರಮನೆಯನ್ನು ಕಾಯ್ದಿರಿಸಿದ ದಿನಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಬಹುದು.

ಹತ್ತಿರ: ಕಬ್ಬನ್ ಪಾರ್ಕ್ (4.5 ಕಿ.ಮೀ) ಮತ್ತು ಸ್ಯಾಂಕಿ ಟ್ಯಾಂಕ್ (3.8 ಕಿ.ಮೀ) ಬೆಂಗಳೂರು ಅರಮನೆಗೆ ಹತ್ತಿರದಲ್ಲಿದೆ.

ಬೆಂಗಳೂರು ಅರಮನೆಯನ್ನು ತಲುಪುವುದು ಹೇಗೆ?

ಬೆಂಗಳೂರು ಅರಮನೆಯು ಬೆಂಗಳೂರು ನಗರ ಕೇಂದ್ರದಿಂದ (ಮೆಜೆಸ್ಟಿಕ್) ಉತ್ತರಕ್ಕೆ 5.3 ಕಿ.ಮೀ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 33 ಕಿ.ಮೀ ದೂರದಲ್ಲಿದೆ. ಬೆಂಗಳೂರು ಕಂಟೋನ್ಮೆಂಟ್ ಹತ್ತಿರದ ರೈಲು ನಿಲ್ದಾಣವಾಗಿದೆ (3 ಕಿ.ಮೀ). ಮಂತ್ರಿ ಮಾಲ್ ಮಲ್ಲೇಶ್ವರಂ ಹತ್ತಿರದ ಮೆಟ್ರೋ (4 ಕಿ.ಮೀ) ನಿಲ್ದಾಣವಾಗಿದೆ. ಬೆಂಗಳೂರಿನ ಎಲ್ಲಾ ಭಾಗಗಳಿಂದ ಸಾರ್ವಜನಿಕ ಸಾರಿಗೆ ಅಥವಾ ಟ್ಯಾಕ್ಸಿ ಬಳಸಿ ಬೆಂಗಳೂರು ಅರಮನೆಯನ್ನು ತಲುಪಬಹುದು.

ವಸತಿ: ವಿಂಡ್ಸರ್ ಮ್ಯಾನರ್ ಶೆರಟನ್ & ಟವರ್ಸ್ (ಬೆಂಗಳೂರು ಅರಮನೆಯಿಂದ 2.2 ಕಿ.ಮೀ), ಲಲಿತ್ ಅಶೋಕ್ ಬೆಂಗಳೂರು (2.5 ಕಿ.ಮೀ) ಬೆಂಗಳೂರು ಅರಮನೆಯ ಸಮೀಪದಲ್ಲಿರುವ ಎರಡು ಐಷಾರಾಮಿ ಹೋಟೆಲ್ಗಳಾಗಿವೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ

Tour Location

Leave a Reply

Accommodation
Meals
Overall
Transport
Value for Money