Karnataka logo

Karnataka Tourism
GO UP

ಕಬ್ಬನ್ ಪಾರ್ಕ್

separator
ಕೆಳಗೆ ಸ್ಕ್ರಾಲ್ ಮಾಡಿ

ಬಿಡುವಿಲ್ಲದ ವಾಣಿಜ್ಯ ಕೇಂದ್ರದ ಮಧ್ಯದಲ್ಲಿ 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಬ್ಬನ್ ಪಾರ್ಕ್ ಬೆಂಗಳೂರು ನಗರದ ಶ್ವಾಸಕೋಶ ಎಂದೆನಿಸಿದ್ದು, ತಾಜಾ ಗಾಳಿ ಮತ್ತು ಹಚ್ಚ ಹಸಿರು ಹೊದಿಕೆಯನ್ನು ಒದಗಿಸುತ್ತದೆ. ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಮತ್ತು ನಮ್ಮನ್ನು ತಾಜಾಗೊಳಿಸಲು ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ನಗರದ ಎರಡು ಅತ್ಯುತ್ತಮ ಸ್ಥಳಗಳಾಗಿವೆ,

ಶೇಷಾದ್ರಿ ಅಯ್ಯರ್ ಮೆಮೊರಿಯಲ್ ಹಾಲ್:

ಶೇಷಾದ್ರಿ ಅಯ್ಯರ್ ಮೆಮೊರಿಯಲ್ ಹಾಲ್‌ನಲ್ಲಿ ಕಬ್ಬನ್  ಪಾರ್ಕ್ ಕೇಂದ್ರ ಗ್ರಂಥಾಲಯವನ್ನು ಹೊಂದಿದೆ. ಈ ಲೈಬ್ರರಿಯು ಸೋಮವಾರ, ಸಾರ್ವಜನಿಕ ರಜಾದಿನಗಳು ಮತ್ತು ತಿಂಗಳ ಎರಡನೇ ಮಂಗಳವಾರವನ್ನು ಹೊರತುಪಡಿಸಿ ಬೆಳಗ್ಗೆ 8.30 ರಿಂದ ಸಂಜೆ 7.30 ರವರೆಗೆ ತೆರೆದಿರುತ್ತದೆ.

ಮಕ್ಕಳ ಆಟವಾಡುವ ಸ್ಥಳ ಮತ್ತು ಆಟಿಕೆ ಟ್ರೈನ್:

ಜವಹರಲಾಲ್ ಬಾಲ್ ಭವನದ ಒಳಗಡೆ ಆಟಿಕೆ ರೈಲಿನ ಸವಾರಿಯು ಮಕ್ಕಳಿಗೆ ಜನಪ್ರಿಯ ಆಕರ್ಷಣೆಯಾಗಿದೆ.

ಅಕ್ವೇರಿಯಮ್: ಸರಕಾರಿ ಅಕ್ವೇರಿಯಮ್‌ನಲ್ಲಿ ಪ್ರವಾಸಿಗರು 3 ಕ್ಕೂ ಹೆಚ್ಚು ಮಹಡಿಗಳಲ್ಲಿ ಪ್ರದರ್ಶನದಲ್ಲಿರುವ ಜಲಚರಗಳನ್ನು ನೋಡಬಹುದು. ಸೋಮವಾರ ಮತ್ತು ಪರ್ಯಾಯ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ಕಬ್ಬನ್ ಪಾರ್ಕ್‌ಗೆ ಪ್ರವೇಶ ಶುಲ್ಕ: ಕಬ್ಬನ್ ಪಾರ್ಕ್‌ಗೆ ಪ್ರವೇಶ ಶುಲ್ ಉಚಿತವಾಗಿದೆ.

ಕಬ್ಬನ್ ಪಾರ್ಕ್‌ ಸಮೀಪವಿರುವ ಸ್ಥಳಗಳು:

ವಿಧಾನ ಸೌಧ, ಕರ್ನಾಟಕ ಹೈಕೋರ್ಟ್, ಫ್ರೀಡಮ್ ಪಾರ್ಕ್, ಕ್ರಾಂತಿವೀರ ಒಳಾಂಗಣ ಸ್ಟೇಡಿಯಮ್ ಮತ್ತು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಮ್ ಕಬ್ಬನ್  ಪಾರ್ಕ್‌ನಿಂದ ಕೆಲವೇ ಕೆಲವು ಕಿಮೀಗಳ ಒಳಗಿವೆ.

ಕಬ್ಬನ್ ಪಾರ್ಕ್ ಅನ್ನು ತಲುಪುವುದು ಹೇಗೆ:

ಬೆಂಗಳೂರು ಮೆಟ್ರೊ (ಬಿಎಮ್‌ಆರ್‌ಸಿಎಲ್), ಬಸ್ ಅಥವಾ ಟ್ಯಾಕ್ಸಿಯನ್ನು ಬಳಸಿಕೊಂಡು ಬೆಂಗಳೂರು ನಗರದ ಯಾವುದೇ ಭಾಗದಿಂದ ಕಬ್ಬನ್  ಪಾರ್ಕ್ ಅನ್ನು ತಲುಪಬಹುದು. ಕಬ್ಬನ್  ಪಾರ್ಕ್ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 3 ಕಿಮೀ ಅಂತರದಲ್ಲಿದೆ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ 35 ಕಿಮೀಗಳ ಅಂತರದಲ್ಲಿದೆ. ಟ್ರಾಪಿಕ್ ನಿರ್ಬಂಧಗಳು ಕಾಲ ಕಾಲಕ್ಕೆ ಅನ್ವಯವಾಗಬಹುದು.

Tour Location